Tv9 Education Expo: SSLC, PUC ನಂತರ ಗೊಂದಲಕ್ಕೆ ಟಿವಿ9 ಎಜುಕೇಶನ್ ಎಕ್ಸಪೋದಲ್ಲಿದೆ ಪರಿಹಾರ, ಬನ್ನಿ ಭಾಗವಹಿಸಿ

Tv9 Education Expo: SSLC, PUC ನಂತರ ಗೊಂದಲಕ್ಕೆ ಟಿವಿ9 ಎಜುಕೇಶನ್ ಎಕ್ಸಪೋದಲ್ಲಿದೆ ಪರಿಹಾರ, ಬನ್ನಿ ಭಾಗವಹಿಸಿ

ವಿವೇಕ ಬಿರಾದಾರ
|

Updated on: Apr 12, 2024 | 12:15 PM

ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಶಿಕ್ಷಣ ಮೇಳ (ಟಿವಿ9 ಎಜುಕೇಶನ್ ಸಮಿಟ್​-2024) ಆಯೋಜಿಸಲಾಗಿದೆ. ಈ ಕಾರ್ಯಕ್ರಮ ಇಂದಿನಿಂದ ಮೂರು ದಿನಗಳ ಕಾಲ (12,13 ಮತ್ತು 14) ರ ವರೆಗು ನಡೆಯಲಿದೆ. ಟಿವಿ9 ಎಜುಕೇಷನ್ ಸಮಿಟ್ ಅನ್ನು ನಟ ಯುವ ರಾಜ್​ಕುಮಾರ್ ಉದ್ಘಟಿಸಿದರು.

SSLC, PUC ಬಳಿಕ ಮಕ್ಕಳ ಹೆಚ್ಚಿನ ಶಿಕ್ಷಣ ಬಗ್ಗೆ ಯೋಚಿಸುತ್ತಿರುವ ಪೋಷಕರಿಗಾಗಿ, ಟಿವಿ9 ದಾರಿ ತೋರಿಸಿದೆ. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಶಿಕ್ಷಣ ಮೇಳ (ಟಿವಿ9 ಎಜುಕೇಶನ್ ಸಮಿಟ್​-2024) ಆಯೋಜಿಸಲಾಗಿದೆ. ಈ ಕಾರ್ಯಕ್ರಮ ಇಂದಿನಿಂದ ಮೂರು ದಿನಗಳ ಕಾಲ (12,13 ಮತ್ತು 14) ರ ವರೆಗು ನಡೆಯಲಿದೆ. ಟಿವಿ9 ಎಜುಕೇಶನ್ ಸಮಿಟ್ ಅನ್ನು ನಟ ಯುವ ರಾಜ್​ಕುಮಾರ್ ಉದ್ಘಟಿಸಿದರು. ​ಟಿವಿ9 ಎಜುಕೇಷನ್ ಸಮಿಟ್​ನಲ್ಲಿ ನಿಮ್ಮ ಇಷ್ಟದ ಕೋರ್ಸ್​ ಮತ್ತು ಶಿಕ್ಷಣ ಸಂಸ್ಥೆಗಳ ಬಗ್ಗೆ ಶಿಕ್ಷಣ ತಜ್ಞರಿಂದ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ. ಮಕ್ಕಳೊಂದಿಗೆ ಪೋಷಕರು ಬಂದು ಪೂರ್ಣ ಮಾಹಿತಿ ಪಡೆಯಬಹುದು.

ಎಕ್ಸ್​ಪೋದಲ್ಲಿ ಲ್ಲಿ 70 ಕ್ಕೂ ಹೆಚ್ಚು ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳು ಭಾಗವಹಿಸಿವೆ. ಇಂಜಿನಿಯರಿಂಗ್, ಮೆಡಿಕಲ್, ನೀಟ್ ಕೋಚಿಂಗ್, ಸಿಎ, ಹೋಟೆಲ್ ಮ್ಯಾನೇಜ್ಮೆಂಟ್, ಮಾಸ್ಟರ್ ಡಿಗ್ರಿ, bbm (ಬ್ಯಾಚುಲರ್ ಡಿಗ್ರಿ) ಕಮಾರ್ಸ್ ಡಿಗ್ರಿ, ಓವರ್ ಸೀಸ್ ಎಜುಕೇಶನ್ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಈ ಎಕ್ಸ್​ಪೋ ಬೆಳಿಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೂ ನಡೆಯಲಿದೆ.

ಅಲ್ಲದೇ ಸಿಇಟಿ, ನೀಟ್, ಹಾಗೂ ಕ್ಯಾಟ್ ಎಕ್ಸಾಮ್, ಒವರ್ ಸೀಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆಯು ಮಾಹಿತಿ ಸಿಗಲಿದೆ, ಎಕ್ಸ್​ಪೋಗೆ ಬರುವವರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.