ಉಡುಪಿ: ತಂದೆಯ ಜೊತೆ ಸೇರಿ ಬೃಹತ್ ಹೆಬ್ಬಾವು ಹಿಡಿದ ಮಗ; ಇಲ್ಲಿದೆ ವಿಡಿಯೋ
ಖ್ಯಾತ ಉರಗತಜ್ಞ ಸುಧೀಂದ್ರ ಐತಾಳ್ ಜೊತೆ ಮಗ ಧೀರಜ್ ಎಂಬಾತ ತಂದೆಯ ಜೊತೆ ಸೇರಿ ಹೆಬ್ಬಾವ(Python)ನ್ನು ಹಿಡಿದಿದ್ದಾನೆ. ಬಾಲಕನ ಸಾಹಸದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.
ಉಡುಪಿ, ನ.22: ಜಿಲ್ಲೆಯ ಬ್ರಹ್ಮಾವರ(Brahmavar) ತಾಲೂಕಿನ ಸಾಲಿಗ್ರಾಮದ ದೇವಾಡಿಗರಬೆಟ್ಟು ಗ್ರಾಮದಲ್ಲಿ ಬೃಹತ್ ಹೆಬ್ಬಾವೊಂದು ಕಾನಿಸಿಕೊಂಡಿದೆ. ಖ್ಯಾತ ಉರಗತಜ್ಞ ಸುಧೀಂದ್ರ ಐತಾಳ್ ಜೊತೆ ಮಗ ಧೀರಜ್ ಎಂಬಾತ ತಂದೆಯ ಜೊತೆ ಸೇರಿ ಹೆಬ್ಬಾವ(Python)ನ್ನು ಹಿಡಿದಿದ್ದಾನೆ. ಬಾಲಕನ ಸಾಹಸದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಇನ್ನು ಸುಧೀಂದ್ರ ಐತಾಳ್ ಅವರ ಮಗ ಧೀರಜ್ ಐತಾಳ್, ಏಳನೇ ತರಗತಿ ಕಲಿಯುತ್ತಿದ್ದಾನೆ. ಈಗಲೇ ತಂದೆಯ ಜೊತೆ ಸೇರಿ ಹಾವು ಹಿಡಿಯಲು ಮುಂದಾಗಿದ್ದು, ತಂದೆಯ ಹಾವು ಹಿಡಿಯುವ ಸಾಹಸ ಕಂಡು ಮಗನು ಹಾವು ಹಿಡಿಯಲು ಕೈಜೋಡಿಸಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ