Mysuru Dasara: ಜಂಬೂಸವಾರಿಯಂದು ಸಿಎಂ, ಡಿಸಿಎಂಗೆ ನೀಡಲು ವಿಶೇಷ ಗಿಫ್ಟ್ ರೆಡಿ ಮಾಡಿದ ಮೈಸೂರು ಕಲಾವಿದ
ಸಿಎಂ, ಡಿಸಿಎಂ ಅವರಿಗೆ ಉಡುಗೊರೆ ನೀಡಲು ಮೈಸೂರಿನ ಕಲಾವಿದ ರಾಜೇಶ್ ಅವರು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ಭಾವಚಿತ್ರ ಜೊತೆಗೆ ನ್ಯಾಯದೇವತೆಯ ಪಂಚಲೋಹದ ವಿಗ್ರಹ ನೀಡಲು ತಯಾರಿ ಮಾಡಿಕೊಂಡಿದ್ದು ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಅವರ ತಂದೆ ಕೆಂಪೇಗೌಡರ ತ್ರೀಡಿ ಭಾವಚಿತ್ರ ನೀಡಲು ಮುಂದಾಗಿದ್ದಾರೆ.
ಮೈಸೂರು, ಅ. 22: ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮದಲ್ಲಿ ಭಾಗಿಯಾಗಲು ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಮೈಸೂರಿಗೆ (Mysuru) ಭೇಟಿ ನೀಡಲಿದ್ದಾರೆ. ಹೀಗಾಗಿ ಸಿಎಂ, ಡಿಸಿಎಂ ಅವರಿಗೆ ಉಡುಗೊರೆ ನೀಡಲು ಮೈಸೂರಿನ ಕಲಾವಿದ ರಾಜೇಶ್ ಅವರು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರತಿ ವರ್ಷ ಜಂಬೂಸವಾರಿ ದಿನ ಸಿಎಂಗೆ ಕಲಾವಿದ ರಾಜೇಶ್ ವಿಶೇಷ ಗಿಫ್ಟ್ಗಳನ್ನು ನೀಡುತ್ತಾರೆ. ಅದರಂತೆ ಈ ವರ್ಷ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಪಂಚಲೋಹದ ತ್ರೀಡಿ ಭಾವಚಿತ್ರ ನೀಡಲು ಮುಂದಾಗಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ಭಾವಚಿತ್ರ ಜೊತೆಗೆ ನ್ಯಾಯದೇವತೆಯ ಪಂಚಲೋಹದ ವಿಗ್ರಹ ನೀಡಲು ತಯಾರಿ ಮಾಡಿಕೊಂಡಿದ್ದು ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಅವರ ತಂದೆ ಕೆಂಪೇಗೌಡರ ತ್ರೀಡಿ ಭಾವಚಿತ್ರ ನೀಡಲು ಮುಂದಾಗಿದ್ದಾರೆ. ಸಿಎಂ, ಡಿಸಿಎಂಗಾಗಿ ವಿಶೇಷ ಗಿಫ್ಟ್ ನೀಡಲು 15 ದಿನದಿಂದ ಕಲಾವಿದ ರಾಜೇಶ್ ಶ್ರಮಿಸುತ್ತಿದ್ದಾರೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆ ಬಾಗಿಲಿಗೆ ಬಂದ ಆಗಂತುಕ!
ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ

