ಕಬಿನಿ ದಮ್ಮನಕಟ್ಟೆ ವನ್ಯಜೀವಿಧಾಮದಲ್ಲಿ 4 ಹುಲಿಗಳ ಸ್ವಚ್ಛಂದ ಓಡಾಟ ಪ್ರವಾಸಿಗರ ಕೆಮೆರಾದಲ್ಲಿ ಸೆರೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 19, 2022 | 12:08 PM

ಶನಿವಾರ ಬೆಳಗ್ಗೆ ವನ್ಯಧಾಮದಲ್ಲಿ ಸಫಾರಿ ಹೋದವರಿಗೆ ಒಂದಲ್ಲ ನಾಲ್ಕು ಹುಲಿಗಳು ಕಾಣಿಸಿವೆ. ಹುಲಿಗಳು ಸಚ್ಛಂದವಾಗಿ ಓಡಾಡುತ್ತಿರುವುದನ್ನು ಪ್ರವಾಸಿಯೊಬ್ಬರು ತಮ್ಮ ಕೆಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಮೈಸೂರು: ವನ್ಯಜೀವಿಗಳು ತಮ್ಮ ನೈಸರ್ಗಿಕ ತಾಣಗಳಲ್ಲಿ ನಿರ್ಭಿಡೆಯಿಂದ ಓಡಾಡುವುದನ್ನು ನೋಡುವುದೇ ಒಂದು ಖುಷಿ ಮಾರಾಯ್ರೇ. ಮೈಸೂರು ಜಿಲ್ಲೆಯಲ್ಲಿರುವ ಕಬಿನಿ ದಮ್ಮನಕಟ್ಟೆ ವನ್ಯಜೀವಿಧಾಮದಲ್ಲಿ (Dammankatte Wildlife Sanctuary) ಸಫಾರಿಗೆ ಅಂತ ತೆರಳಿದವರಿಗೆ ಹುಲಿಗಳು (tigers) ಕಾಣಿಸಿಕೊಳ್ಳುವುದು ಸಾಮಾನ್ಯ ದೃಶ್ಯವಾಗಿದೆ. ಶನಿವಾರ ಬೆಳಗ್ಗೆ ವನ್ಯಧಾಮದಲ್ಲಿ ಸಫಾರಿ ಹೋದವರಿಗೆ ಒಂದಲ್ಲ ನಾಲ್ಕು ಹುಲಿಗಳು ಕಾಣಿಸಿವೆ. ಹುಲಿಗಳು ಸಚ್ಛಂದವಾಗಿ ಓಡಾಡುತ್ತಿರುವುದನ್ನು ಪ್ರವಾಸಿಯೊಬ್ಬರು (tourist) ತಮ್ಮ ಕೆಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ನೀವೂ ನೋಡಿ ಆನಂದಿಸಿ.

ಮತ್ತಷ್ಟು ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ