ಮಹಿಳೆ ನಾಪತ್ತೆ ಕೇಸ್​​ಗೆ ಟ್ವಿಸ್ಟ್​​: ಏಕಪತ್ನಿ ವ್ರತಸ್ಥನಂತೆ ಪೋಸ್​​ ಕೊಟ್ಟವ ಸಿಕ್ಕಿಬಿದ್ದಿದ್ದು ಮತ್ತೊಬ್ಬಳ ಜೊತೆ

Edited By:

Updated on: Feb 15, 2026 | 1:11 PM

ಮದುವೆಗೆಂದು ತೆರಳಿ ನಾಪತ್ತೆಯಾಗಿದ್ದ ಪ್ರಿಯಾಂಕಾ ತುಮಕೂರಿನ ಕುಣಿಗಲ್‌ನಲ್ಲಿ ಪ್ರಿಯಕರ ಡೇವಿಡ್ ಮನೆಯಲ್ಲಿ ಪತ್ತೆಯಾಗಿದ್ದಾರೆ. ನಾಪತ್ತೆ ನಾಟಕವಾಡಿದ್ದ ಇಬ್ಬರನ್ನೂ ಹಾಸನಕ್ಕೆ ಕರೆತಂದ ಪೊಲೀಸರು, ಡಿವೈಎಸ್ಪಿ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಡೇವಿಡ್‌ನ ನಾಟಕೀಯ ಜೀವನವೂ ಬಯಲಾಗಿದೆ. ಈ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಂಡಿದೆ.

ಹಾಸನ/ ತುಮಕೂರು, ಫೆಬವರಿ 15: ಮದುವೆಗೆಂದು ತೆರಳಿ ನಾಪತ್ತೆಯಾಗಿದ್ದ ಮಹಿಳೆ ಪ್ರಿಯಾಂಕಾಳನ್ನು ಪರಪುರುಷನ ಜೊತೆ ಪತ್ತೆ ಮಾಡಿರುವ ಪೊಲೀಸರು, ಪ್ರಿಯಾಂಕಾ ಮತ್ತು ಡೇವಿಡ್ ಇಬ್ಬರನ್ನೂ ವಶಕ್ಕೆ ಪಡೆದು ಹಾಸನದ ಡಿವೈಎಸ್ಪಿ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪ್ರಿಯಾಂಕಾ ನಾಪತ್ತೆಯಾದಾಗ ಆಕೆ ಕೊಲೆಯಾಗಿರಬಹುದು ಅಥವಾ ಅಪಹರಣಕ್ಕೊಳಗಾಗಿರಬಹುದು ಎಂಬ ಆತಂಕ ಸೃಷ್ಟಿಯಾಗಿತ್ತು. ಆದರೆ, ಕತೆ ಕಟ್ಟಿದ್ದ ಆಕೆ ಪತಿಯ ಸ್ನೇಹಿತನ ಜೊತೆಗೆ ಕಳೆದ ಎರಡುದಿನಗಳಿಂದ ಇದ್ದಿದ್ದು ತನಿಖೆ ವೇಳೆ ಬಯಲಾಗಿದೆ. ತ್ತೊಂದೆಡೆ ಊರಿಗೆ ಏಕಪತ್ನಿ ವ್ರತಸ್ಥನಾಗಿ ಕಂಡವನ ಮನೆಯಲ್ಲಿಯೇ ಪ್ರಿಯಾಂಕಾ ಪತ್ತೆಯಾಗಿರೋದು ಸ್ಥಳೀಯರು ಹೌಹಾರುವಂತೆ ಮಾಡಿದೆ. ಸ್ವಾರಿ ಗರ್ಲ್ಸ್​, ನನ್ನ ಹೆಂಡತಿ ಫುಲ್ ಸ್ಟ್ರಿಕ್ಟ್ ಎಂದು ಬೈಕ್​​ ಮೇಲೆ ಸ್ಟಿಕ್ಕರ್​​ ಹಾಕಿಸಿಕೊಂಡಿದ್ದ ಈತ, ಅದರ ಟ್ಯಾಂಕ್​​ ಮೇಲೆ ಡಾರ್ಲಿಂಗ್​​ ಅಂತಲೂ ಬರೆಸಿದ್ದ. ಖುದ್ದು ಮನೆ ಮಾಲೀಕ ಹೇಳುವಂತೆ ಬೆಕ್ಕಿನಂತೆ ಓಡಾಡುತಿದ್ದ ಈತನ ಮನೆಯಲ್ಲಿ ಮಹಿಳೆ ಪ್ರಿಯಾಂಕಾ ಸೇರಿದ್ದೇಗೆ ಎಂಬ ಗೊಂದಲ ಮುಂದುವರಿದಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸತ್ಯ ಇನ್ನಷ್ಟೇ ಹೊರ ಬರಬೇಕಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More