ಕೊಲ್ಕತ್ತಾ: ದುರ್ಗಾ ಪೂಜಾ ಮಹೋತ್ಸವಕ್ಕೆ ಮುನ್ನ ನಡೆಯುವ ಖೂಂಟಿ ಪೂಜೆಯಲ್ಲಿ ಭಾಗಿಯಾದ ಧರ್ಮೇಂದ್ರ ಪ್ರಧಾನ್

ಇಂದು ಕೋಲ್ಕತ್ತಾದಲ್ಲಿ ದುರ್ಗಾ ಪೂಜೆ ಆರಂಭಕ್ಕೂ ಮುನ್ನ ಆಯೋಜಿಸಲಾಗಿದ್ದ ಖೂಂಟಿ ಪೂಜೆಯಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಪಾಲ್ಗೊಂಡಿದ್ದಾರೆ. ಇದರ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಸಚಿವರುಮಾ ದುರ್ಗೆಯ ಆಶೀರ್ವಾದದೊಂದಿಗೆ, ಪಶ್ಚಿಮ ಬಂಗಾಳವು ಸಮೃದ್ಧಿಯ ಹಾದಿಯಲ್ಲಿ ಬೆಳೆಯಬಹುದು ಎಂದಿದ್ದಾರೆ

ಕೊಲ್ಕತ್ತಾ: ದುರ್ಗಾ ಪೂಜಾ ಮಹೋತ್ಸವಕ್ಕೆ ಮುನ್ನ ನಡೆಯುವ ಖೂಂಟಿ ಪೂಜೆಯಲ್ಲಿ ಭಾಗಿಯಾದ ಧರ್ಮೇಂದ್ರ ಪ್ರಧಾನ್
ಧರ್ಮೇಂದ್ರ ಪ್ರಧಾನ್
Follow us
ರಶ್ಮಿ ಕಲ್ಲಕಟ್ಟ
|

Updated on: Aug 20, 2023 | 2:33 PM

ಕೋಲ್ಕತ್ತಾ ಆಗಸ್ಟ್ 20: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಇಂದು (ಭಾನುವಾರ) ಕೋಲ್ಕತ್ತಾದ (Kolkata) ನ್ಯೂ ಮಾರ್ಕೆಟ್​​ನಲ್ಲಿರುವ ಶ್ರೀ ಶ್ರೀ ಸರ್ಬೋಜನಿನ್ ದುರ್ಗಾಪೂಜಾ ಪಂಡಾಲ್ ಸಮಿತಿಗೆ ಆಗಮಿಸಿ ದುರ್ಗಾ ಮಹೋತ್ಸವದ (Durga Puja) ಆರಂಭಕ್ಕೂ ಮುನ್ನ ನಡೆಯಲಿರುವ ಖೂಂಟಿ ಪೂಜೆ ನೆರವೇರಿಸಿದರು. ಈ ವೇಳೆ ಕೇಂದ್ರ ಸಚಿವರು ಯಾಗ, ಹವನದಲ್ಲಿ ಪಾಲ್ಗೊಂಡರು. ಮಂತ್ರಗಳ ಪಠಣ ಮತ್ತು ವಿಧಿವಿಧಾನಗಳೊಂದಿಗೆ ದುರ್ಗಾ ಮಂಟಪದೊಳಗೆ ಅವರು ಪೂಜೆ ಸಲ್ಲಿಸಿದರು. ಈ ವೇಳೆ ದುರ್ಗಾ ಪಂಡಾಲ್ ಸಮಿತಿಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದಾರೆ.

ಖೂಂಟಿ ಪೂಜೆಯ ಜೊತೆಗೆ, ಪಶ್ಚಿಮ ಬಂಗಾಳದಲ್ಲಿ ಮತ್ತು ಇಡೀ ದೇಶದಲ್ಲಿ ದುರ್ಗಾ ಪೂಜೆಯ ಸಿದ್ಧತೆಗಳು ಪ್ರಾರಂಭವಾಗುತ್ತವೆ ಎಂದು ನಂಬಲಾಗಿದೆ. ಈ ಧಾರ್ಮಿಕ ಕಾರ್ಯಕ್ರಮವನ್ನು ದುರ್ಗಾ ಪೂಜೆಯ ಆರಂಭವೆಂದು ಪರಿಗಣಿಸಲಾಗಿದೆ. ಇದಾದ ನಂತರ ದುರ್ಗಾಪೂಜೆ ಕಾರ್ಯಕ್ರಮಗಳಿಗೆ ಎಲ್ಲೆಡೆ ಭಕ್ತರು ಸಿದ್ಧತೆಯಲ್ಲಿ ತೊಡಗುತ್ತಾರೆ.

ಮೋದಿಯನ್ನು ಶ್ಲಾಘಿಸಿ ಫೋಟೊ ಹಂಚಿಕೊಂಡ ಪ್ರಧಾನ್

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಕ ಖೂಂಟಿ ಪೂಜೆ ನೆರವೇರಿಸಿದ ನಂತರ ಪೂಜೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಇಂದು ನಾನು ನ್ಯೂ ಮಾರ್ಕೆಟ್ ಸರ್ಬೋಜನಿನ್ ಶ್ರೀ ಶ್ರೀ ದುರ್ಗಾಪೂಜಾ ಸಮಿತಿಯ ಪಂಡಾಲ್‌ನಲ್ಲಿ ಖೂಂಟಿ ಪೂಜೆ ಮೂಲಕ ದುರ್ಗೋತ್ಸವವನ್ನು ಉದ್ಘಾಟಿಸುವ ಸೌಭಾಗ್ಯವನ್ನು ಪಡೆದುಕೊಂಡಿದ್ದೇನೆ. ಖೂಂಟಿ ಪೂಜೆ ಮುಗಿದೊಡನೆ ದುರ್ಗಾ ಪೂಜೆಯ ಸಿದ್ಧತೆಗಳು ಭರದಿಂದ ಆರಂಭವಾಗುತ್ತವೆ.

ಇದನ್ನೂ ಓದಿ: ಚಂದ್ರಯಾನ-3: ಆಗಸ್ಟ್ 23ರಂದು ಚಂದ್ರನ ಮೇಲೆ ಇಳಿಯಲಿದೆ ವಿಕ್ರಮ್ ಲ್ಯಾಂಡರ್

ಮೋದಿ ಜಿಯವರ ಪ್ರಯತ್ನದಿಂದಾಗಿ, ಕೋಲ್ಕತ್ತಾದ ವಿಶ್ವಪ್ರಸಿದ್ಧ ದುರ್ಗಾ ಪೂಜೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಗಿದೆ. ಮಾ ದುರ್ಗೆಯ ಆರಾಧನೆಯು ಕೆಟ್ಟದ್ದರ ವಿರುದ್ಧ ಒಳ್ಳೆಯದ ವಿಜಯವನ್ನು ಸಂಕೇತಿಸುತ್ತದೆ. ಮಾ ದುರ್ಗೆಯ ಆಶೀರ್ವಾದದಿಂದ ಪಶ್ಚಿಮ ಬಂಗಾಳವು ಸಮೃದ್ಧಿಯ ಹಾದಿಯಲ್ಲಿ ಬೆಳೆಯಲಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ