ಐದು ದಶಕಗಳ ಹೋರಾಟದ ಫಲವಾಗಿ ಕೆರೆಗೆ ಬಂತು ತುಂಗಭದ್ರಾ ನದಿ ನೀರು

|

Updated on: Sep 23, 2024 | 2:42 PM

ಐದು ದಶಕಗಳ ಹೋರಾಟದ ಫಲವಾಗಿ ದಾವಣಗೆರೆ ಜಿಲ್ಲೆಯ ಜಗಳೂರು ಕೆರೆಗೆ ತುಂಗಭದ್ರಾ ನದಿ ನೀರು ಬಂದಿದೆ. ಜಗಳೂರು ಕೆರೆ ಹರಿಹರ ತಾಲೂಕಿನ ದಿಟೂರ ಬಳಿಯ ತುಂಗಭದ್ರಾ ನದಿಯಿಂದ ಸುಮಾರು 65 ಕಿಮೀ ದೂರದಲ್ಲಿದೆ. ಕರೆಗೆ ನೀರು ಬರುತ್ತಿದ್ದಂತೆ, ಜಗಳೂರು ಜನರು ಸಂತಸ ವ್ಯಕ್ತಪಡಿಸಿದರು.

ಐದು ದಶಕಗಳ ಹೋರಾಟದ ಫಲವಾಗಿ ದಾವಣಗೆರೆ (Davangere) ಜಿಲ್ಲೆಯ ಜಗಳೂರು (Jagalur) ಕೆರೆಗೆ ತುಂಗಭದ್ರಾ ನದಿ (Tungabhadra River) ನೀರು ಬಂದಿದೆ. ಹರಿಹರ ತಾಲೂಕಿನ ದಿಟೂರ ಬಳಿಯ ತುಂಗಭದ್ರಾ ನದಿಯಿಂದ ಸುಮಾರು 65 ಕಿಮೀ ದೂರದಲ್ಲಿ ಜಗಳೂರು ಕೆರೆ ಇದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 57 ಕೆರೆಗೆ ನೀರು ತುಂಬಿಸುವ ಯೋಜನೆ ಅಡಿಯಲ್ಲಿ ಜಗಳೂರು, ತುಪ್ಪದ ಹಳ್ಳಿ ಕೆರೆ ಸೇರಿದಂತೆ 20 ಕ್ಕೂ ಹೆಚ್ಚು ಕೆರೆಗಳಿಗೆ ತುಂಗಭದ್ರಾ ನದಿ ನೀರು ಹರಿಸಲಾಗಿದೆ. ಕರೆಗೆ ನೀರು ಬರುತ್ತಿದ್ದಂತೆ, ಜಗಳೂರು ಜನರು ಸಂತಸ ವ್ಯಕ್ತಪಡಿಸಿದರು.  ಕೆರೆಯನ್ನು ವೀಕ್ಷಿಸಲು ತಂಡೊಪತಂಡವಾಗಿ ಬರುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published on: Sep 23, 2024 12:48 PM