ರಾಮಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನ ಬಾಲರಾಮನ ಎಕ್ಸ್​ಕ್ಲ್ಯೂಸಿವ್ ಫೋಟೋ ಟಿವಿ9 ಕನ್ನಡ ವಾಹಿನಿಗೆ ಲಭ್ಯ

ಅರುಣ್​ ಕುಮಾರ್​ ಬೆಳ್ಳಿ

Updated on: Jan 19, 2024 | 5:48 PM

ಬಾಲರಾಮನ ಮುಖದಲ್ಲಿ ಕಾಣುವ ತೇಜಸ್ಸು ನೋಡುಗನನ್ನು ಪುನೀತನಾಗಿಸುತ್ತದೆ. ಮುಖದಲ್ಲಿ ಮಂದಹಾಸ, ಕೈಯಲ್ಲಿ ಆದಿಶಕ್ತಿದೇವಿ, ಬಾಣ, ಸ್ವಸ್ತಿಕ್ ಮುದ್ರೆ, ಜ್ಞಾನಮುದ್ರೆ, ಕೊರಳಲ್ಲಿ ಆಭರಣ-ಹೀಗೆ ಪ್ರತಿಯೊಂದು ಅಂಶವನ್ನು ಗಮನದಲ್ಲಿಟ್ಟುಕೊಂಡು ಅರುಣ್ ಮೂರ್ತಿಯನ್ನು ಕೆತ್ತಿದ್ದಾರೆ.

ಬೆಂಗಳೂರು: ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಬುಧವಾರದಂದು ದೇವಾಲಯದ ಪ್ರಾಂಗಣ ಪ್ರವೇಶಿಸಿ ನಿನ್ನೆ ಅಂದರೆ ಗುರುವಾರ ಗರ್ಭಗುಡಿ ಸೇರಿದ ಬಾಲರಾಮನ ಮೂರ್ತಿ (idol of Ram Lalla) ಹೇಗಿದೆ ಅಂತ ನೋಡುವ ಕಾತುರ ಎಲ್ಲರಿಗಿತ್ತು. ಗರ್ಭಗುಡಿ (sanctum sanctorum) ಸೇರುವ ಮೊದಲು ಬಟ್ಟೆಯ ಹೊದಿಕೆಯಲ್ಲಿದ್ದ ಬಾಲರಾಮನ ಮೂರ್ತಿ ಗರ್ಭಗುಡಿ ಪ್ರವೇಶಿಸಿದ ಬಳಿಕವೂ ಕಣ್ಣಿನ ಮೇಲೆ ಹಳದಿ ಪಟ್ಟಿಯನ್ನು ತೆರೆದಿರಲಿಲ್ಲ. ಹಾಗಾಗಿ, ಮೂರ್ತಿಯನ್ನು ಇಡಿಯಾಗಿ ಕಣ್ತುಂಬಿಕೊಳ್ಳುವುದು ಸಾಧ್ಯವಾಗಿರಲಿಲ್ಲ. ಆದರೆ ಇಂದು ಹಳದಿಪಟ್ಟಿಯನ್ನು ಸಹ ತೆಗೆಯಲಾಗಿದ್ದು ಮೂರ್ತಿಯ ಸಂಪೂರ್ಣ ಫೋಟೋ ಟಿವಿ9 ಕನ್ನಡವಾಹಿನಿಗೆ ಎಕ್ಸ್ ಕ್ಲ್ಯೂಸಿವ್ ಆಗಿ ಲಭ್ಯವಾಗಿದೆ. ದೃಶ್ಯದಲ್ಲಿ ನೀವು ವಿಗ್ರಹವನ್ನು ನೋಡಬಹುದು. ನಮ್ಮ ಮೈಸೂರಿನ ಹೆಮ್ಮೆ ಅರುಣ್ ಯೋಗಿರಾಜ್ (Arun Yogiraj) ಕೆತ್ತಿರುವ ಬಾಲರಾಮನ ವಿಗ್ರಹ ಇದೇ. ಶಿಲ್ಪಿಯ ನೈಪುಣ್ಯತೆಯನ್ನು ಗಮನಿಸಿ ಮಾರಾಯ್ರೇ. ಬಾಲರಾಮನ ಮುಖದಲ್ಲಿ ಕಾಣುವ ತೇಜಸ್ಸು ನೋj, ಕೊರಳಲ್ಲಿ ಆಭರಣ-ಹೀಗೆ ಪ್ರತಿಯೊಂದು ಅಂಶವನ್ನು ಗಮನದಲ್ಲಿಟ್ಟುಕೊಂಡು ಅರುಣ್ ಮೂರ್ತಿಯನ್ನು ಕೆತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.