ಯತೀಂದ್ರ-ಸಿದ್ದರಾಮಯ್ಯ ಸಂಭಾಷಣೆ ಬಗ್ಗೆ ಚರ್ಚೆ ಮಾಡಿ ಸಮಯ ಯಾಕೆ ವ್ಯರ್ಥ ಮಾಡಬೇಕು? ಕೃಷ್ಣ ಭೈರೇಗೌಡ

ಯತೀಂದ್ರ-ಸಿದ್ದರಾಮಯ್ಯ ಸಂಭಾಷಣೆ ಬಗ್ಗೆ ಚರ್ಚೆ ಮಾಡಿ ಸಮಯ ಯಾಕೆ ವ್ಯರ್ಥ ಮಾಡಬೇಕು? ಕೃಷ್ಣ ಭೈರೇಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 17, 2023 | 5:17 PM

ಕುಮಾರಸ್ವಾಮಿ ಸಹ ರಾಜ್ಯದ ಜನತೆಗೆ ಪ್ರಯೋಜನಕಾರಿಯಾಗುವ ಅಂಶಗಳನ್ನು ಎತ್ತಿಕೊಂಡು ಹೋರಾಟ ಮಾಡಲಿ ಅಂತ ತಾಕೀತು ಮಾಡಿದರು. ರಸ್ತೆ ಯಾಕೆ ದುರಸ್ತಿಯಾಗಿಲ್ಲ, ಕಾಮಗಾರಿ ಯಾಕೆ ಆರಂಭಗೊಂಡಿಲ್ಲ? ಯಾಕೆ ಯೋಜನೆ ಸ್ಥಗಿತಗೊಂಡಿದೆ ಇಂಥ ಪ್ರಶ್ನೆಗಳನ್ನು ಕೇಳಿದರೆ,

ಹಾಸನ: ಜಿಲ್ಲೆಯ ಪ್ರವಾಸದಲ್ಲಿರುವ ಕಂದಾಯ ಸಚಿವ ಕೃಷ್ಣ ಭೈರೇಗೌಡ (Krishna Byre Gowda) ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳು; ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಮತ್ತು ಸಿದ್ದರಾಮಯ್ಯ (Siddaramaiah) ನಡುವೆ ನಡೆದ ಸಂಭಾಷಣೆ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ನೀಡುತ್ತಿರುವ ಹೇಳಿಕೆ ಮತ್ತು ಟ್ವೀಟ್ ಗಳನ್ನು ಕುರಿತು ಕೇಳಿದಾಗ ಬಹಳ ಅರ್ಥಗರ್ಭಿತವಾಗಿ ಮಾತಾಡಿದರು. ಜನರಿಗೆ ಒಂದಷ್ಟು ಉಪಯೋಗವಾಗುವ ಪ್ರಶ್ನೆಗಳನ್ನು ಕೇಳಿ ಅಂತ ಮನವಿ ಮಾಡಿದ ಸಚಿವರು ಕುಮಾರಸ್ವಾಮಿ ಸಹ ರಾಜ್ಯದ ಜನತೆಗೆ ಪ್ರಯೋಜನಕಾರಿಯಾಗುವ ಅಂಶಗಳನ್ನು ಎತ್ತಿಕೊಂಡು ಹೋರಾಟ ಮಾಡಲಿ ಅಂತ ತಾಕೀತು ಮಾಡಿದರು. ರಸ್ತೆ ಯಾಕೆ ದುರಸ್ತಿಯಾಗಿಲ್ಲ, ಕಾಮಗಾರಿ ಯಾಕೆ ಆರಂಭಗೊಂಡಿಲ್ಲ? ಯಾಕೆ ಯೋಜನೆ ಸ್ಥಗಿತಗೊಂಡಿದೆ ಇಂಥ ಪ್ರಶ್ನೆಗಳನ್ನು ಕೇಳಿದರೆ, ಅವುಗಳಿಗೆ ಜವಾಬ್ದಾರಿಯಿಂದ ಉತ್ತರಿಸುತ್ತೇನೆ ಮತ್ತು ಅದರಿಂದ ಎಲ್ಲರಿಗೂ ಉಪಯೋಗ ಎಂದು ಕೃಷ್ಣ ಭೈರೇಗೌಡ ಹೇಳಿದರು. ಯತೀಂದ್ರ, ಮುಖ್ಯಮಂತ್ರಿಯೂ ಆಗಿರುವ ತಮ್ಮ ತಂದೆಗೆ ಶಾಲಾ ಕಟ್ಟಡಗಳ ದುರಸ್ತಿಗಾಗಿ ಒಂದು ಪಟ್ಟಿ ಕಳಿಸಿದರೆ ಉಳಿದರೆಲ್ಲ ಯಾಕೆ ಅದರ ಬಗ್ಗೆ ಚರ್ಚೆ ಮಾಡುತ್ತಾ ಸಮಯ ವ್ಯರ್ಥ ಮಾಡಬೇಕು ಎಂದು ಸಚಿವ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ