TV9 ‘ಏನ್ ರೋಡ್ ಗುರು’ ಅಭಿಯಾನದ ಇಂಪ್ಯಾಕ್ಟ್: ಬೆಂಗಳೂರಿನ ಕೆಲವು ರಸ್ತೆ ಗುಂಡಿಗಳಿಗೆ ಮುಕ್ತಿ
TV9 ಏನ್ ರೋಡ್ ಗುರು ಅಭಿಯಾನದ ಬೆನ್ನಲ್ಲೇ ಬೆಂಗಳೂರಿನ ಸುಬ್ಬಯ್ಯ ವೃತ್ತದಿಂದ ರಿಚ್ಮಂಡ್ ವೃತ್ತದವರೆಗಿನ ರಸ್ತೆಗುಂಡಿಗಳಿಗೆ ಮುಕ್ತಿ ಸಿಕ್ಕಿದೆ. ರಸ್ತೆ ಗುಂಡಿಗಳನ್ನ ತುರ್ತಾಗಿ ಮುಚ್ಚುವಂತೆ ಸಿಎಂ ಸಿದ್ದರಾಮಯ್ಯ ಅವರ ಖಡಕ್ ಸೂಚನೆ ಬೆನ್ನಲ್ಲೇ ಹಲವು ರಸ್ತೆಗಳಿಗೆ ಡಾಂಬರೀಕರಣ ಕಾರ್ಯ ಭರದಿಂದ ಸಾಗಿದ್ದು, ಬೆಂಗಳೂರಿನ ಜನ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.
ಬೆಂಗಳೂರು, (ಸೆಪ್ಟೆಂಬರ್, 24): TV9 ಏನ್ ರೋಡ್ ಗುರು ಅಭಿಯಾನದ ಬೆನ್ನಲ್ಲೇ ಎಚ್ಚೆತ್ತಿರೋ ರಾಜ್ಯ ಸರ್ಕಾರ, ಬೆಂಗಳೂರಿನ ಹಲವೆಡೆ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿದೆ. ಸುಬ್ಬಯ್ಯ ವೃತ್ತದಿಂದ ರಿಚ್ಮಂಡ್ ವೃತ್ತದವರೆಗಿನ ರಸ್ತೆಗೆ ಡಾಂಬರೀಕರಣ ಮಾಡಲಾಗಿದ್ದು, ಆ ಮೂಲಕ ರಸ್ತೆ ಗುಂಡಿಗಳಿಂದ ಬೇಸತ್ತಿದ್ದ ಜನರಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿ ಸಿಕ್ಕಿದೆ. ಇನ್ನು ಡಾಂಬರ್ ಹಾಕೋದನ್ನು ತಡರಾತ್ರಿಯೂ ನಿಂತು ಜನರು ವೀಕ್ಷಿಸಿದ್ದು ವಿಶೇಷವಾಗಿತ್ತು.
TV9ಗೆ ಧನ್ಯವಾದ ತಿಳಿಸಿದ ಜನ
ಬೆಂಗಳೂರಿನ ರಸ್ತೆಗುಂಡಿಗಳಿಂದಾಗಿ ಜನರಿಗೆ, ವಾಹನ ಸವಾರರಿಗೆ ಉಂಟಾಗ್ತಿರೋ ಸಮಸ್ಯೆಗಳ ಬಗ್ಗೆ TV9 ನಿರಂತರ ವರದಿ ಮಾಡಿತ್ತು. ಆ ಮೂಲಕ ಜನಸಾಮಾನ್ಯರ ಸಮಸ್ಯೆಗೆ ದನಿಯಾಗಿತ್ತು. ಸತತ ವರದಿಗಳ ಬಳಿಕ ಎಚ್ಚೆತ್ತ ಸರ್ಕಾರ ರಸ್ತೆಗುಂಡಿಗಳನ್ನ ತುರ್ತಾಗಿ ಮುಚ್ಚಲು ಅಧಿಕಾರಿಗಳಿಗೆ ಆದೇಶಿಸಿತ್ತು. ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ತ್ವರಿತಗತಿಯಲ್ಲಿ ರಸ್ತೆ ಗುಂಡಿ ಮುಚ್ಚುವಂತೆ ಆದೇಶ ಮಾಡಿದ್ದರು. ಇಲ್ಲದಿದ್ದರೆ ಕಾನೂನು ಕ್ರಮಕೈಗೊಳ್ಳುವುದಾಗಿಯೂ ಖಡಕ್ ಎಚ್ಚರಿಕೆ ನೀಡಿದ್ದರು. ಆ ಬೆನ್ನಲ್ಲೇ ಎಚ್ಚೆತ್ತುಕೊಂಡಿರೋ ಅಧಿಕಾರಿಗಳು ರಸ್ತೆಗುಂಡಿಗಳ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇದರಿಂದ ನಿಟ್ಟುಸಿರು ಬಿಟ್ಟಿರೋ ಜನರು TV9ಗೆ ಧನ್ಯವಾದ ತಿಳಿಸಿದ್ದಾರೆ.
ಇನ್ನಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
