Video: ಈ ಹಿಂದೆ ಝೆಲೆನ್ಸ್ಕಿ ಬಟ್ಟೆ ನೋಡಿ ಹೀಯಾಳಿಸಿದ್ದ ಪತ್ರಕರ್ತನಿಂದ ಇಂದು ಹೊಗಳಿಕೆಯ ಮಾತು
ಈ ಹಿಂದೆ ಡೊನಾಲ್ಡ್ ಟ್ರಂಪ್ ಹಾಗೂ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ನಡುವೆ ನಡೆದ ಮಾತುಕತೆ ವೇಳೆ ಝೆಲೆನ್ಸ್ಕಿ ಬಟ್ಟೆ ಬಗ್ಗೆ ಹೀಯಾಳಿಸಿದ್ದ ಪತ್ರಕರ್ತರೊಬ್ಬರು ಇಂದು ಝೆಲೆನ್ಸ್ಕಿ ಬಟ್ಟೆ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿರುವುದು ಅಚ್ಚರಿ ತಂದಿದೆ. ಪತ್ರಕರ್ತ ಬ್ರಿಯಾನ್ ಗ್ಲೆನಬೌಟ್ ಝೆಲೆನ್ಸ್ಕಿಯವರ ಸೂಟ್ ಅನ್ನು ಹೊಗಳುತ್ತಾ ಈ ಬಟ್ಟೆಯಲ್ಲಿ ನೀವು ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರಿ ಎಂದು ಹೇಳಿದ್ದಾರೆ.
ವಾಷಿಂಗ್ಟನ್, ಆಗಸ್ಟ್ 19: ಈ ಹಿಂದೆ ಡೊನಾಲ್ಡ್ ಟ್ರಂಪ್(Donald Trump) ಹಾಗೂ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ನಡುವೆ ನಡೆದ ಮಾತುಕತೆ ವೇಳೆ ಝೆಲೆನ್ಸ್ಕಿ ಬಟ್ಟೆ ಬಗ್ಗೆ ಹೀಯಾಳಿಸಿದ್ದ ಪತ್ರಕರ್ತರೊಬ್ಬರು ಇಂದು ಝೆಲೆನ್ಸ್ಕಿ ಬಟ್ಟೆ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿರುವುದು ಅಚ್ಚರಿ ತಂದಿದೆ. ಪತ್ರಕರ್ತ ಬ್ರಿಯಾನ್ ಗ್ಲೆನಬೌಟ್ ಝೆಲೆನ್ಸ್ಕಿಯವರ ಸೂಟ್ ಅನ್ನು ಹೊಗಳುತ್ತಾ ಈ ಬಟ್ಟೆಯಲ್ಲಿ ನೀವು ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರಿ ಎಂದು ಹೇಳಿದ್ದಾರೆ.
ಟ್ರಂಪ್ ಕೂಡಾ ಕೂಡಲೇ ತಮಾಷೆಯಾಗಿ ಪ್ರತಿಕ್ರಿಯಿಸಿ ಹೌದು ನಾನು ಕೂಡ ಅದನ್ನೇ ಹೇಳಿದೆ ಎಂದಿದ್ದಾರೆ. ಝೆಲೆನ್ಸ್ಕಿ ಕೂಡ ಗ್ಲೆನಬೌಟ್ ಅವರನ್ನು ನೋಡಿ ನಗುತ್ತಾ ಮತ್ತೆ, ನಾನೇನೋ ನನ್ನ ಬಟ್ಟೆ ಬದಲಾಯಿಸಿದ್ದೇನೆ ಆದರೆ ನೀವು ಅದೇ ಸೂಟ್ನಲ್ಲಿ ಇದ್ದೀರಾ ಎಂದು ಉತ್ತರಿಸಿದ್ದಾರೆ. ಫೆಬ್ರವರಿಯಲ್ಲಿ ಟ್ರಂಪ್ ಅವರೊಂದಿಗಿನ ಭೇಟಿಯ ಸಮಯದಲ್ಲಿ ಝೆಲೆನ್ಸ್ಕಿ ಸೂಟ್ ಧರಿಸದಿದ್ದಕ್ಕಾಗಿ ಗ್ಲೆನಬೌಟ್ ಟೀಕಿಸಿದ್ದರು.
ಸೋಮವಾರ, ಅವರು ಇದಕ್ಕಾಗಿ ಕ್ಷಮೆಯಾಚಿಸಿದರು ಮತ್ತು ಝೆಲೆನ್ಸ್ಕಿ ಈ ಬಾರಿ ನೀವು ಚೆನ್ನಾಗಿ ಕಾಣುತ್ತಿದ್ದೀರಾ ಎಂದು ಹೇಳಿದ್ದಾರೆ. ಸೋಮವಾರ ಝೆಲೆನ್ಸ್ಕಿ ಕಪ್ಪು ಬಣ್ಣದ ಶರ್ಟ್ ಮತ್ತು ಜಾಕೆಟ್‌ನಲ್ಲಿ ಬಂದಿದ್ದರು ಆದರೆ ಟೈ ಧರಿಸಿರಲಿಲ್ಲ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

