AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ಕನ್ನಡಕ್ಕೆ 19 ವಸಂತಗಳ ಸಂಭ್ರಮ: ಜನಮನ ಗೆದ್ದ ರಾಜ್ಯದ ಮೊದಲ ವಾಹಿನಿ

ಟಿವಿ9 ಕನ್ನಡಕ್ಕೆ 19 ವಸಂತಗಳ ಸಂಭ್ರಮ: ಜನಮನ ಗೆದ್ದ ರಾಜ್ಯದ ಮೊದಲ ವಾಹಿನಿ

ಅಕ್ಷಯ್​ ಪಲ್ಲಮಜಲು​​
|

Updated on:Dec 09, 2025 | 11:37 AM

Share

ಟಿವಿ9 ಕನ್ನಡವು 19 ವರ್ಷಗಳನ್ನು ಪೂರೈಸಿ 20ನೇ ವರ್ಷಕ್ಕೆ ಕಾಲಿಟ್ಟಿದೆ. 24x7 ಸುದ್ದಿವಾಹಿನಿ ಆರಂಭಿಸಿದ ಟಿವಿ9, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ, ಮನೆ ಮಾತಾಗಿದೆ. ವೀಕ್ಷಕರು, ಕೇಬಲ್ ಆಪರೇಟರ್‌ಗಳು ಮತ್ತು ಸಿಬ್ಬಂದಿಯ ಬೆಂಬಲದಿಂದ ಇದು ಸಾಧ್ಯವಾಗಿದೆ. ಟಿವಿ9 ಜನಪರ ಮಾಧ್ಯಮವಾಗಿ ಗುರುತಿಸಿಕೊಂಡಿದೆ. ಇದೀಗ ಟಿವಿ9 19 ವರ್ಷಗಳ ಕಾಲ ಜನರ ಮನಸ್ಸಿನಲ್ಲಿ ಸ್ಥಾನ ಪಡೆದುಕೊಂಡು ಮುಂದುವರಿಯುತ್ತಿದೆ.

ಬೆಂಗಳೂರು, ಡಿ.9: ಟಿವಿ9 ಕನ್ನಡ ವಾಹಿನಿಯು (Tv9kannada) ತನ್ನ 19 ವರ್ಷಗಳ ಯಶಸ್ವಿ ಪಯಣವನ್ನು ಪೂರೈಸಿ, 20ನೇ ವರ್ಷಕ್ಕೆ ಕಾಲಿಟ್ಟಿದೆ. ಕರ್ನಾಟಕದಲ್ಲಿ 24×7 ಸುದ್ದಿವಾಹಿನಿಯಾಗಿ ಮೊದಲು ಶುರುವಾಗಿದ್ದು ಟಿವಿ9, ಇದೀಗ ರಾಜ್ಯದಲ್ಲಿ ದೊಡ್ಡ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ 19 ವರ್ಷಗಳಿಂದ ಟಿವಿ9 ರಾಜ್ಯದ ಮನೆ ಮಾತಾಗಿ ಬೆಳೆದು ನಿಂತಿದೆ. ಯಾವುದೇ ಪ್ರಮುಖ ಬೆಳವಣಿಗೆಗಳಾದಾಗಲೂ ಜನರು ಟಿವಿ9 ಹಾಕಿ ಎಂದು ಹೇಳುವಷ್ಟು ಪ್ರಬಲವಾಗಿ ಜನರ ಮನಸ್ಸಿನಲ್ಲಿ ಬೇರೂರಿದೆ. ಟಿವಿ9 ಕೇವಲ ಸುದ್ದಿಗಳನ್ನು ಪ್ರಸಾರ ಮಾಡುವುದಷ್ಟೇ ಅಲ್ಲದೆ, ಸಮಾಜಮುಖಿ ಕಾರ್ಯಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು, ಮಳೆ-ನೆರೆ ಹಾವಳಿಗಳ ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸುವುದು, ಮತ್ತು ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನೂ ಮಾಡುತ್ತಿದೆ. ಜನರು ಟಿವಿ9 ಕೈ ಹಿಡಿದು ನಡೆಸಿದ್ದಾರೆ, ಮತ್ತು ಇವತ್ತಿಗೂ ಜನಸಾಮಾನ್ಯರಿಗೆ ಟಿವಿ9 ಎಂದರೆ ನಿಮ್ಮ ಟಿವಿ9 ಎಂಬ ನಂಬಿಕೆ ಬಲವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Dec 09, 2025 11:33 AM