ಊರಿನವರು ಬೇಡವೆಂದರೂ ಕೇಳಲಿಲ್ಲ; ಉಕ್ಕಿ ಹರಿವ ಹೊಳೆ ದಾಟುವಾಗ ಕೊಚ್ಚಿ ಹೋಯ್ತು ಟ್ರಕ್!

Updated on: Oct 29, 2025 | 10:17 PM

ತೆಲಂಗಾಣದ ಖಮ್ಮಂನಲ್ಲಿ ಹೊಳೆಯಲ್ಲಿ ಚಾಲಕನೊಂದಿಗೆ ಸರಕು ಸಾಗಣೆ ಲಾರಿ ಕೊಚ್ಚಿ ಹೋಗಿದೆ. ಖಮ್ಮಂನ ಜನ್ನಾರಂ ಗ್ರಾಮದಲ್ಲಿ ಉಕ್ಕಿ ಹರಿಯುತ್ತಿದ್ದ ನಿಮ್ಮವಾಗು ಹೊಳೆಯನ್ನು ದಾಟಲು ಪ್ರಯತ್ನಿಸುತ್ತಿದ್ದಾಗ ಸರಕು ಸಾಗಣೆ ಲಾರಿಯೊಂದು ಅದರ ಚಾಲಕನೊಂದಿಗೆ ಕೊಚ್ಚಿ ಹೋಗಿದೆ. ಮೊಂತಾ ಚಂಡಮಾರುತದಿಂದ ಉಂಟಾದ ಭಾರೀ ಮಳೆಯಿಂದಾಗಿ ಈ ಅವಘಡ ಸಂಭವಿಸಿದೆ. ರಕ್ಷಣಾ ಕಾರ್ಯಗಳು ನಡೆಯುತ್ತಿವೆ.

ಖಮ್ಮಂ, ಅಕ್ಟೋಬರ್ 29: ತೆಲಂಗಾಣದಲ್ಲಿ (Telangana Flood) ಭಾರೀ ಮಳೆಯಾಗುತ್ತಿದೆ. ಎಂಕೂರು ಮಂಡಲದ ಜನ್ನಾರಂ ಗ್ರಾಮದಲ್ಲಿ ಉಕ್ಕಿ ಹರಿಯುತ್ತಿದ್ದ ನಿಮ್ಮವಾಗು ಹೊಳೆಯಲ್ಲಿ ಗೂಡ್ಸ್ ಟ್ರಕ್ ಒಂದು ಅದರ ಚಾಲಕನೊಂದಿಗೆ ಕೊಚ್ಚಿ ಹೋಗಿದೆ. ಚಂಡಮಾರುತ ಮೊಂತಾದಿಂದ (Cyclone Montha) ಉಂಟಾದ ಭಾರೀ ಮಳೆಯಿಂದಾಗಿ ಪಲ್ಲಿಪಾಡು-ಎಂಕೂರು ಮಾರ್ಗದಲ್ಲಿರುವ ಹೊಳೆ ಇಂದು ಬೆಳಿಗ್ಗೆಯಿಂದ ತುಂಬಿ ಹರಿಯುತ್ತಿತ್ತು. ಸ್ಥಳೀಯರು ಹೋಗಬೇಡಿ ಎಂದು ಎಚ್ಚರಿಕೆ ನೀಡಿದರೂ ಅದನ್ನು ಲೆಕ್ಕಿಸದೆ ಚಾಲಕ ಹೊಳೆಗೆ ಅಡ್ಡಲಾಗಿ ಇರುವ ಸೇತುವೆಯನ್ನು ದಾಟಲು ಪ್ರಯತ್ನಿಸಿದನು. ಆಗ ಟ್ರಕ್ ನೀರಿನಲ್ಲಿ ಕೊಚ್ಚಿಹೋಗಿದೆ. ಎನ್​ಡಿಆರ್​ಎಫ್ ಸಿಬ್ಬಂದಿ ಹುಡುಕಾಡಿದರೂ ಆ ಚಾಲಕನನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 29, 2025 10:16 PM