Tv9 Education Summit 2025: ಪರೀಕ್ಷೆಯ ನಂತರ ಗೊಂದಲ ಬೇಡ, ಸರಿಯಾದ ಕೋರ್ಸ್​ ಆಯ್ಕೆ ಹೇಗೆ? ಇಲ್ಲಿದೆ ಮಾಹಿತಿ

Updated on: Apr 06, 2025 | 11:29 AM

ಪಿಯು ಪರೀಕ್ಷೆ ಮುಗಿದಿದ್ದು, ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದೆ. ಎಸ್​ಎಸ್​ಎಲ್​ಸಿ ಪರೀಕ್ಷೆ ಕೂಡ ಮುಕ್ತಾಯಗೊಂಡಿದೆ. ವಿದ್ಯಾರ್ಥಿಗಳು ಮುಂದಿನ ಕೋರ್ಸ್ ಮತ್ತು ಭವಿಷ್ಯದ ಬಗ್ಗೆ ಗೊಂದಲದಲ್ಲಿದ್ದಾರೆ. ಟಿವಿ9 ಎಜುಕೇಶನ್ ಎಕ್ಸ್​ಪೋ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಪರಿಹಾರ ನೀಡಲಿದೆ. ಈ ಮೇಳದಲ್ಲಿನ ಪ್ರಮುಖ ಅಂಶಗಳನ್ನು ಈ ಸುದ್ದಿಯಲ್ಲಿ ನೀಡಲಾಗಿದೆ.

ಬೆಂಗಳೂರು, ಏಪ್ರಿಲ್ 06: ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ಪರೀಕ್ಷೆ ಬಳಿಕ ಎಲ್ಲಾ ವಿದ್ಯಾರ್ಥಿಗಳಿಗೆ ನಾವು ಮುಂದೆ ಯಾವ ಕೋರ್ಸ್​ಗಳನ್ನು ತೆಗೆದುಕೊಳ್ಳಬೇಕೆಂಬ ಗೊಂದಲವಿರುತ್ತದೆ. ಕೆಲವರು ಫಲಿತಾಂಶ ಬಂದ ಬಳಿಕ ನೋಡೋಣ ಎಂದು ಯೋಚಿಸಿದರೆ ಇನ್ನೂ ಕೆಲವರು ತಮಗೆ ಇಷ್ಟೇ ಫಲಿತಾಂಶ ಬರುತ್ತದೆ ಮುಂದೇನು ಮಾಡಬೇಕೆಂದು ಮೊದಲೇ ಆಲೋಚಿಸುತ್ತಾರೆ.

ಮುಂದೆ ಯಾವ ಕೋರ್ಸ್ ಅನ್ನು ಆಯ್ಕೆ ಮಾಡಬೇಕು, ಯಾವ ವೃತ್ತಿಯನ್ನು ಆರಿಸಿಕೊಳ್ಳಬೇಕು ಎಂಬುದರ ಬಗ್ಗೆ ಅನಿಶ್ಚಿತತೆ ಅವರನ್ನು ಕಾಡುತ್ತಿದೆ. ಈ ಗೊಂದಲವನ್ನು ನಿವಾರಿಸಲು ಟಿವಿ9 ಎಜುಕೇಶನ್ ಎಕ್ಸ್​ಪೋ ಒಂದು ಅತ್ಯುತ್ತಮ ವೇದಿಕೆಯಾಗಿದೆ. ಸಾವಿರಾರು ವಿದ್ಯಾರ್ಥಿಗಳು ಮತ್ತು ಪೋಷಕರು ಈ ಮೇಳದಲ್ಲಿ ಭಾಗವಹಿಸಿ, ವಿವಿಧ ಶಿಕ್ಷಣ ಸಂಸ್ಥೆಗಳು ಮತ್ತು ಕೋರ್ಸ್‌ಗಳ ಕುರಿತು ಮಾಹಿತಿ ಪಡೆದಿದ್ದಾರೆ.

ಕೌನ್ಸೆಲಿಂಗ್ ಅವಕಾಶಗಳನ್ನು ಒದಗಿಸುವ ಮೂಲಕ, ಟಿವಿ9 ಎಜುಕೇಶನ್ ಎಕ್ಸ್ಪೋ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಭವಿಷ್ಯವನ್ನು ರೂಪಿಸಲು ಸಹಾಯ ಮಾಡಿದೆ. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಲು ಈ ಮೇಳವು ಒಂದು ಪರಿಣಾಮಕಾರಿ ವೇದಿಕೆಯಾಗಿದೆ ಎಂದು ಹೇಳಬಹುದು. ಈ ಮೇಳದಲ್ಲಿ ವಿವಿಧ ವೃತ್ತಿಪರ ಮಾರ್ಗದರ್ಶನಗಳು, ಶಿಕ್ಷಣ ಸಾಲದ ಮಾಹಿತಿ ಮತ್ತು ಇನ್ನಿತರ ಅನೇಕ ಅಗತ್ಯ ಮಾಹಿತಿಗಳು ಲಭ್ಯವಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ