ಭಾರತದ ಸಾಫ್ಟ್ ಪವರ್ ಬಗ್ಗೆ ಟಿವಿ9 ನೆಟ್‌ವರ್ಕ್ ಎಂಡಿ, ಸಿಇಒ ಬರುಣ್ ದಾಸ್ ಮಾತು
What India Thinks Today Global Summit: ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಗ್ಲೋಬಲ್ ಸಮಿಟ್ಗೆ ಚಾಲನೆ ನೀಡಿ ಮಾತನಾಡಿದ ಟಿವಿ9 ನೆಟ್‌ವರ್ಕ್ ಎಂಡಿ ಮತ್ತು ಸಿಇಒ ಬರುಣ್ ದಾಸ್ ಭಾರತ ವಿಶ್ವದಲ್ಲೇ ಸಾಫ್ಟ್ ಪವರ್ ಆಗಿ ಬೆಳೆಯುವುದರ ಬಗ್ಗೆ ಮಾತನಾಡಿದರು. ಅಮೇರಿಕನ್ ರಾಜಕೀಯ ವಿಜ್ಞಾನಿ ಜೋಸೆಫ್ ನೈ ಅವರ ಪ್ರಕಾರ, ಬಲದ ಬದಲಿಗೆ ಆಕರ್ಷಿಸುವ ಮತ್ತು ಮನವೊಲಿಸುವ ಮೂಲಕ ದೇಶವು ತನ್ನ ದೃಷ್ಟಿಕೋನವನ್ನು ಒಪ್ಪಿಕೊಳ್ಳುವಂತೆ ಮಾಡಿದರೆ ಅದನ್ನು ಸಾಫ್ಟ್ ಪವರ್ ಎಂದು ಕರೆಯಲಾಗುತ್ತದೆ ಎಂದು ಉಲೇಖಿಸಿದ್ದಾರೆ.
ದೆಹಲಿ, ಫೆಬ್ರವರಿ 25: ಟಿವಿ9 ನೆಟ್‌ವರ್ಕ್ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ (What India Thinks Today Global Summit) ಗ್ಲೋಬಲ್ ಸಮಿಟ್ನ ಎರಡನೇ ಆವೃತ್ತಿಯನ್ನು ಆಯೋಜಿಸಲಾಗಿದೆ. ಇಂದು ಫೆಬ್ರವರಿ 25 ರಿಂದ ಫೆಬ್ರವರಿ 27 ರವರೆಗೆ ನಡೆಯಲಿರುವ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಸಿದ್ಧ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಗ್ಲೋಬಲ್ ಸಮಿಟ್ಗೆ ಚಾಲನೆ ನೀಡಿ ಮಾತನಾಡಿದ ಟಿವಿ9 ನೆಟ್‌ವರ್ಕ್ ಎಂಡಿ ಮತ್ತು ಸಿಇಒ ಬರುಣ್ ದಾಸ್ (Barun Das), ಭಾರತ ವಿಶ್ವದಲ್ಲೇ ಸಾಫ್ಟ್ ಪವರ್ ಆಗಿ ಬೆಳೆಯುವುದರ ಬಗ್ಗೆ ಮಾತನಾಡಿದರು. ‘ಸಾಫ್ಟ್ ಪವರ್’ ಎಂಬ ಪದವನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಅಮೇರಿಕನ್ ರಾಜಕೀಯ ವಿಜ್ಞಾನಿ ಜೋಸೆಫ್ ನೈ ಅವರ ಪ್ರಕಾರ, ಬಲದ ಬದಲಿಗೆ ಆಕರ್ಷಿಸುವ ಮತ್ತು ಮನವೊಲಿಸುವ ಮೂಲಕ ದೇಶವು ತನ್ನ ದೃಷ್ಟಿಕೋನವನ್ನು ಒಪ್ಪಿಕೊಳ್ಳುವಂತೆ ಮಾಡಿದರೆ ಅದನ್ನು ಸಾಫ್ಟ್ ಪವರ್ ಎಂದು ಕರೆಯಲಾಗುತ್ತದೆ ಎಂದು ಉಲೇಖಿಸಿದ್ದಾರೆ. ಭಾರತವು ಈಗ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದ್ದಂತೆ ಉನ್ನತ ಸ್ಥಾನವನ್ನು ಪಡೆಯುತ್ತಿದೆ. ಕ್ರೀಡೆಗಳು, ಚಲನಚಿತ್ರಗಳು ಮತ್ತು ಸಂಗೀತ ಕ್ಷೇತ್ರದಲ್ಲಿ ಉತ್ಕೃಷ್ಟತೆಯ ಮೂಲಕ ಭಾರತಕ್ಕೆ ಅಪಾರ ಅವಕಾಶಗಳಿವೆ ಎಂದು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.