Tv9 Festival Of India Live: ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ ವೈಭವ: ನೇರಪ್ರಸಾರ ಇಲ್ಲಿದೆ
ನವದೆಹಲಿಯ ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದಲ್ಲಿ 'ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ' ಸಾಂಸ್ಕೃತಿಕ ಉತ್ಸವವು ಅದ್ಧೂರಿಯಾಗಿ ನಡೆಯುತ್ತಿದೆ. ಅಕ್ಟೋಬರ್ 20ರವರೆಗೆ ಜರುಗಲಿರುವ ಈ ಹಬ್ಬದಲ್ಲಿ ದೆಹಲಿಯ ಅತ್ಯಂತ ಎತ್ತರದ ದುರ್ಗಾ ಪೂಜಾ ಮಂಟಪ ಹಾಗೂ ನಿಜಾಮಿ ಬಂಧು ಅವರ ಸೂಫಿ ಸಂಗೀತ ರಸಸಂಜೆ ಪ್ರಮುಖ ಆಕರ್ಷಣೆಯಾಗಿದೆ.
ನವದೆಹಲಿ, ಅಕ್ಟೋಬರ್ 19: ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಬಿಂಬಿಸುವ ‘ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ’ ನವದೆಹಲಿಯ ಐತಿಹಾಸಿಕ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಅಕ್ಟೋಬರ್ 16ರಿಂದ ಆರಂಭವಾಗಿರುವ ಈ ಐದು ದಿನಗಳ ಸಾಂಸ್ಕೃತಿಕ ಉತ್ಸವವು ಅಕ್ಟೋಬರ್ 20ರವರೆಗೆ ಜರುಗಲಿದೆ. ದೆಹಲಿಯ ಅತ್ಯಂತ ಎತ್ತರದ ಹಾಗೂ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ದುರ್ಗಾ ಪೂಜಾ ಮಂಟಪವು ಈ ಹಬ್ಬದ ಪ್ರಮುಖ ಆಕರ್ಷಣೆಯಾಗಿದೆ.
ಇಂದು ಸಂಜೆ ಸೂಫಿ ದಿಗ್ಗಜರಾದ ನಿಜಾಮಿ ಬಂಧು, ಸೌರಭ್ ಶೋರೆ ಹಾಗೂ ಡಿಜೆ ವೆರೋನಿಕಾ ಅವರ ಸಂಗೀತ ರಸಸಂಜೆ ನೆರವೇರಲಿದೆ. ಯುವಕರು ಮತ್ತು ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು, ಕಲಾ ಕಾರ್ಯಾಗಾರಗಳನ್ನು ಸಹ ಆಯೋಜಿಸಲಾಗಿದೆ. ಇಂದಿನ ಕಾರ್ಯಕ್ರಮಗಳ ನೇರಪ್ರಸಾರ ಇಲ್ಲಿದೆ.
ಇನ್ನಷ್ಟು ವೀಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
