ಕಾರ್ ಮಿರರ್ ಹೊಡೆದಿದ್ದಕ್ಕೆ ಬೈಕ್ ಸವಾರನ ಹತ್ಯೆ: ಕಾರಿನಿಂದ ಗುದ್ದಿದ ದೃಶ್ಯ ಸಿಸಿಟಿವಿಯಲ್ಲಿ ಇಲ್ಲಿದೆ
ಬೆಂಗಳೂರಿನಲ್ಲಿ ರೋಡ್ ರೇಜ್ ರೀತಿಯಲ್ಲಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಅಕ್ಸಿಡೆಂಟ್ ರೀತಿಯಲ್ಲಿ ಬಿಂಬಿಸಿ ಕೊಲೆ ಮಾಡಲಾಗಿದೆ. ರಾತ್ರಿ ವೇಳೆ ಕಾರ್ ಮಿರರ್ ಗೆ ಬೈಕ್ ಟಚ್ ಆಗಿದ್ದಕ್ಕೆ ಹಿಂಬಾಲಿಸಿ ಕೊಂಡು ಬಂದು ಕೊಲೆ ಮಾಡಲಾಗಿದೆ. ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೊಲೆ ಘಟನೆ ನಡೆದಿದೆ. ಒಂದು ಸಣ್ಣ ರೋಡ್ ರೇಜ್ ಘಟನೆ ಕೊಲೆಯಲ್ಲಿ ಅಂತ್ಯವಾಗಿದ್ದು, ಈ ಸಂಬಂಧ ಬೆಂಗಳೂರಿನ ಜೆ.ಪಿ.ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪಘಾತ ಕೇಸ್ ಎಂದು ಕೇಸ್ ದಾಖಲಾಗಿತ್ತು. ಆದರೇ, ಬಳಿಕ ಪೊಲೀಸರ ತನಿಖೆ ವೇಳೆ ಕೊಲೆ ಎಂಬುದು ದೃಢಪಟ್ಟಿದೆ.
ಬೆಂಗಳೂರು, (ಅಕ್ಟೋಬರ್ 29): ಬೆಂಗಳೂರಿನಲ್ಲಿ ರೋಡ್ ರೇಜ್ ರೀತಿಯಲ್ಲಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಅಕ್ಸಿಡೆಂಟ್ ರೀತಿಯಲ್ಲಿ ಬಿಂಬಿಸಿ ಕೊಲೆ ಮಾಡಲಾಗಿದೆ. ರಾತ್ರಿ ವೇಳೆ ಕಾರ್ ಮಿರರ್ ಗೆ ಬೈಕ್ ಟಚ್ ಆಗಿದ್ದಕ್ಕೆ ಹಿಂಬಾಲಿಸಿ ಕೊಂಡು ಬಂದು ಕೊಲೆ ಮಾಡಲಾಗಿದೆ. ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೊಲೆ ಘಟನೆ ನಡೆದಿದೆ. ಒಂದು ಸಣ್ಣ ರೋಡ್ ರೇಜ್ ಘಟನೆ ಕೊಲೆಯಲ್ಲಿ ಅಂತ್ಯವಾಗಿದ್ದು, ಈ ಸಂಬಂಧ ಬೆಂಗಳೂರಿನ ಜೆ.ಪಿ.ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪಘಾತ ಕೇಸ್ ಎಂದು ಕೇಸ್ ದಾಖಲಾಗಿತ್ತು. ಆದರೇ, ಬಳಿಕ ಪೊಲೀಸರ ತನಿಖೆ ವೇಳೆ ಕೊಲೆ ಎಂಬುದು ದೃಢಪಟ್ಟಿದೆ.
ಅಕ್ಟೋಬರ್ 25ರ ರಾತ್ರಿ 11.30ರ ಸಮಯದಲ್ಲಿ ಪುಟ್ಟೇನಹಳ್ಳಿಯ ಶ್ರೀರಾಮ ಲೇಔಟ್ ನಲ್ಲಿ ಈ ಘಟನೆ ನಡೆದಿತ್ತು. ಮೊದಲು ಬೈಕ್ ನಿಂದ ಕಾರಿನ ಮಿರರ್ ಗೆ ಟಚ್ ಆಗಿ ಕಾರಿನ ಮಿರರ್ ಒಡೆದು ಹೋಗಿತ್ತು. ಅದೇ ಕೋಪಕ್ಕೆ ಬೈಕ್ ನಲ್ಲಿದ್ದ ಯುವಕನನ್ನು 2 ಕಿಲೋಮೀಟರ್ ವರೆಗೂ ಚೇಸ್ ಮಾಡಿ ಕಾರಿನಿಂದ ಗುದ್ದಿ ಕೊಲೆ ಮಾಡಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ನಲ್ಲಿದ್ದ ಇಬ್ಬರು ರಸ್ತೆಯಲ್ಲಿ ಹಾರಿ ಬಿದ್ದಿದ್ದರು. ಬೈಕ್ ನಲ್ಲಿದ್ದ ದರ್ಶನ್ ಮತ್ತು ವರುಣ್ ಇಬ್ಬರಿಗೂ ಗಾಯಗಳಾಗಿದ್ದವು. ಇಬ್ಬರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆದರೇ, ಚಿಕಿತ್ಸೆ ಫಲಕಾರಿಯಾಗದೇ ದರ್ಶನ್ ಸಾವನ್ನಪ್ಪಿದ್ದಾನೆ.
ಸದ್ಯ ಪೊಲೀಸರು ದಂಪತಿ ಮನೋಜ್ ಮತ್ತು ಸಾಕ್ಷಿ ನಾಶಕ್ಕೆ ಸಹಾಯ ಮಾಡಿರುವ ಪತ್ನಿ ಆರತಿಯನ್ನು ಬಂಧಿಸಿದ್ದಾರೆ.

