ಮೋದಿ ಸಾಗುವ ಮಾರ್ಗದಲ್ಲಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ತನಿಖೆ ವೇಳೆ ಅಚ್ಚರಿಯ ಅಂಶ ಬಯಲಿಗೆ

Edited By:

Updated on: May 16, 2026 | 10:31 AM

ಪ್ರಧಾನಿ ಮೋದಿ ಸಾಗಿದ ಮಾರ್ಗದಲ್ಲಿ ಪತ್ತೆಯಾದದ್ದು ಜಿಲೆಟಿನ್ ಕಡ್ಡಿಗಳಲ್ಲ, ಅಮೋನಿಯಂ ನೈಟ್ರೇಟ್ ಜೆಲ್ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಪ್ರಧಾನಿ ಭೇಟಿಯನ್ನು ತಡೆಯುವ ಉದ್ದೇಶದಿಂದ ಭಯದ ವಾತಾವರಣ ಸೃಷ್ಟಿಸಲು ಈ ಕೃತ್ಯ ನಡೆದಿದೆ. 11 ಗಂಟೆಗಳ ಕಾಲ ಪೊಲೀಸರು ಇಲ್ಲದ ಸಮಯದಲ್ಲಿ ಸ್ಫೋಟಕ ಇಡಲಾಗಿದ್ದು, ಸಿಸಿಟಿವಿ ಇಲ್ಲದೆ ತಾಂತ್ರಿಕ ವಿಶ್ಲೇಷಣೆ ಆಧಾರದ ಮೇಲೆ ತನಿಖೆ ಮುಂದುವರಿದಿದೆ.

ಬೆಂಗಳೂರು, ಮೇ 16: ಪ್ರಧಾನಿ ಮೋದಿ ಸಾಗುವ ಮಾರ್ಗದಲ್ಲಿ ಪತ್ತೆಯಾದ ವಸ್ತುವಿನ ಕುರಿತು ಪೊಲೀಸರ ತನಿಖೆಯಿಂದ ಹೊಸ ಮಾಹಿತಿ ಹೊರಬಿದ್ದಿದೆ. ಆರಂಭದಲ್ಲಿ ಜಿಲೆಟಿನ್ ಕಡ್ಡಿಗಳು ಎಂದು ಭಾವಿಸಲಾಗಿದ್ದರೂ, ಇದು ಅಮೋನಿಯಂ ನೈಟ್ರೇಟ್ ಜೆಲ್ ಎಂದು ದೃಢಪಟ್ಟಿದೆ. ಅಮೋನಿಯಂ ನೈಟ್ರೇಟ್ ಎಂಬುದು ಸ್ಪೋಟಕಗಳಲ್ಲಿ ಬಳಸುವ ಅಪಾಯಕಾರಿ ವಸ್ತುವಾಗಿದ್ದು, ಭಯದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಘಟನೆಯು ಮೇ 9ರ ರಾತ್ರಿ 8:05 ರಿಂದ ಮೇ 10ರ ಬೆಳಗ್ಗೆ 7:00 ಗಂಟೆಯ ನಡುವೆ, ಅಂದರೆ ಸುಮಾರು 11 ಗಂಟೆಗಳ ಅವಧಿಯಲ್ಲಿ ನಡೆದಿದೆ ಎಂದು ಅಂದಾಜಿಸಲಾಗಿದೆ. ಈ ಅವಧಿಯಲ್ಲಿ ಸ್ಥಳದಲ್ಲಿ ಪೊಲೀಸರ ಗಸ್ತು ಇರಲಿಲ್ಲ. ಸಿಸಿಟಿವಿ ಕ್ಯಾಮೆರಾಗಳು ಕೂಡ ಇಲ್ಲದಿರುವುದು ತನಿಖೆಗೆ ಸವಾಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ತಾಂತ್ರಿಕ ವಿಶ್ಲೇಷಣೆಗಳನ್ನು ಅವಲಂಬಿಸಿದ್ದಾರೆ. ಸ್ಪೋಟಕಕ್ಕೆ ಯಾವುದೇ ಡಿಟೋನೇಟರ್‌ಗಳು ಸಿಗದ ಕಾರಣ, ಸ್ಫೋಟದ ಸಾಧ್ಯತೆ ಕಡಿಮೆ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More