Video: ಉದಯನಿಧಿ ಬಿಡುಗಡೆ; ವಿಜಯ್​​ನ ಡಮ್ಮಿ ಸಿಎಂ ಎಂದ ಸ್ಟಾಲಿನ್ ಪುತ್ರ

Updated on: Aug 05, 2026 | 11:16 AM

ತ್ರಿಷಾ-ವಿಜಯ್ ಕುರಿತು ಅವಹೇಳನಕಾರಿ ಹೇಳಿಕೆಗಾಗಿ ಬಂಧಿತರಾಗಿದ್ದ ಉದಯನಿಧಿ ಸ್ಟಾಲಿನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. "ಸರ್ಕಾರ ತನ್ನನ್ನು ಭಯೋತ್ಪಾದಕನಂತೆ ನಡೆಸಿಕೊಂಡಿದೆ" ಎಂದು ಸಿಎಂ ವಿಜಯ್ ವಿರುದ್ಧ ಕಿಡಿಕಾರಿದ್ದಾರೆ. ತಮಿಳುನಾಡು ಬಜೆಟ್ ಅಧಿವೇಶನದಲ್ಲಿ ಈ ಬಂಧನ ವಿಚಾರವನ್ನು ಇಟ್ಟುಕೊಂಡು ಡಿಎಂಕೆ ಹೋರಾಟಕ್ಕೆ ಸಜ್ಜಾಗಿದೆ. ಸಿಎಂ ವಿಜಯ್ ಅವರ ಸರ್ವಾಧಿಕಾರಿ ಧೋರಣೆ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

ನಟಿ ತ್ರಿಷಾ ಹಾಗೂ ವಿಜಯ್ ಅವರ ನಡುವಿನ ಸಂಬಂಧದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಆರೋಪದ ಮೇಲೆ ಬಂಧಿತರಾಗಿದ್ದ ತಮಿಳುನಾಡಿನ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ಮದ್ರಾಸ್ ಹೈಕೋರ್ಟ್ ನಿರ್ದೇಶನದಂತೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ತಡರಾತ್ರಿ ಅವರು ಚೆನ್ನೈಗೆ ವಾಪಸ್ ಆಗಿದ್ದಾರೆ. ಬಿಡುಗಡೆಯಾದ ನಂತರ, ಉದಯನಿಧಿ ಸ್ಟಾಲಿನ್ ಅವರು ಸಿಎಂ ವಿಜಯ್ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. “ಸರ್ಕಾರ ನನ್ನನ್ನು ಭಯೋತ್ಪಾದಕನ ರೀತಿನಲ್ಲಿ ನಡೆಸಿಕೊಂಡಿದೆ” ಎಂದು ಆರೋಪಿಸಿದ್ದು, ಸಿಎಂ ವಿಜಯ್ ಅವರನ್ನು ಡಮ್ಮಿ ಸಿಎಂ ಮತ್ತು ರೀಲ್ಸ್ ಕ್ರಿಯೇಟರ್ ಎಂದು ಜರೆದಿದ್ದಾರೆ.

ಉದಯನಿಧಿ ಅವರ ಬಂಧನಕ್ಕೆ ಡಿಎಂಕೆ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಿಎಂ ವಿಜಯ್ ಅವರದ್ದು ಸರ್ವಾಧಿಕಾರಿ ಮನೋಭಾವ ಎಂದು ಕಿಡಿಕಾರಿದ್ದಾರೆ. ಇಂದು ಆರಂಭವಾಗಲಿರುವ ತಮಿಳುನಾಡು ಬಜೆಟ್ ಅಧಿವೇಶನದಲ್ಲಿ ಈ ಬಂಧನ ವಿಚಾರವನ್ನು ಇಟ್ಟುಕೊಂಡು ವಿಧಾನಸಭೆ ಒಳಗಡೆ ಮತ್ತು ಹೊರಗಡೆ ಪ್ರತಿಭಟನೆ ನಡೆಸಲು ಡಿಎಂಕೆ ಶಾಸಕರು ಸಜ್ಜಾಗಿದ್ದಾರೆ. ಯಾರ ಹೆಸರನ್ನೂ ಪ್ರಸ್ತಾಪಿಸದಿದ್ದರೂ ಉದಯನಿಧಿಯವರನ್ನು ಬಂಧಿಸಿದ್ದೇಕೆ ಎಂದು ಪ್ರಶ್ನಿಸಿ ಹೋರಾಟ ನಡೆಸಲು ಡಿಎಂಕೆ ಸಿದ್ಧತೆ ನಡೆಸಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Published on: Aug 05, 2026 11:12 AM
Loading...
Unable to load recommendations.
Follow Us