Tv9 ಎಜುಕೇಶನ್​ ಸಮಿತ್​: ಅತಿಯಾಸ್​ ಎಲೆಕ್ಟ್ರಿಕ್​ ಬೈಕ್​ ಗೆದ್ದ ವಿದ್ಯಾರ್ಥಿ

Tv9 ಎಜುಕೇಶನ್​ ಸಮಿತ್​: ಅತಿಯಾಸ್​ ಎಲೆಕ್ಟ್ರಿಕ್​ ಬೈಕ್​ ಗೆದ್ದ ವಿದ್ಯಾರ್ಥಿ

ಗಂಗಾಧರ​ ಬ. ಸಾಬೋಜಿ
|

Updated on:Jun 11, 2023 | 6:28 PM

Tv9 ಶಿಕ್ಷಣ ಶೃಂಗಸಭೆಗೆ ಆಗಮಿಸಿದ್ದ ವಿದ್ಯಾರ್ಥಿ ಒಬ್ಬ ಅತಿಯಾಸ್​ ಎಲೆಕ್ಟ್ರಿಕ್ ಸ್ಕೂಟರ್ ಗೆದಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.​

ಬೆಂಗಳೂರು: ಹುಬ್ಬಳ್ಳಿ ಮತ್ತು ಗುಲ್ಬರ್ಗಾದಲ್ಲಿ ಅಭೂತಪೂರ್ವ ಯಶಸ್ಸಿನ ಬಳಿಕ ಟಿವಿ9 ಕನ್ನಡದ 6ನೇ ಶಿಕ್ಷಣ ಶೃಂಗಸಭೆಯನ್ನು (TV9 Kannada Education Summit’2023) ಬೆಂಗಳೂರಿನಲ್ಲಿ ಸಹ ಆರಂಭಿಸಲಾಗಿದ್ದು, ಜೂನ್ 9 ರಿಂದ 11 ರವರೆಗೆ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ನಡೆಯಲಿದೆ. Tv9 ಶಿಕ್ಷಣ ಶೃಂಗಸಭೆಗೆ ಇಂದು 3ನೇ ದಿನವಾಗಿದ್ದು, ವಿದ್ಯಾರ್ಥಿಗಳು, ಪೋಷಕರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು TV9 ಎಕ್ಸ್​ಪೋ ಒಂದು ಉತ್ತಮ ವೇದಿಕೆಯಾಗಿದೆ. ಈಗಾಗಲೇ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ಎಜುಕೇಷನ್​ ಸಮಿಟ್​ಗೆ ಆಗಮಿಸಿದ್ದ ವಿದ್ಯಾರ್ಥಿ ಒಬ್ಬ ಅತಿಯಾಸ್​ ಎಲೆಕ್ಟ್ರಿಕ್ ಸ್ಕೂಟರ್ ಗೆದಿದ್ದಾನೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Published on: Jun 11, 2023 06:27 PM