ಉಡುಪಿ: 216 ಗಂಟೆಗಳ ಕಾಲ ಭರತನಾಟ್ಯ! ದೀಕ್ಷಾ ಕನಸು ಚಿಗುರಿದ್ದು ಹೇಗೆ ಗೊತ್ತೇ?

Updated on: Aug 31, 2025 | 12:33 PM

ಸದ್ಯ 170 ಗಂಟೆ ಕಾಲ ನಿರಂತರ ಭರತನಾಟ್ಯ ಮಾಡಿದ್ದೇ ಇದುವರೆಗಿನ ದಾಖಲೆ. ಈ ದಾಖಲೆಯನ್ನು ಮುರಿದು ಉಡುಪಿಯ ವಿದುಷಿ ದೀಕ್ಷಾ ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್ಸ್‌ ದಾಖಲೆ ಬರೆದಿದ್ದಾರೆ. ಅಂದಹಾಗೆ, ದೀಕ್ಷಾಗೆ ಈ ಕನಸು ಚಿಗುರಿದ್ದು ಹೇಗೆ? ಈ ಬಗ್ಗೆ ಭರತನಾಟ್ಯ ಆಯೀಜಕರು ಮಾತನಾಡಿದ್ದಾರೆ. ವಿಡಿಯೋ ಇಲ್ಲಿದೆ.

ಉಡುಪಿ, ಆಗಸ್ಟ್ 31: ಉಡುಪಿಯ ವಿದುಷಿ ದೀಕ್ಷಾ 216 ಗಂಟೆಗಳ ಕಾಲ, ಅಂದರೆ ಸುದೀರ್ಘ 9 ದಿನಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡಿ ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್ಸ್‌ನಲ್ಲಿ (Golden Book of World Record) ದಾಖಲೆ ಬರೆದಿದ್ದಾರೆ. ಉಡುಪಿಯ ಅಜ್ಜರಕಾಡಿನ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ ದೀಕ್ಷಾ, 3 ಗಂಟೆಗೊಮ್ಮೆ 15 ನಿಮಿಷ ವಿಶ್ರಾಂತಿ ಪಡೆದು ನಂತರ ಭರತನಾಟ್ಯ ಪ್ರದರ್ಶನ ನೀಡಿದ್ದರು. ಅಂದಹಾಗೆ, 216 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ನೀಡುವ ದೀಕ್ಷಾ ಕನಸು ಚಿಗುರಿದ್ದು ಹೇಗೆ? ಈ ಬಗ್ಗೆ ಆಯೋಜಕರು ಮಾತನಾಡಿರುವ ವಿಡಿಯೋ ಇಲ್ಲಿದೆ.

ನಿರಂತರ 216 ಗಂಟೆಗಳ ಕಾಲ ಭರತನಾಟ್ಯ ಮಾಡಿ ವಿಶ್ವ ದಾಖಲೆ ಬರೆದ ಉಡುಪಿಯ ವಿದುಷಿ ದೀಕ್ಷಾ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us