ಉಡುಪಿ: ವಿಟ್ಲಪಿಂಡಿ ಮಹೋತ್ಸವಕ್ಕೆ ಶ್ರೀಕೃಷ್ಣ ಮಠ ಸಜ್ಜು, ಡ್ರೋನ್​ ಕಣ್ಣಲ್ಲಿ ವಿಹಂಗಮ ನೋಟ ಸೆರೆ

Updated By: ಗಂಗಾಧರ​ ಬ. ಸಾಬೋಜಿ

Updated on: Sep 15, 2025 | 11:33 AM

ಉಡುಪಿಯ ಶ್ರೀಕೃಷ್ಣ ಮಠದಲ್ಲಿ ವಿಟ್ಲಪಿಂಡಿ ಮಹೋತ್ಸವವು ಅದ್ದೂರಿಯಾಗಿ ಆಚರಿಸಲ್ಪಡುತ್ತಿದೆ. ನಿನ್ನೆ ಮಧ್ಯರಾತ್ರಿ ಶ್ರೀಕೃಷ್ಣನಿಗೆ ಮತ್ತು ಚಂದ್ರನಿಗೆ ಪರ್ಯಾಯ ಶ್ರೀಗಳಿಂದ ಅರ್ಘ್ಯ ಸಮರ್ಪಿಸಲಾಯಿತು. ಇಂದು ಮಧ್ಯಾಹ್ನ 3 ಗಂಟೆಗೆ ವಿಟ್ಲಪಿಂಡಿ ರಥೋತ್ಸವ ನಡೆಯಲಿದೆ. ಹುಲಿವೇಷ, ಗೊಲ್ಲರ ತಂಡಗಳ ಸಂಭ್ರಮ ಮತ್ತು ಮೊಸರು ಕುಡಿಕೆ ಒಡೆಯುವ ಆಟಗಳು ರಥಬೀದಿಯನ್ನು ವೈಭವೀಕರಿಸಲಿವೆ.

ಉಡುಪಿ, ಸೆಪ್ಟೆಂಬರ್​ 15: ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಶ್ರೀಕೃಷ್ಣ ಮಠದಲ್ಲಿ ವಿಟ್ಲಪಿಂಡಿ ಮಹೋತ್ಸವ (Vitla Pindi Mahotsav) ನಡೆಯಲಿದ್ದು, ನವಗ್ರಹ ಕಿಂಡಿ ಎದುರು ಭಕ್ತರಿಗೆ ಅರ್ಘ್ಯ ಪ್ರಧಾನಕ್ಕೆ‌ ವ್ಯವಸ್ಥೆ ಮಾಡಲಾಗಿದೆ. ನಿನ್ನೆ ಮಧ್ಯರಾತ್ರಿ ಶ್ರೀಕೃಷ್ಣನಿಗೆ ಮತ್ತು ಚಂದ್ರನಿಗೆ ಪರ್ಯಾಯ ಶ್ರೀಗಳಿಂದ ಅರ್ಘ್ಯ ಸಮರ್ಪಿಸಲಾಯಿತು. ರಥದಲ್ಲಿ ಮೃಣ್ಮಯ ಮೂರ್ತಿಯನ್ನಿಟ್ಟು ವೈಭವದ ರಥೋತ್ಸವ ನಡೆಯಲಿದೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.