ಟಿವಿ9 ನೆಟ್ ವರ್ಕ್ ಪ್ರಾಯೋಜಿತ ಫೆಸ್ಟಿವಲ್ ಆಫ್ ಇಂಡಿಯ ಉತ್ಸವಕ್ಕೆ ಚಾಲನೆ ನೀಡಿದ ಸಂಸ್ಥೆಯ ಸಿಇಒ ಬರುನ್ ದಾಸ್

ಅರುಣ್​ ಕುಮಾರ್​ ಬೆಳ್ಳಿ

Updated on: Oct 21, 2023 | 3:01 PM

ಪೂಜೆಯ ಬಳಿಕ ಮಾತಾಡಿದ ಬರುನ್ ದಾಸ್, ಮೊದಲಬಾರಿಗೆ ಕೊಲ್ಕತ್ತಾದ ವಿಶ್ವವಿಖ್ಯಾತ ದುರ್ಗಾಪೂಜೆಯನ್ನು ದೆಹಲಿಗೆ ತರುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು. ಅಕ್ಟೋಬರ್ 20ರಿಂದ ಆರಂಭವಾಗಿರುವ ಫೆಸ್ಟಿವಲ್ ಆಫ್ ಇಂಡಿಯ ಅಕ್ಟೋಬರ್ 24ರವರೆಗೆ ನಡೆಯಲಿದೆ.

ದೆಹಲಿ: ಟಿವಿ9 ನೆಟ್ ವರ್ಕ್ ಪ್ರಾಯೋಜಿಸುತ್ತಿರುವ ಫೆಸ್ಟಿವಲ್ ಆಫ್ ಇಂಡಿಯದ ಆಯೋಜನೆ ಶುಕ್ರವಾರದಿಂದ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿರುವ ಮೇಜರ್ ಧ್ಯಾನ್ ಚಂದ್‌ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಕಾರ್ಯಕ್ರಮವನ್ನು ಟಿವಿ9 ನೆಟ್ ವರ್ಕ್ ಸಿಇಓ ಮತ್ತು ಎಂಡಿ ಬರುನ್ ದಾಸ್ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ದೇಶ ಮತ್ತು ವಿದೇಶೀ ಮೂಲದ ಅನೇಕ ಮಳಿಗೆಗಳನ್ನು ಇಲ್ಲಿ ಸ್ಥಾಪಿಸಲಾಗಿದ್ದು, ಜನ ಖರೀದಿಗಳಿಗಾಗಿ ಕ್ರೀಡಾಂಗಣಕ್ಕೆ ದೌಡಾಯಿಸುತ್ತಿದ್ದಾರೆ. ವಿಶ್ವದ ಹಲವಾರು ದೇಶಗಳ ನಾನಾ ಪ್ರಕಾರದ ವಸ್ತುಗಳನ್ನು ಇಲ್ಲಿ ಕಾಣಬಹುದು. ಶಕ್ತಿದೇವತೆ ದುರ್ಗಾದೇವಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಪೂಜೆಯ ಬಳಿಕ ಮಾತಾಡಿದ ಬರುನ್ ದಾಸ್, ಮೊದಲಬಾರಿಗೆ ಕೊಲ್ಕತ್ತಾದ ವಿಶ್ವವಿಖ್ಯಾತ ದುರ್ಗಾಪೂಜೆಯನ್ನು ದೆಹಲಿಗೆ ತರುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು. ಅಕ್ಟೋಬರ್ 20ರಿಂದ ಆರಂಭವಾಗಿರುವ ಫೆಸ್ಟಿವಲ್ ಆಫ್ ಇಂಡಿಯ ಅಕ್ಟೋಬರ್ 24ರವರೆಗೆ ನಡೆಯಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.