ಎಸ್ ನಾರಾಯಣ್ ಹೆಸರಲ್ಲಿ ‘ದೊಡ್ಮನೆ’ ವಿರುದ್ಧ ಪೋಸ್ಟ್: ದೂರು ದಾಖಲು
S Narayan: ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ, ನಟ ಎಸ್ ನಾರಾಯಣ್ ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ. ಎಸ್ ನಾರಾಯಣ್ ಅವರ ಹೆಸರು, ಚಿತ್ರ ಬಳಸಿ ವ್ಯಕ್ತಿಯೊಬ್ಬ ಶಿವರಾಜ್ ಕುಮಾರ್, ಅಪ್ಪು, ಸುದೀಪ್, ಯಶ್ ಇನ್ನೂ ಕೆಲವು ನಟ, ನಟಿಯರ ಬಗ್ಗೆ ಅಶ್ಲೀಲ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾನೆ.
ಸಾಮಾಜಿಕ ಜಾಲತಾಣದ ಟ್ರೋಲ್ಗಳು ಈಗ ಚಿತ್ರರಂಗದಲ್ಲಿ ದೊಡ್ಡ ವಿವಾದ ಎಬ್ಬಿಸಿವೆ. ಎಲ್ಲದರ ಕೇಂದ್ರ ಬಿಂದು ದರ್ಶನ್ ಮತ್ತು ಅವರ ಅಭಿಮಾನಿಗಳು. ರಮ್ಯಾಗೆ (Ramya) ಕೆಟ್ಟದಾಗಿ ಸಂದೇಶ ಕಳಿಸಿರುವ ಆರೋಪ ದರ್ಶನ್ ಅಭಿಮಾನಿಗಳ ಮೇಲಿದೆ. ಪ್ರಥಮ್ಗೆ ನೇರವಾಗಿ ಆಯುಧ ತೋರಿಸಿ ಬೆದರಿಕೆ ಸಹ ಹಾಕಲಾಗಿದೆ. ಇದೀಗ ಎಸ್ ನಾರಾಯಣ್ ಅವರ ಹೆಸರಿನಲ್ಲಿ ದೊಡ್ಮನೆಯ ಮಂದಿಗೆ ಅವಮಾನ ಮಾಡುವ ಕೆಲಸ ಮಾಡಲಾಗುತ್ತಿದೆ. ಅಪ್ಪು, ಶಿವರಾಜ್ ಕುಮಾರ್, ಯಶ್, ಸುದೀಪ್ ಇನ್ನಿತರೆ ನಟ-ನಟಿಯರ ಬಗ್ಗೆ ಎಸ್ ನಾರಾಯಣ್ ಹೆಸರಲ್ಲಿ ಕೆಟ್ಟದಾಗಿ ಪೋಸ್ಟ್ಗಳನ್ನು ಮಾಡಲಾಗುತ್ತಿದೆ. ಈ ಬಗ್ಗೆ ಎಸ್ ನಾರಾಯಣ್ ದೂರು ನೀಡಿದ್ದು, ಪ್ರಕರಣವನ್ನು ಮಾಧ್ಯಮಗಳ ಬಳಿ ವಿವರಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
