ಸಂಸದ ಡಿಕೆ ಸುರೇಶ್ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಭಯಾನಕ ಸುಂಟರಗಾಳಿ: ಚೆಲ್ಲಾಪಿಲ್ಲಿಯಾದ ಟೆಂಟ್

| Updated By: ಗಂಗಾಧರ​ ಬ. ಸಾಬೋಜಿ

Updated on: Feb 18, 2024 | 8:31 PM

ಸಂಸದ ಡಿಕೆ ಸುರೇಶ್ ನೇತೃತ್ವದಲ್ಲಿ ತುಮಕೂರಿನ ಕುಣಿಗಲ್ ಪಟ್ಟಣದ ಜಿ.ಕೆ.ಬಿ.ಎಂ.ಎಸ್ ಮೈದಾನದಲ್ಲಿ ಡಿಕೆಎಸ್ ಚಾರಿಟೇಬಲ್ ಟ್ರಸ್ಟ್ ಹಾಗೂ ಅಕ್ಷರ ಫೌಂಡೇಶನ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಕಾರದೊಂದಿಗೆ ನಿನ್ನೆ ಉದ್ಯೋಗ ಮೇಳದಲ್ಲಿ ಭಯಾನಕ ಸುಂಟರಗಾಳಿ ಬೀಸಿದ ರಭಸಕ್ಕೆ ಭಾನೆತ್ತರಕ್ಕೆ ಹಾರಿ ಟೆಂಟ್ ಹೌಸ್ ಚೆಲ್ಲಾಪಿಲ್ಲಿಯಾಗಿರುವಂತಹ ಘಟನೆ ನಡೆದಿದೆ. ಘಟನೆಯಲ್ಲೊ ಯಾರಿಗೂ ಹಾನಿ ಸಂಭವಿಸಿಲ್ಲ.

ತುಮಕೂರು, ಫೆಬ್ರವರಿ 18: ಸಂಸದ ಡಿಕೆ ಸುರೇಶ್ ಆಯೋಜಿಸಿದ್ದ ಉದ್ಯೋಗ ಮೇಳ (job fair) ದಲ್ಲಿ ಭಯಾನಕ ಸುಂಟರಗಾಳಿ ಬೀಸಿದ ರಭಸಕ್ಕೆ ಭಾನೆತ್ತರಕ್ಕೆ ಹಾರಿ ಟೆಂಟ್ ಹೌಸ್ ಚೆಲ್ಲಾಪಿಲ್ಲಿಯಾಗಿರುವಂತಹ ಘಟನೆ ನಡೆದಿದೆ. ಕುಣಿಗಲ್ ಪಟ್ಟಣದ ಜಿ.ಕೆ.ಬಿ.ಎಂ.ಎಸ್ ಮೈದಾನದಲ್ಲಿ ಡಿಕೆಎಸ್ ಚಾರಿಟೇಬಲ್ ಟ್ರಸ್ಟ್ ಹಾಗೂ ಅಕ್ಷರ ಫೌಂಡೇಶನ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಕಾರದೊಂದಿಗೆ ನಿನ್ನೆ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಭಯಾನಕ ಸುಂಟರಗಾಳಿ ಬೀಸಿದೆ. ಘಟನೆಯಿಂದ ಯಾರಿಗೂ ಹಾನಿ ಸಂಭವಿಸಿಲ್ಲ. ಸಂಸದ ಡಿಕೆ ಸುರೇಶ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದ್ದು, ಕುಣಿಗಲ್ ಶಾಸಕ ಡಾ ರಂಗನಾಥ್ ಸೇರಿದಂತೆ ಸುಮಾರು 2 ಸಾವಿರಕ್ಕಿಂತ ಹೆಚ್ಚು ಉದ್ಯೋಗಕಾಂಕ್ಷಿಗಳು ಭಾಗಿಯಾಗಿದ್ದರು. ಕಾರ್ಯಕ್ರಮದ ಕೊನೆಯ ಹಂತದಲ್ಲಿ ರಭಸವಾಗಿ ಬೀಸಿದ ಸುಂಟರಗಾಳಿಗೆ ಟೆಂಟ್ ಚೆಲ್ಲಾಪಿಲ್ಲಿಯಾಗಿದ್ದು, ಕೆಲ ಕಾಲ ಆತಂಕ ಸೃಷ್ಟಿಸಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.