ಮಾರಿಷಸ್‌ನಲ್ಲಿ ಭೋಜ್‌ಪುರಿ ಹಾಡಿನ ಸ್ವಾಗತಕ್ಕೆ ಪ್ರಧಾನಿ ಮೋದಿ ಫಿದಾ!
ಎರಡು ದಿನಗಳ ಮಾರಿಷಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಲ್ಲಿನ ಭಾರತೀಯ ಸಮುದಾಯದವರು ಅದ್ದೂರಿಯಾಗಿ ಸ್ವಾಗತಿಸಿದರು. ಬಿಹಾರಿ ಸಂಪ್ರದಾಯದ ಭೋಜ್‌ಪುರಿ ಹಾಡು ಹಾಡುವ ಮೂಲಕ ಮೋದಿ ಅವರನ್ನು ಸ್ವಾಗತಿಸಲಾಯಿತು. ಪ್ರಧಾನಿ ಕೂಡ ಇದರಿಂದ ಬಹಳ ಖುಷಿಯಾದರು. ಭೋಜ್‌ಪುರಿ ಹಾಡಿಗೆ ಮೋದಿ ತಲೆದೂಗಿದ ವಿಡಿಯೋ ಇಲ್ಲಿದೆ ನೋಡಿ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಮಾರಿಷಸ್‌ನಲ್ಲಿ ಬಿಹಾರಿ ಸಾಂಪ್ರದಾಯಿಕ ಗೀತ್ ಗವಾಯಿಯೊಂದಿಗೆ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ, ಹಾಡುಗಳನ್ನು ಹಾಡುತ್ತಿರುವವರೊಂದಿಗೆ ಪ್ರಧಾನಿ ಮೋದಿ ಚಪ್ಪಾಳೆ ತಟ್ಟುತ್ತಾ ಆನಂದಿಸಿದರು. ಗೀತ್ ಗವಾಯಿ ಒಂದು ಸಾಂಪ್ರದಾಯಿಕ ಭೋಜ್‌ಪುರಿ ಸಂಗೀತ ಮೇಳವಾಗಿದೆ.