ಬಿಗ್ಬಾಸ್ಗೆ ಯಾವ ಸ್ಪರ್ಧಿಯಿಂದ ಎಷ್ಟು ಟಿಆರ್ಪಿ ಬರುತ್ತೆ?
Bigg Boss Kannada: ಬಿಗ್ಬಾಸ್ ಕನ್ನಡ ಶೋ ಒಳ್ಳೆಯ ಟಿಆರ್ಪಿ ಗಳಿಸುತ್ತಿದೆ. ಆದರೆ ಯಾವ ಸ್ಪರ್ಧಿಯಿಂದ ಎಷ್ಟು ಟಿಆರ್ಪಿ ಬರುತ್ತಿದೆ? ಹೀಗೊಂದು ಆಟವನ್ನು ಸುದೀಪ್ ಸ್ಪರ್ಧಿಗಳಿಂದ ಆಡಿಸಿದ್ದಾರೆ.
ಬಿಗ್ಬಾಸ್ ಸೀಸನ್ 11 ರಲ್ಲಿ ಕೆಲ ಸ್ಪರ್ಧಿಗಳು ಬಿಗ್ಬಾಸ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನ ಕೆಲ ಸ್ಪರ್ಧಿಗಳು ನಮ್ಮಿಂದಲೇ ಶೋಗೆ ಟಿಆರ್ಪಿ ಬರುತ್ತಿದೆ ಎಂಬ ಭ್ರಮೆಯಲ್ಲಿ ಇದ್ದಾರೆ. ಇದೀಗ ಭಾನುವಾರದ ಎಪಿಸೋಡ್ನಲ್ಲಿ ಸುದೀಪ್, ಮನೆಯ ಸ್ಪರ್ಧಿಗಳಿಂದ ಆಟವೊಂದನ್ನು ಆಡಿಸಿದ್ದಾರೆ. ಆಟದಲ್ಲಿ ಸ್ಪರ್ಧಿಗಳು, ಮನೆಯ ಯಾವ ಸ್ಪರ್ಧಿಯಿಂದ ಶೋಗೆ ಎಷ್ಟು ಟಿಆರ್ಪಿ ಬರುತ್ತಿದೆ ಎಂದು ಪಾಯಿಂಟ್ಸ್ ನೀಡಬೇಕಿದೆ. ಈ ಫನ್ ಗೇಮ್ನಲ್ಲಿಯೂ ಸಹ ಕೆಲವು ಸ್ಪರ್ಧಿಗಳು ಸುದೀಪ್ ಎದುರೇ ಜಗಳ ಮಾಡಿಕೊಂಡಿದ್ದಾರೆ. ಸುರೇಶ್ ಹಾಗೂ ರಜತ್ ನಡುವೆ ಜಗಳ ಶುರುವಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ