ಮೈಸೂರು: ವರುಣ ಅಸೆಂಬ್ಲಿ ಕ್ಷೇತ್ರದ 5 ಸರ್ಕಾರಿ ಶಾಲೆಗಳ ವಸ್ತುಸ್ಥಿತಿ ಟಿವಿ 9 ರಿಯಾಲಿಟಿ ಚೆಕ್ ನಲ್ಲಿ ಅನಾವರಣಗೊಂಡಿರುವುದು ಹೀಗೆ

| Updated By: ಸಾಧು ಶ್ರೀನಾಥ್​

Updated on: Nov 17, 2023 | 4:38 PM

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಟಿವಿ 9 ಕ್ಯಾಮರಾ ಹಿಡಿದು ರಿಯಾಲ್ಟಿ ಚೆಕ್​ ಮಾಡಿದೆ. ಮೇಲಿನ 5 ಶಾಲೆಗಳ ಪಟ್ಟಿ ಮಾಡಿ ಸಿಎಸ್ಆರ್ ಫಂಡ್ ಬಿಡುಗಡೆಗೆ ಯತಿಂದ್ರ ಸಿದ್ದರಾಮಯ್ಯ ಸೂಚಿಸಿದ್ದಾರೆ ಎಂಬುದು ಮೊಬೈಲ್ ಸಂಭಾಷಣೆಯ ತಿರುಳಾಗಿದೆ. ಹಾಗಂತ ಈ 5 ಶಾಲೆಗಳ ಸ್ಥಿತಿಗತಿಗಳ ಬಗ್ಗೆ ರಿಯಾಲ್ಟಿ ಚೆಕ್​ ಮಾಡಿದಾಗ ಈ ಸರ್ಕಾರಿ ಶಾಲೆಗಳ ದುಃಸ್ಥಿತಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅದರಲ್ಲೂ 5 ಶಾಲೆಗಳ ಪೈಕಿ ಮೆಲ್ಲಹಳ್ಳಿ ಶಾಲೆಯ ಪರಿಸ್ಥಿತಿ ಶೋಚನೀಯವಾಗಿದೆ.

ಮೈಸೂರು, ನವೆಂಬರ್ 17: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಮೊಬೈಲ್​ನಲ್ಲಿ ಮಾತನಾಡಿರುವ ವಿಡಿಯೋವನ್ನು ಸಾಕ್ಷ್ಯವಾಗಿಟ್ಟುಕೊಂಡು ಅಪ್ಪ-ಮಗ ತಮ್ಮ ಆಡಳಿತದಲ್ಲಿ ಟ್ರಾನ್ಸಫರ್​​ ಕೇಸುಗಳನ್ನು ಕೈಗೆತ್ತಿಕೊಂಡು ಕಾಸು ಮಾಡಿಕೊಳ್ಳುವ ಪ್ರೋಗ್ರಾಮ್​​ ಹಾಕಿಕೊಂಡಿದ್ದಾರೆ ಎಂದು ಹೆಚ್ ಡಿ ಕುಮಾರಸ್ವಾಮಿ ಆದಿಯಾಗಿ ಎಲ್ಲರೂ ಮುಗಿಬೀಳುತ್ತಿದ್ದಂತೆ ಮೈಸೂರಿನಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ಅವರು ತಾವು ಪ್ರತಿನಿಧಿಸುತ್ತಿರುವ ವರುಣ ಅಸೆಂಬ್ಲಿ ಕ್ಷೇತ್ರವನ್ನು ನೋಡಿಕೊಳ್ಳಲು ತಮ್ಮ ಪುತ್ರ ಯತೀಂದ್ರಗೆ (yathindra siddaramaiah) ಅಧಿಕೃತವಾಗಿಯೇ ಹೇಳಿದ್ದೇನೆ ಎಂದಿದ್ದಾರೆ. ಹಾಗಾಗಿ ತಮ್ಮ ಜೊತೆ ಮಾತನಾಡುವಾಗ ಆಡಳಿತಾತ್ಮಕವಾಗಿ ಅನೇಕ ವಿಷಯಗಳನ್ನು ಮಾತನಾಡುತ್ತಾರೆ. ಆದರೆ ವರ್ಗಾವಣೆ ದಂಧೆ (Transfer) ಎಂದು ಯತೀಂದ್ರ ವಿರುದ್ಧ ಕುಮಾರಸ್ವಾಮಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕುಮಾರಸ್ವಾಮಿ ದ್ವೇಷ, ಅಸೂಯೆ ರಾಜಕಾರಣ ಮಾಡುತ್ತಾರೆ. ಬರೀ ಸುಳ್ಳು ಹೇಳುವುದೇ ಮಾಜಿ ಸಿಎಂ ಕುಮಾರಸ್ವಾಮಿ ಕೆಲಸ. ಸುಳ್ಳೇ ಕುಮಾರಸ್ವಾಮಿಯವರ ಮನೆ ದೇವರು ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ವೈರಲ್ ವಿಡಿಯೋದಲ್ಲಿ ಸಿಎಸ್ಆರ್ ಫಂಡ್ ಕುರಿತು ಸಿಎಂ ವಿಶೇಷ ಕರ್ತವ್ಯಾಧಿಕಾರಿ ಮಹದೇವ ಎಂಬುವವರ ಬಳಿ ಮೊಬೈಲ್ ಕರೆ ಮಾಡಿ ಮಾತನಾಡಿದ್ದರು. ವರುಣ ವಿಧಾನಸಭಾ ಕ್ಷೇತ್ರದ 5 ಸರ್ಕಾರಿ ಶಾಲೆಯ ಕುರಿತು ಯತೀಂದ್ರ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದರು. ದೇವಲಾಪುರ, ಹಡಜನ, ಮೆಲ್ಲಹಳ್ಳಿ, ಮಾಧವಗೆರೆ, ಚಟ್ನಹಳ್ಳಿ ಪಾಳ್ಯ ಸರ್ಕಾರಿ ಈ ಐದು ಶಾಲೆಗಳಿಗೆ ಅನುದಾನ ನೀಡುವಂತೆ (csr fund donation school) ಯತೀಂದ್ರ ಮಾತನಾಡಿದ್ದರು.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಟಿವಿ 9 ಕ್ಯಾಮರಾ ಹಿಡಿದು ರಿಯಾಲ್ಟಿ ಚೆಕ್​ ಮಾಡಿದೆ. ಮೇಲಿನ 5 ಶಾಲೆಗಳ ಪಟ್ಟಿ ಮಾಡಿ ಸಿಎಸ್ಆರ್ ಫಂಡ್ ಬಿಡುಗಡೆಗೆ ಯತಿಂದ್ರ ಸಿದ್ದರಾಮಯ್ಯ ಸೂಚಿಸಿದ್ದಾರೆ ಎಂಬುದು ಮೊಬೈಲ್ ಸಂಭಾಷಣೆಯ ತಿರುಳಾಗಿದೆ. ಹಾಗಂತ ಈ 5 ಶಾಲೆಗಳ ಸ್ಥಿತಿಗತಿಗಳ ಬಗ್ಗೆ ರಿಯಾಲ್ಟಿ ಚೆಕ್​ ಮಾಡಿದಾಗ ಈ ಸರ್ಕಾರಿ ಶಾಲೆಗಳ ದುಃಸ್ಥಿತಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅದರಲ್ಲೂ 5 ಶಾಲೆಗಳ ಪೈಕಿ ಮೆಲ್ಲಹಳ್ಳಿ ಶಾಲೆಯ ಪರಿಸ್ಥಿತಿ ಶೋಚನೀಯವಾಗಿದೆ.

ಮೈಸೂರು ತಾಲೂಕಿನ ದೇವಲಾಪುರ ಗ್ರಾಮದ ಸರ್ಕಾರಿ ಶಾಲೆಯ ಎರಡು ಕಟ್ಟಡಗಳು ಶಿಥಿತಗೊಂಡಿವೆ. ಹದಗೆಟ್ಟಿರುವ ಶಾಲೆಯ ಮೇಲ್ಚಾವಣಿ ಕಂಪ್ಯೂಟರ್ ಕೊಠಡಿಯಾಗಿದೆ. 219 ಮಂದಿ ವಿದ್ಯಾರ್ಥಿಗಳು 10 ಮಂದಿ ಶಿಕ್ಷಕರನ್ನ ಹೊಂದಿರುವ ದೇವಲಾಪುರ ಶಾಲೆಯ ಎರಡು ಕೊಠಡಿಗಳ ದುರಸ್ಥಿಗೆ ಸರ್ಕಾರ 5 ಲಕ್ಷ ರೂಪಾಯಿ ಹಣ ನಿಗದಿ ಪಡಿಸಿದೆ.

ಇದನ್ನೂ ಓದಿ: ಯತೀಂದ್ರ ವಿಡಿಯೋ ಆರೋಪಕ್ಕೆ ಸಾಕ್ಷಿ ಸಮೇತ ಹೆಚ್​ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

ಹಡಜನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆ ಮತ್ತು ಮೇಲ್ಚಾವಣಿ ಬಿರುಕು ಬಿಟ್ಟಿರುವ ಹಿನ್ನೆಲೆ ಶಾಲಾ ಆಡಳಿತ ಮಂಡಳಿ ಅದನ್ನು ಸ್ಟೋರ್ ರೂಮ್ ಮಾಡಿ ಕೊಂಡಿದೆ. ಇನ್ನು ಹಡಜನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 143 ವಿದ್ಯಾರ್ಥಿಗಳು, 7 ಶಿಕ್ಷಕರನ್ನ ಒಳಗೊಂಡಿದೆ.

ಮೆಲ್ಲಹಳ್ಳಿ ಶಾಲೆಯ ಮೇಲ್ಚಾವಣಿ ಬೀಳುವ ಹಂತಕ್ಕೆ ತಲುಪಿದೆ. ಸುಸಜ್ಜಿತ ಕಟ್ಟಡವಿಲ್ಲದೆ ಶಾಲೆಯ ಆವರಣದಲ್ಲಿ ಕುಳಿತು ಒಟ್ಟು 373 ವಿದ್ಯಾರ್ಥಿಗಳು ಮತ್ತು 13 ಮಂದಿ ಶಿಕ್ಷಕರು ವ್ಯಾಸಂಗದಲ್ಲಿ ನಿರತರಾಗಿದ್ದಾರೆ. ಮೆಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಹಳೆಯದಾದ್ರು ಸುಸಜ್ಜಿತವಾಗಿದೆ. ಚಟ್ನಹಳ್ಳಿ ಪಾಳ್ಯದ ಕಿರಿಯ ಪ್ರಾಥಮಿಕ ಶಾಲೆ 33 ವಿದ್ಯಾರ್ಥಿಗಳು 2 ಶಿಕ್ಷಕರನ್ನು ಹೊಂದಿದೆ.

ಮಾಧವಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಐದು ಶಾಲೆಗಳ ಪೈಕಿ ಸುಸಜ್ಜಿತವಾದ ಕಟ್ಟಡ ಹೊಂದಿದೆ. ಮಾಧವಗೆರೆಯಲ್ಲಿ ಕೇವಲ 5 ವರ್ಷಗಳ ಹಿಂದೆಯಷ್ಟೇ ನಿರ್ಮಾಣವಾಗಿರುವ ಶಾಲೆ ಇದೆ. ಸಿಬ್ಬಂದಿ ಈಗಾಗಲೇ ಮತ್ತೊಂದು ಶಾಲಾ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಮಾಧವಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು 64 ಮಂದಿ ವಿದ್ಯಾರ್ಥಿಗಳು ಮತ್ತು 4 ಮಂದಿ ಶಿಕ್ಷಕರನ್ನ ಹೊಂದಿದೆ.

ಇನ್ನು ಮೈಸೂರು ತಾಲೂಕಿನ ಚಟ್ನಹಳ್ಳಿ ಪಾಳ್ಯದ ಕಿರಿಯ ಪ್ರಾಥಮಿಕ ಶಾಲೆ ವಸ್ತು ಸ್ಥಿತಿ ಟಿವಿ9 ಕ್ಯಾಮೆರಾದಲ್ಲಿ ಅನಾವರಣಗೊಂಡಿದೆ. ಕಟ್ಟಡ ಹಳೆಯದಾದ್ರು ಸುಸಜ್ಜಿತವಾಗಿದೆ. ಚಟ್ನಹಳ್ಳಿ ಪಾಳ್ಯದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 33 ವಿದ್ಯಾರ್ಥಿಗಳು 2 ಶಿಕ್ಷಕರು ಹೊಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.