TV9 Festival of India: ನವರಾತ್ರಿಯ ಶುಭ ಸಂದರ್ಭದಲ್ಲಿ, ದುರ್ಗಾ ದೇವಿಗೆ ಸಂಗೀತ ನಮನ ಸಲ್ಲಿಸಿದ ಬಿಜೆಪಿ ಸಂಸದ ಮನೋಜ್ ತಿವಾರಿ
ಟಿವಿ9 ನೆಟ್ವರ್ಕ್ ನವರಾತ್ರಿ ಅಂಗವಾಗಿ ದೆಹಲಿಯ ಮೇಜರ್ ಧ್ಯಾನ್ಚಂದ್ ಸ್ಟೇಡಿಯಂನಲ್ಲಿ ಆಯೋಜಿಸಿರುವ ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ(TV9 Festival Of India) ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ಮನೋಜ್ ತಿವಾರಿ ದುರ್ಗಾ ದೇವಿಗೆ ನಮಿಸಿ ಸಂಗೀತ ನಮನ ಸಲ್ಲಿಸಿದ್ದರು. ಟಿವಿ9 ಗ್ರೂಪ್‌ನ ಎಂಡಿ ಮತ್ತು ಸಿಇಒ ಬರುಣ್ ದಾಸ್ ಅವರು ಅಕ್ಟೋಬರ್ 20 ರಂದು ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿದ್ದರು.

ಭೋಜ್ಪುರಿ ಗಾಯಕರೂ ಆಗಿರುವ ಮನೋಜ್ ತಿವಾರಿ ದುರ್ಗಾ ಪೂಜೆಯ ಸಂದರ್ಭದಲ್ಲಿ ಭಕ್ತಿಗೀತೆಯನ್ನು ಹಾಡಿ, ಭಕ್ತಿ ಇಮ್ಮಡಿಗೊಳಿಸಿದರು.
ಟಿವಿ9 ನೆಟ್ವರ್ಕ್ ಪ್ರಸ್ತುತ ಪಡಿಸಿರುವ ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾದ ಎರಡನೇ ದಿನದ ಕಾರ್ಯಕ್ರಮದಲ್ಲಿ ಹಲವು ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.
ರಕ್ಷಣಾ ಸಚಿವ ರಾಜ್ನಾಥ್ ಸಿಂಗ್, ಸಚಿವ ಗೋಪಾಲ ರೈ, ಬಿಜೆಪಿ ನಾಯಕ ತರುಣ್ ಚುಗ್, ಸಂಸದ ಗೌತಮ್ ಗಂಭೀರ್ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಕಾಂಗ್ರೆಸ್ ನಾಯಕ ಪವನ್ ಖೇಡಾ ಕೂಡ ಉತ್ಸವಕ್ಕೆ ಆಗಮಿಸಿ ದೇವಿಯ ಆಶೀರ್ವಾದ ಪಡೆದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ