Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಾವಿಸ್ ಹೆಡ್​ ಬಳಿ ಕ್ಷಮೆಯಾಚಿಸಿದ ಮೊಹಮ್ಮದ್ ಸಿರಾಜ್?

ಟ್ರಾವಿಸ್ ಹೆಡ್​ ಬಳಿ ಕ್ಷಮೆಯಾಚಿಸಿದ ಮೊಹಮ್ಮದ್ ಸಿರಾಜ್?

ಝಾಹಿರ್ ಯೂಸುಫ್
|

Updated on:Dec 08, 2024 | 1:23 PM

Australia vs India, 2nd Test: ಬಾರ್ಡರ್-ಗವಾಸ್ಕರ್ ಸರಣಿಯ ಪಿಂಕ್ ಬಾಲ್​ ಟೆಸ್ಟ್​​ನಲ್ಲಿ ಟೀಮ್ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ತಂಡವು 10 ವಿಕೆಟ್​​ಗಳ ಅಮೋಘ ಗೆಲುವು ದಾಖಲಿಸಿದೆ.

ಅಡಿಲೇಡ್​ನ ಓವಲ್ ಮೈದಾನದಲ್ಲಿ ದ್ವಿತೀಯ ದಿನದಾಟದಂದು ನಡೆದ ಜಟಾಪಟಿಗೆ ಮೊಹಮ್ಮದ್ ಸಿರಾಜ್ ಹಾಗೂ ಟ್ರಾವಿಸ್ ಹೆಡ್ ತೆರೆ ಎಳೆದಿದ್ದಾರೆ. ಈ ಪಂದ್ಯದ ದ್ವಿತೀಯ ಇನಿಂಗ್ಸ್​​ನಲ್ಲಿ ಹೆಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಸಿರಾಜ್ ಆಕ್ರೋಶ ವ್ಯಕ್ತಪಡಿಸಿದ್ದರು.

ಅತ್ತ ಟ್ರಾವಿಸ್ ಹೆಡ್ ಕೂಡ ಅದೇನೋ ಗೊಣುಗುತ್ತಾ ಸಾಗಿದರು. ಈ ವೇಳೆ ದಾಟು ಎಂಬ ರೀತಿಯಲ್ಲಿ ಮೊಹಮ್ಮದ್ ಸಿರಾಜ್ ಟ್ರಾವಿಸ್ ಹೆಡ್​ಗೆ ಕೈ ಸನ್ನೆ ಮಾಡಿದ್ದರು. ಆದರೆ ದ್ವಿತೀಯ ದಿನದಾಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಹೆಡ್, ತಾನೇನು ಹೇಳಿದ್ದೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿದ್ದರು.

ಸಿರಾಜ್ ಬೌಲ್ಡ್ ಮಾಡಿದಕ್ಕೆ ನಾನು ಉತ್ತಮವಾಗಿ ಬೌಲಿಂಗ್ ಮಾಡಿದ್ದೀಯಾ ಎಂದಿದ್ದೆ. ಆದರೆ ಅವರು ಅದನ್ನು ತಪ್ಪಾಗಿ ಅರ್ಥೈಸಿಕೊಂಡರು ಎಂದು ಟ್ರಾವಿಸ್ ಹೆಡ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

ಇದಾಗಿ ಮೂರನೇ ದಿನದಾಟದ ವೇಳೆ ಬ್ಯಾಟಿಂಗ್​​ಗೆ ಇಳಿದ ಮೊಹಮ್ಮದ್ ಸಿರಾಜ್ ಸಿಲ್ಲಿ ಪಾಯಿಂಟ್​​ನಲ್ಲಿ ಫೀಲ್ಡಿಂಗ್​ನಲ್ಲಿದ್ದ ಟ್ರಾವಿಸ್ ಹೆಡ್ ಅವರನ್ನು ಮಾತನಾಡಿಸಿದ್ದಾರೆ. ಈ ವೇಳೆ ನಿಮ್ಮ ಮಾತನ್ನು ತಪ್ಪಾಗಿ ಅರ್ಥೈಸಿ ಆ ರೀತಿ ಮಾಡಿದ್ದೇನೆ, ಕ್ಷಮಿಸಿ, ಅದನ್ನು ಅಲ್ಲಿಗೆ ಬಿಟ್ಡು ಬಿಡೋಣ ಎಂದು ಟ್ರಾವಿಸ್ ಹೆಡ್ ಅವರಲ್ಲಿ ಸಿರಾಜ್ ಹೇಳಿದ್ದಾರೆ. ಈ ಮೂಲಕ ಇಬ್ಬರು ಆಟಗಾರರು ಎಲ್ಲಾ ಜಟಾಪಟಿಗೂ ಇಬ್ಬರು ತೆರೆ ಎಳೆದಿದ್ದಾರೆ.

ಇನ್ನು ಈ ಪಂದ್ಯದ ಬಳಿಕ ಸಿರಾಜ್ ಹಾಗೂ ಟ್ರಾವಿಸ್ ಹೆಡ್ ಆಲಿಂಗನ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಇದೀಗ ಹೆಡ್ ಜೊತೆ ಮಾತನಾಡುತ್ತಿರುವ ಸಿರಾಜ್ ಅವರ ವಿಡಿಯೋ ವೈರಲ್ ಆಗಿದ್ದು, ಟೀಮ್ ಇಂಡಿಯಾ ಆಟಗಾರನ ಕ್ರೀಡಾಸ್ಪೂರ್ತಿಯ ನಡೆಗೆ ಅಭಿಮಾನಿಗಳು ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.

 

 

Published on: Dec 08, 2024 01:17 PM