ಶಾಲೆ ರಸ್ತೆ ಸರಿ ಇಲ್ಲ, ರಿಪೇರಿ ಮಾಡಿಸಿ ಸರ್: ಆಯುಕ್ತರಿಗೆ ಪುಟಾಣಿ ವಿದ್ಯಾರ್ಥಿ ಮನವಿಯ ವಿಡಿಯೋ ನೋಡಿ

Updated By: ಗಂಗಾಧರ​ ಬ. ಸಾಬೋಜಿ

Updated on: Dec 04, 2025 | 2:54 PM

ಉಡುಪಿ ನಗರ ವ್ಯಾಪ್ತಿಯ ಬಹುತೇಕ ರಸ್ತೆಗಳು ಹಾಳಾಗಿದ್ದು, ದುರಸ್ತಿಗೆ ಬಂದಿವೆ. ಅದರಲ್ಲಿ ತನ್ನ ಶಾಲೆಯ ರಸ್ತೆ ಸರಿಯಿಲ್ಲ, ರಿಪೇರಿ ಮಾಡಿಸಿ ಎಂದು ಪುಟಾಣಿ ವಿದ್ಯಾರ್ಥಿ ಖುದ್ದು ನಗರಸಭೆ ಆಯುಕ್ತರಿಗೆ ಮನವಿ ಮಾಡಿದ್ದಾನೆ. ಉಡುಪಿ ನಗರದಲ್ಲಿರುವ ಮುಕುಂದ ಕೃಪ ಶಾಲೆಯ ವಿದ್ಯಾರ್ಥಿ ನಗರಸಭೆ ಆಯುಕ್ತರ ಕಚೇರಿಗೆ ಭೇಟಿ ನೀಡಿ ರಸ್ತೆ ಹಾಳಾದ ಬಗ್ಗೆ ದೂರು ನೀಡಿದ್ದಾನೆ.

ಉಡುಪಿ, ಡಿಸೆಂಬರ್​ 04: ಉಡುಪಿ ನಗರ ವ್ಯಾಪ್ತಿಯ ಬಹುತೇಕ ರಸ್ತೆಗಳು ಹಾಳಾಗಿದ್ದು, ದುರಸ್ತಿ ಮಾಡಲೇಬೇಕಾದ ಸ್ಥಿತಿ ಇದೆ. ದಿನ ನಿತ್ಯ ಶಾಲೆಗೆ ಹೋಗುವ ಪುಟಾಣಿಗೂ ಇದು ಅರಿವಿಗೆ ಬಂದಂತಿದೆ. ಹೀಗಾಗಿ ಶಾಲೆಗೆ ಹೋಗುವ ರಸ್ತೆ ಸರಿಯಿಲ್ಲ, ರಿಪೇರಿ ಮಾಡುವಂತೆ ನಗರಸಭೆ ಆಯುಕ್ತ ಮಹಾಂತೇಶ್​​​ ಅವರಿಗೆ ತನ್ಮಯ್ ಕಾಮತ್​​ ಎಂಬ ಪುಟಾಣಿ ಹುಡುಗ ಮನವಿ ಮಾಡಿದ್ದಾನೆ. ಮುಕುಂದ ಕೃಪ ಶಾಲೆಯಲ್ಲಿ ಓದುತ್ತಿರುವ ತನ್ಮಯ್ ಕಾಮತ್​​, ಆಯುಕ್ತರನ್ನು ಭೇಟಿ ಮಾಡಿ ರಸ್ತೆ ಹದಗೆಟ್ಟ ಬಗ್ಗೆ ದೂರು ನೀಡಿದ್ದಾನೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Dec 04, 2025 02:53 PM