ನಿರಂತರ 216 ಗಂಟೆಗಳ ಕಾಲ ಭರತನಾಟ್ಯ ಮಾಡಿ ವಿಶ್ವ ದಾಖಲೆ ಬರೆದ ಉಡುಪಿಯ ವಿದುಷಿ ದೀಕ್ಷಾ
ಇತ್ತೀಚಿಗಷ್ಟೆ ಏಳು ದಿನಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡಿ ಮಂಗಳೂರಿನ ಭರತನಾಟ್ಯ ಕಲಾವಿದೆ ರೆಮೋನಾ ಎವೆಟ್ ಪಿರೇರಾ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿದ್ದರು. ಇದೀಗ ಉಡುಪಿಯ ವಿದುಷಿ ದೀಕ್ಷಾ 216 ಗಂಟೆ ಅಂದರೆ ಸುದೀರ್ಘ 9 ದಿನಗಳ ಕಾಲ ಭರತನಾಟ್ಯ ಪ್ರದರ್ಶನ ನೀಡಿ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಈ ಕುರಿತ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ.

ಕಠಿಣ ಪರಿಶ್ರಮ, ಏಕಾಗ್ರತೆ, ನಿರಂತರ ಪ್ರಯತ್ನದಿಂದ ಸಾಧನೆ ಎಂಬುವಂತಹದ್ದು ಸಾಧ್ಯ ಎಂಬ ಮಾತಿದೆ. ಈ ಮಾತಿಗೆ ಉದಾಹರಣೆಯೆಂಬಂತೆ ತನ್ನ ಕಠಿಣ ಪರಿಶ್ರಮ. ನಿರಂತರ ಪ್ರಯತ್ನದ ಮೂಲಕ ಉಡುಪಿಯ ವಿದುಷಿ ದೀಕ್ಷಾ (Vidushi Deeksha) ವಿಶ್ವ ದಾಖಲೆಯನ್ನು ಮಾಡಿದ್ದಾರೆ. ಹೌದು ಸುದೀರ್ಘ 216 ಗಂಟೆ ಅಂದರೆ ಸತತ 9 ದಿನಗಳ ಕಾಲ ನಿರಂತರವಾಗಿ ಭರತನಾಟ್ಯ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ (Golden Book of World Record) ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಮಂಗಳೂರಿನ ಭರತನಾಟ್ಯ ಕಲಾವಿದೆ ರೆಮೋನಾ ಪಿರೇರಾ ಸತತ 170 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ನೀಡಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ವಿದುಷಿ ದೀಕ್ಷಾ ಸತತ 216 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ನೀಡಿ ಹೊಸ ದಾಖಲೆ ಬರೆದಿದ್ದಾರೆ.
216 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ನೀಡಿ ದಾಖಲೆ ಬರೆದ ವಿದುಷಿ ದೀಕ್ಷಾ:
ಸತತ 216 ಗಂಟೆಗಳ ಕಾಲ ನಿರಂತರವಾಗಿ ಭರತನಾಟ್ಯ ಪ್ರದರ್ಶನ ನೀಡುವ ಮೂಲಕ ಉಡುಪಿಯ ವಿದುಷಿ ದೀಕ್ಷಾ ಹೊಸ ದಾಖಲೆಯನ್ನು ಬರೆದಿದ್ದಾರೆ. ವಿದುಷಿ ದೀಕ್ಷಾ ಉಡುಪಿ ಅಜ್ಜರಕಾಡು ಡಾ.ಜಿ.ಶಂಕರ್ ಮಹಿಳಾ ಪದವಿ ಕಾಲೇಜಿನಲ್ಲಿ ಆ. 21 ರಂದು ಮಧ್ಯಾಹ್ನ 3.30 ಗಂಟೆಗೆ ಭರತನಾಟ್ಯದ ಪ್ರದರ್ಶನವನ್ನು ಆರಂಭಿಸಿ, ಆ. 30 ರ ಮಧ್ಯಾಹ್ನ 3.30 ಕ್ಕೆ ಪೂರ್ಣಗೊಳಿಸಿ, ಈ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ಓಣಂ ಹಬ್ಬದ ಸಂಭ್ರಮದಲ್ಲಿ ಮಹಾಬಲಿ ಜೊತೆ ಔರಾ ಫಾರ್ಮಿಂಗ್ ಡ್ಯಾನ್ಸ್ ಮಾಡಿದ ಅಮುಲ್ ಗರ್ಲ್
ವಿದುಷಿ ದೀಕ್ಷಾ ಅವರ ಭರತನಾಟ್ಯಕ್ಕೆ ಸಂಬಂಧಿಸಿದಂತಹ ಹತ್ತು ಹಲವು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:05 pm, Sat, 30 August 25




