Ugadi Horoscope 2026: ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ವಿವಾಹ ಯೋಗ ಹಾಗೂ ಹೊಸ ಉದ್ಯೋಗಾವಕಾಶ

Updated on: Mar 11, 2026 | 3:48 PM

2026ರ ಪರಾಭವನಾಮ ಸಂವತ್ಸರದ ಯುಗಾದಿ ಕುಂಭ ರಾಶಿಯವರಿಗೆ ಉತ್ಸಾಹ ಮತ್ತು ಪ್ರಗತಿಯ ವರ್ಷವಾಗಲಿದೆ ಎಂದು ಡಾ. ಬಸವರಾಜ ಗುರೂಜಿ ಭವಿಷ್ಯ ನುಡಿದಿದ್ದಾರೆ. ಸಾಡೆ ಸಾತಿಯ ಕೊನೆಯ ಭಾಗದಲ್ಲಿದ್ದರೂ, ಈ ವರ್ಷದಲ್ಲಿ ಕುಟುಂಬ ಪ್ರಗತಿ, ಆರ್ಥಿಕ ಸುಧಾರಣೆ, ಹೊಸ ಉದ್ಯೋಗಾವಕಾಶಗಳು ಹಾಗೂ ವಿವಾಹ ಯೋಗ ಪ್ರಬಲವಾಗಿವೆ. ಕೆಲವು ಸಣ್ಣ ಆತಂಕಗಳಿದ್ದರೂ, ಶೇ. 70 ಶುಭ ಫಲಗಳಿರುವುದು ವಿಶೇಷ.

2026ರ ಪರಾಭವನಾಮ ಸಂವತ್ಸರದ ಯುಗಾದಿಯು ಕುಂಭ ರಾಶಿಯವರಿಗೆ ಉತ್ಸಾಹ ಮತ್ತು ಪ್ರಗತಿಯ ವರ್ಷ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಭವಿಷ್ಯ ನುಡಿದಿದ್ದಾರೆ. ಧನಿಷ್ಠ, ಶತಭಿಷಾ, ಪೂರ್ವಾಭಾದ್ರ ನಕ್ಷತ್ರಗಳನ್ನೊಳಗೊಂಡ ಈ ರಾಶಿಗೆ ಗುರುವು ಐದರಿಂದ ಆರನೇ ಮನೆಗೆ, ಶನಿ ಎರಡನೇ ಮನೆಯಲ್ಲಿ, ರಾಹು ವ್ಯಯ ಸ್ಥಾನಕ್ಕೆ ಹಾಗೂ ಕೇತು ಆರನೇ ಮನೆಗೆ ಸಾಗಲಿದೆ.

ಸಾಡೆ ಸಾತಿಯ ಕಟ್ಟ ಕಡೆಯ ಭಾಗದಲ್ಲಿದ್ದರೂ, ಈ ವರ್ಷ ಆದಾಯ 6, ವ್ಯಯ 4; ಆರೋಗ್ಯ 8, ಅನಾರೋಗ್ಯ 3; ಸುಖ 7, ದುಃಖ 3ರ ಅನುಪಾತದಲ್ಲಿರುತ್ತವೆ. ಕುಟುಂಬದಲ್ಲಿ ಪ್ರಗತಿ, ಅಣ್ಣತಮ್ಮಂದಿರ ಬೆಂಬಲ, ಆರ್ಥಿಕ ಸ್ಥಿತಿ ಸುಧಾರಣೆ ಹಾಗೂ ಅಧಿಕಾರ ಪ್ರಾಪ್ತಿಯ ಯೋಗವಿದೆ. ಹೊಸ ಉದ್ಯೋಗಾವಕಾಶಗಳು, ವಿಶೇಷವಾಗಿ ರೈಲ್ವೆ, ಎಲೆಕ್ಟ್ರಾನಿಕ್, ಸಾಫ್ಟ್‌ವೇರ್, ವಿದ್ಯುತ್ ಮತ್ತು ನೀರಾವರಿ ಇಲಾಖೆಗಳಲ್ಲಿ ಹೊಸ ಅನುಭವಗಳು ಸಿಗಬಹುದು. ರೈತರು, ಗುತ್ತಿಗೆದಾರರು ಮತ್ತು ವ್ಯಾಪಾರಸ್ಥರಿಗೆ ಉತ್ತಮ ಲಾಭ ದೊರೆಯಲಿದೆ. ವಿವಾಹ ಯೋಗ ಚೆನ್ನಾಗಿದ್ದರೂ, ಪ್ರೇಮ ವ್ಯವಹಾರಗಳಿಗೆ ಈ ವರ್ಷ ಅಷ್ಟು ಅನುಕೂಲಕರವಾಗಿಲ್ಲ. ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ, ಸರ್ಕಾರಿ ನೌಕರರಿಗೆ ಹಳೆ ಬಾಕಿ ವಸೂಲಿ ಹಾಗೂ ಕ್ರೀಡಾಪಟುಗಳಿಗೆ ರಾಷ್ಟ್ರಮಟ್ಟದ ಕೀರ್ತಿ ಪ್ರತಿಷ್ಠೆಗಳು ಲಭಿಸಲಿವೆ. ಒಟ್ಟಾರೆ, ಈ ವರ್ಷ ಶೇ. 70 ಶುಭ ಫಲಗಳನ್ನು ನೀಡಲಿದೆ. ಬುಧವಾರ ಮತ್ತು ಶುಕ್ರವಾರ ಅದೃಷ್ಟದ ದಿನಗಳಾಗಿದ್ದು, ಕೇಸರಿ, ಬೂದು ಮತ್ತು ತಿಳಿ ಬಣ್ಣಗಳು ಮಂಗಳಕರವಾಗಿವೆ. ನಾಗರ ದರ್ಶನ, ನವನಾಗ ಸ್ತೋತ್ರ ಪಠಣ ಮತ್ತು ಅನ್ನದಾನ ಮಾಡುವುದು ಶುಭ ಫಲಗಳನ್ನು ಹೆಚ್ಚಿಸುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಯುಗಾದಿ ಬಳಿಕ 1 ವರ್ಷ ಈ ರಾಶಿಗೆ ಸಾಕಷ್ಟು ಅದೃಷ್ಟ ಕೂಡಿಬರಲಿದೆ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published on: Mar 11, 2026 03:47 PM
Loading...
Unable to load recommendations.
Follow Us
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More