AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುನೀತ್, ವಿನಯ್, ಯುವ ರಾಜ್​​ಕುಮಾರ್ ಒಟ್ಟಿಗೆ ವರ್ಕೌಟ್ ಮಾಡಿದ ಅಪರೂಪದ ವಿಡಿಯೋ

ಪುನೀತ್, ವಿನಯ್, ಯುವ ರಾಜ್​​ಕುಮಾರ್ ಒಟ್ಟಿಗೆ ವರ್ಕೌಟ್ ಮಾಡಿದ ಅಪರೂಪದ ವಿಡಿಯೋ

ಮದನ್​ ಕುಮಾರ್​
|

Updated on: Oct 29, 2025 | 8:07 PM

Share

ಫಿಟ್ನೆಸ್ ಬಗ್ಗೆ ಪುನೀತ್ ರಾಜ್​​ಕುಮಾರ್ ಅವರು ಹೆಚ್ಚು ಕಾಳಜಿ ಹೊಂದಿದ್ದರು. ತಪ್ಪದೇ ವರ್ಕೌಟ್ ಮಾಡುತ್ತಿದ್ದರು. ಯುವ ರಾಜ್​​ಕುಮಾರ್​, ವಿನಯ್ ರಾಜ್​​ಕುಮಾರ್ ಹಾಗೂ ಪುನೀತ್ ರಾಜ್​​ಕುಮಾರ್ ಅವರು ಮನೆಯಲ್ಲೇ ವರ್ಕೌಟ್ ಮಾಡಿದ್ದರು. ಈಗ ಯುವ ರಾಜ್​​ಕುಮಾರ್ ಅವರು ಆ ಅಪರೂಪದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ನಟ ಪುನೀತ್ ರಾಜ್​​ಕುಮಾರ್ ಅವರ 4ನೇ ವರ್ಷದ ಪುಣ್ಯಸ್ಮರಣೆ ಮಾಡಲಾಗಿದೆ. ಹಲವು ರೀತಿಯಲ್ಲಿ ಅವರನ್ನು ಸ್ಮರಿಸಿಕೊಳ್ಳಲಾಗಿದೆ. ಪುನೀತ್ ರಾಜ್​​ಕುಮಾರ್ ಅವರು ಫಿಟ್ನೆಸ್ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ತಪ್ಪದೇ ವರ್ಕೌಟ್ ಮಾಡುತ್ತಿದ್ದರು. ವಿನಯ್ ರಾಜ್​​ಕುಮಾರ್, ಯುವ ರಾಜ್​​ಕುಮಾರ್​ ಮತ್ತು ಪುನೀತ್ ರಾಜ್​​ಕುಮಾರ್ ಅವರು ಮನೆಯಲ್ಲೇ ವರ್ಕೌಟ್ ಮಾಡಿದ್ದರು. ಆ ಅಪರೂಪದ ವಿಡಿಯೋವನ್ನು ಈಗ ಯುವ ರಾಜ್​​ಕುಮಾರ್ (Yuva Rajkumar) ಅವರು ಹಂಚಿಕೊಂಡಿದ್ದಾರೆ. ಯಾವುದೇ ಜಿಮ್ ಸಾಧನಗಳು ಇಲ್ಲದೇ ಮನೆಯಲ್ಲೇ ವರ್ಕೌಟ್ ಮಾಡುವುದು ಹೇಗೆ ಎಂಬುದನ್ನು ಈ ವಿಡಿಯೋದಲ್ಲಿ ಪುನೀತ್ ರಾಜ್​​ಕುಮಾರ್ ಅವರು ತೋರಿಸಿಕೊಟ್ಟಿದ್ದರು. ಈಗ ಅದನ್ನು ನೋಡಿ ಅಭಿಮಾನಿಗಳು ಎಮೋಷನಲ್ ಆಗುತ್ತಿದ್ದಾರೆ. ಪುನೀತ್ ರಾಜ್​​ಕುಮಾರ್ (Puneeth Rajkumar) ಅವರನ್ನು ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.