ಉಡುಪಿ: ಅವಮಾನವಾದ ನಿವೃತ್ತ ಯೋಧನಿಗೆ ಕ್ಷಮೆ ಕೇಳಿದ ಟೋಲ್ ಸಿಬ್ಬಂದಿ, ಕೃತಜ್ಞತೆ ವ್ಯಕ್ತಪಡಿಸಿ ಯೋಧ

Edited By:

Updated on: Jan 28, 2026 | 3:32 PM

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಸ್ತಾನ ಟೋಲ್ ಗೇಟ್‌ನಲ್ಲಿ ನಡೆದ ಮಾಜಿ ಸೈನಿಕನಿಗೆ ಅವಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವಮಾನಕ್ಕೊಳಗಾದ ಯೋಧ ಕಾಸರಗೋಡಿನ ಶ್ಯಾಮರಾಜ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಟೋಲ್ ಸಿಬ್ಬಂದಿಗಳು ತನ್ನಿಂದ ಬಹಿರಂಗವಾಗಿ ಕ್ಷಮೆ ಯಾಚಿಸಿರುವುದಾಗಿ ಶ್ಯಾಮರಾಜ್ ತಿಳಿಸಿದ್ದಾರೆ.ನನಗೆ ಅವಮಾನ ಮತ್ತು ಬೇಸರವಾಗಿದ್ದು ನಿಜ. ಆದರೆ ಅವರು ಕ್ಷಮೆ ಕೇಳಿದ್ದಾರೆ. ನಾನು ಅವರನ್ನು ಕ್ಷಮಿಸದೆ ಮತ್ತಾರು ಕ್ಷಮಿಸುತ್ತಾರೆ ಎಂದಿದ್ದಾರೆ. ತಮ್ಮ ಪರವಾಗಿ ಧ್ವನಿಗೂಡಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ ಶ್ಯಾಮರಾಜ್, ನ್ಯಾಯ ಒದಗಿಸಲು ಸಾಕಷ್ಟು ಪ್ರಯತ್ನಿಸಿದ ಎಲ್ಲರಿಗೂ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಉಡುಪಿ, ಜನವರಿ 28: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಸ್ತಾನ ಟೋಲ್ ಗೇಟ್‌ನಲ್ಲಿ ನಡೆದ ಮಾಜಿ ಸೈನಿಕನಿಗೆ ಅವಮಾನ ಪ್ರಕರಣಕ್ಕೆ  (Retired Army Commander Humiliated) ಸಂಬಂಧಿಸಿದಂತೆ, ಅವಮಾನಕ್ಕೊಳಗಾದ ಯೋಧ ಕಾಸರಗೋಡಿನ ಶ್ಯಾಮರಾಜ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಟೋಲ್ ಸಿಬ್ಬಂದಿಗಳು ತನ್ನಿಂದ ಬಹಿರಂಗವಾಗಿ ಕ್ಷಮೆ ಯಾಚಿಸಿರುವುದಾಗಿ ಶ್ಯಾಮರಾಜ್ ತಿಳಿಸಿದ್ದಾರೆ.ನನಗೆ ಅವಮಾನ ಮತ್ತು ಬೇಸರವಾಗಿದ್ದು ನಿಜ. ಆದರೆ ಅವರು ಕ್ಷಮೆ ಕೇಳಿದ್ದಾರೆ. ನಾನು ಅವರನ್ನು ಕ್ಷಮಿಸದೆ ಮತ್ತಾರು ಕ್ಷಮಿಸುತ್ತಾರೆ ಎಂದಿದ್ದಾರೆ. ತಮ್ಮ ಪರವಾಗಿ ಧ್ವನಿಗೂಡಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ ಶ್ಯಾಮರಾಜ್, ನ್ಯಾಯ ಒದಗಿಸಲು ಸಾಕಷ್ಟು ಪ್ರಯತ್ನಿಸಿದ ಎಲ್ಲರಿಗೂ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Published on: Jan 28, 2026 03:30 PM