ಹಾಸನದಲ್ಲೊಂದು ಅಪರೂಪದ ಘಟನೆ: ಎರಡು ಕಾಡಾನೆಗಳ ಜಗಳ ಬಿಡಿಸಿದ ಶ್ವಾನ
ಹಾಸನ ಜಿಲ್ಲೆಯ ಬೇಲೂರಿನ ಜಗಬೋರನಹಳ್ಳಿ ಗ್ರಾಮದ ಬಳಿ ಎರಡು ದೈತ್ಯ ಮದಗಜಗಳು ಕಾಳಗಕ್ಕಿಳಿದಿವೆ. ಕಾಡಾನೆಯನ್ನು ಶಾಂತಗೊಳಿಸಲು ಇಟಿಎಫ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಗುಂಪಿನಿಂದ ಹೊರ ಬಂದಿರುವ ಪ್ರಾಯದ ಮದಗಜಗಳು ಭಾರೀ ಕಾಳಗದಲ್ಲಿ ತೊಡಗಿವೆ. ಕಾಡಾನೆಗಳ ಕಾಳಗದಲ್ಲಿ ಶ್ವಾನವೊಂದು ಮಧ್ಯೆ ಪ್ರವೇಶಿಸಿದ್ದು, ಬೊಗಳುತ್ತ ಆನೆಗಳನ್ನು ಸುತ್ತುವರೆದಿದೆ. ಈ ವೇಳೆ ಕಾಡಾನೆಗಳು ಜಗಳ ನಿಲ್ಲಿಸಿ ನಾಯಿ ಮೇಲೆ ದಾಳಿ ಮಾಡಲು ಮುಂದಾಗಿವೆ. ಇನ್ನು ಮದದಲ್ಲಿರುವ ಕಾಡಾನೆಗಳಿಂದ ಸ್ಥಳೀಯರು ಆತಂಕಗೊಂಡಿದ್ದು, ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.
ಹಾಸನ, ಅಕ್ಟೋಬರ್ 26: ಜಿಲ್ಲೆಯ ಬೇಲೂರಿನ ಜಗಬೋರನಹಳ್ಳಿ ಗ್ರಾಮದ ಬಳಿ ಎರಡು ದೈತ್ಯ ಮದಗಜಗಳು ಕಾಳಗಕ್ಕಿಳಿದಿವೆ. ಕಾಡಾನೆಯನ್ನು ಶಾಂತಗೊಳಿಸಲು ಇಟಿಎಫ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಗುಂಪಿನಿಂದ ಹೊರ ಬಂದಿರುವ ಪ್ರಾಯದ ಮದಗಜಗಳು ಭಾರೀ ಕಾಳಗದಲ್ಲಿ ತೊಡಗಿವೆ. ಕಾಡಾನೆಗಳ ಕಾಳಗದಲ್ಲಿ ಶ್ವಾನವೊಂದು ಮಧ್ಯೆ ಪ್ರವೇಶಿಸಿದ್ದು, ಬೊಗಳುತ್ತ ಆನೆಗಳನ್ನು ಸುತ್ತುವರೆದಿದೆ. ಈ ವೇಳೆ ಕಾಡಾನೆಗಳು ಜಗಳ ನಿಲ್ಲಿಸಿ ನಾಯಿ ಮೇಲೆ ದಾಳಿ ಮಾಡಲು ಮುಂದಾಗಿವೆ. ಇನ್ನು ಮದದಲ್ಲಿರುವ ಕಾಡಾನೆಗಳಿಂದ ಸ್ಥಳೀಯರು ಆತಂಕಗೊಂಡಿದ್ದು, ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.
ಶ್ವಾನ ಎಂಟ್ರಿ ಕೊಟ್ಟ ಬಳಿಕವೇ ಎರಡು ಆನೆಗಳು ಗಲಾಟೆ ನಿಲ್ಲಿಸಿವೆ. ಹೀಗಾಗಿ ಒಂದು ರೀತಿ ಆನೆಗಳ ಜಗಳವನ್ನು ಶ್ವಾನ ಬಿಡಿಸಿದಂತಿದೆ. ಒಂದು ವೇಳೆ ಶ್ವಾನ ಮಧ್ಯೆ ಪ್ರವೇಶಿಸದಿದ್ದರೆ ಎರಡೂ ಆನೆಗಳ ಕಾದಾಟ ಮುಂದುವರೆದು ಏನಾದ್ರೂ ಅನಾಹುತ ನಡೆಯುವ ಸಾಧ್ಯತೆಗಳಿದ್ದವು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us