ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲೇ ಬಸವನ ಬಾಗೇವಾಡಿ ಬಿಜೆಪಿ ಮುಖಂಡರ ನಡುವೆ ಟಿಕೆಟ್ ಗಾಗಿ ವಾಗ್ವಾದ, ಗಲಾಟೆ!

Edited By:

Updated on: Sep 28, 2022 | 10:59 AM

ಎಸ್ ಕೆ ಬೆಳ್ಳುಬ್ಬಿ ಮತ್ತು ಸ್ಥಳೀಯ ಮುಖಂಡ ಅಪ್ಪುಗೌಡ ಪಾಟೀಲ ಬೆಂಬಲಿಗರು ಟಿಕೆಟ್​​​ಗಾಗಿ ಕಟೀಲ್ ಅವರ ಸಮ್ಮುಖದಲ್ಲೇ ಕಿತ್ತಾಟ ನಡೆಸಿದ್ದಾರೆ.

ವಿಜಯಪುರ: ಚುನಾವಣೆ ಹತ್ತಿರಗೊಳ್ಳುತ್ತಿರುವ ಸಂದರ್ಭದಲ್ಲಿ ಇಂಥ ಸನ್ನಿವೇಶಗಳು, ದೃಶ್ಯಗಳು ಸಾಮಾನ್ಯವಾಗಲಿವೆ. ಇದು ಬುಧವಾರ ವಿಜಯಪುರದ ಬಸವನ ಬಾಗೇವಾಡಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅಧ್ಯಕ್ಷತೆಯಲ್ಲಿ ಮಂಡಲ ಕಾರ್ಯಕಾರಿಣಿ ಸಭೆಯಲ್ಲಿ ನಡೆದ ಗಲಾಟೆ. ಟೆಕೆಟ್ ಗಾಗಿ ಎಸ್ ಕೆ ಬೆಳ್ಳುಬ್ಬಿ (SK Bellubbi) ಮತ್ತು ಸ್ಥಳೀಯ ಮುಖಂಡ ಅಪ್ಪುಗೌಡ ಪಾಟೀಲ (Appugouda Patil) ಬೆಂಬಲಿಗರ ನಡುವೆ ಟಿಕೆಟ್​​​ಗಾಗಿ ಸಮರ ನಡೆದಿದೆ. ಕಟೀಲ್ ಅವರು ಅಸಹಾಯಕರಾಗಿ ಎರಡು ಬಣಗಳ ನಡುವೆ ನಡೆಯುತ್ತಿರುವ ವಾಗ್ವಾದವನ್ನು ವೀಕ್ಷಿಸುತ್ತಿದ್ದಾರೆ.