- Kannada News Photo gallery Cricket photos India vs Australia Pink Ball Test was the shortest ever Test match in history
1031 ಎಸೆತಗಳಲ್ಲಿ ಪಂದ್ಯ ಮುಗಿಸಿ ಇತಿಹಾಸ ನಿರ್ಮಿಸಿದ ಆಸ್ಟ್ರೇಲಿಯಾ
India vs Australia: ಅಡಿಲೇಡ್ನ ಓವಲ್ ಮೈದಾನದಲ್ಲಿ ನಡೆದ ಟೀಮ್ ಇಂಡಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಅಮೋಘ ಗೆಲುವು ದಾಖಲಿಸಿದೆ. ಇದಕ್ಕೂ ಮುನ್ನ ಪರ್ತ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 295 ರನ್ಗಳ ಭರ್ಜರಿ ಜಯ ಸಾಧಿಸಿತ್ತು.
Updated on:Dec 08, 2024 | 12:26 PM

ಅಡಿಲೇಡ್ನ ಓವಲ್ ಮೈದಾನದಲ್ಲಿ ನಡೆದ ಟೀಮ್ ಇಂಡಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆಸೀಸ್ ಪಡೆ ಐತಿಹಾಸಿಕ ಸಾಧನೆಯೊಂದನ್ನು ಸಹ ಮಾಡಿದೆ.

ಅಂದರೆ ಈ ಪಂದ್ಯವು ಉಭಯ ತಂಡಗಳ ನಡುವಿನ ಅತ್ಯಂತ ಕಡಿಮೆ ಎಸೆತಗಳ ಟೆಸ್ಟ್ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಆಸ್ಟ್ರೇಲಿಯನ್ನರು ಕೇವಲ 486 ಎಸೆತಗಳನ್ನು ಮಾತ್ರ ಎಸೆದಿದ್ದಾರೆ.

ಮೊದಲ ಇನಿಂಗ್ಸ್ನಲ್ಲಿ 44.1 ಓವರ್ಗಳಲ್ಲಿ ಆಸ್ಟ್ರೇಲಿಯಾ 180 ರನ್ ನೀಡಿದರೆ, ದ್ವಿತೀಯ ಇನಿಂಗ್ಸ್ನಲ್ಲಿ 36.5 ಓವರ್ಗಳಲ್ಲಿ 175 ರನ್ ಮಾತ್ರ ಬಿಟ್ಟುಕೊಟ್ಟರು. ಈ ಮೂಲಕ ಟೀಮ್ ಇಂಡಿಯಾವನ್ನು ಕೇವಲ 486 ಎಸೆತಗಳಲ್ಲಿ ಕಟ್ಟಿಹಾಕಿದರು.

ಇನ್ನು ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್ನಲ್ಲಿ 525 ಎಸೆತಗಳನ್ನು ಎದುರಿಸಿ 337 ರನ್ ಕಲೆಹಾಕಿದರೆ, ದ್ವಿತೀಯ ಇನಿಂಗ್ಸ್ನಲ್ಲಿ ಆಡಿದ್ದು ಕೇವಲ 20 ಎಸೆತಗಳನ್ನು ಮಾತ್ರ. ಈ ಮೂಲಕ ದ್ವಿತೀಯ ಇನಿಂಗ್ಸ್ನಲ್ಲಿ 19 ರನ್ಗಳ ಗುರಿಯನ್ನು ಬೆನ್ನತ್ತಿ ಭರ್ಜರಿ ಜಯ ಸಾಧಿಸಿದೆ.

ಅಂದರೆ ಈ ಟೆಸ್ಟ್ ಪಂದ್ಯದ 4 ಇನಿಂಗ್ಸ್ಗಳಲ್ಲಿ ಮೂಡಿಬಂದ ಒಟ್ಟು ಎಸೆತಗಳ ಸಂಖ್ಯೆ ಕೇವಲ 1031. ವಿಶೇಷ ಎಂದರೆ ಇದು ಉಭಯ ತಂಡಗಳ ನಡುವಿನ ಅತ್ಯಂತ ಕಡಿಮೆ ಎಸೆತಗಳ ಟೆಸ್ಟ್ ಪಂದ್ಯ. ಇದಕ್ಕೂ ಮುನ್ನ 2023 ರಲ್ಲಿ ಇಂದೋರ್ನಲ್ಲಿ ನಡೆದ ಟೆಸ್ಟ್ ಪಂದ್ಯವು 1135 ಎಸೆತಗಳಲ್ಲಿ ಅಂತ್ಯ ಕಂಡಿತ್ತು.

ಇದೀಗ ಮತ್ತೊಮ್ಮೆ ಟೀಮ್ ಇಂಡಿಯಾ ವಿರುದ್ಧ 1031 ಎಸೆತಗಳಲ್ಲಿ ಪಂದ್ಯ ಮುಗಿಸಿ ಭರ್ಜರಿ ಜಯ ದಾಖಲಿಸುವಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡ ಯಶಸ್ವಿಯಾಗಿದೆ.
Published On - 12:25 pm, Sun, 8 December 24



















