ಮತ ಎಣಿಕೆ ದಿನ ತಿರುಪತಿಯಲ್ಲಿ ತ್ರಿಷಾ; ವಿಜಯ್ಗೋಸ್ಕರ ವಿಶೇಷ ಪೂಜೆ?
ತ್ರಿಷಾ ಹಾಗೂ ವಿಜಯ್ ಮಧ್ಯೆ ಏನೋ ಇದೆ ಎಂಬ ಸುದ್ದಿ ಹರಿದಾಡುತ್ತಿರುವುದು ಇಂದು ನಿನ್ನೆಯಿಂದ ಅಲ್ಲ. ಈಗ ವಿಜಯ್ ಹಾಗೂ ಸಂಗೀತಾ ವಿಚ್ಛೇದನ ಪಡೆಯುತ್ತಿರುವ ವಿಷಯ ಮತ್ತಷ್ಟು ಚರ್ಚೆಗೆ ಕಾರಣ ಆಗಿದೆ. ಹೀಗಿರುವಾಗಲೇ ಚುನಾವಣಾ ಫಲಿತಾಂಶದ ದಿನ ತ್ರಿಷಾ ಅವರು ವಿಶೇಷ ಪೂಜೆ ಮಾಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಆ ಬಗ್ಗೆ ಇಲ್ಲಿದೆ ವಿವರ.
ದಳಪತಿ ವಿಜಯ್ಗೆ ಇಂದು (ಮೇ 4) ಪ್ರಮುಖ ದಿನ. ಏಕೆಂದರೆ, ಇಂದು ತಮಿಳುನಾಡು ಚುನಾವಣೆಯ ಫಲಿತಾಂಶ ಹೊರಬೀಳುತ್ತಿದೆ. ವಿಜಯ್ ಅವರು ಟಿವಿಕೆ ಪಕ್ಷದ ಮೂಲಕ ಚುನಾವಣೆ ಸ್ಪರ್ಧಿಸಿದ್ದಾರೆ. ಮತ ಎಣಿಕೆ ಆರಂಭಕ್ಕೂ ಮೊದಲು ತ್ರಿಷಾ ಅವರು ತಿರುಪತಿಗೆ ತೆರಳಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಈ ವಿಶೇಷ ಪೂಜೆ ದಳಪತಿ ವಿಜಯ್ಗೋಸ್ಕರವೇ ಎನ್ನುವ ಪ್ರಶ್ನೆ ಮೂಡಿದೆ. ಈ ವಿಷಯ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಇಂದು ತ್ರಿಷಾ ಜನ್ಮದಿನ. ಈ ಕಾರಣಕ್ಕೂ ಅವರು ತಿರುಪತಿಗೆ ತೆರಳಿದ್ದಾರೆ ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: May 04, 2026 08:19 AM
Follow Us
Latest Videos
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು

