ಕರ್ಕಾಟಕ ರಾಶಿಯವರಿಗೆ ಯುಗಾದಿಯಂದು ಈ ಭಾಗ್ಯ ಖಂಡಿತ ಲಭಿಸುತ್ತದೆ!: ಆದರೆ ಈ ತಪ್ಪು ಎಲ್ಲವನ್ನೂ ನಾಶ ಮಾಡತ್ತದೆ

Updated on: Mar 19, 2026 | 11:44 AM

2026ರ ಯುಗಾದಿ ಭವಿಷ್ಯದ ಪ್ರಕಾರ, ಕರ್ಕಾಟಕ ರಾಶಿಯವರಿಗೆ ಭಾವನಾತ್ಮಕ ಸ್ಥಿರತೆ, ಉದ್ಯೋಗ-ವ್ಯಾಪಾರದಲ್ಲಿ ಹೆಚ್ಚಳವಿದೆ. ಜವಾಬ್ದಾರಿಗಳು ಅಧಿಕವಾಗಲಿದ್ದು, ಹಣಕಾಸು ಹಾಗೂ ಭೂಮಿ ಖರೀದಿಯ ಸಾಧ್ಯತೆಗಳಿವೆ. ಹಿರಿಯರ ಆರೋಗ್ಯ, ಜೀರ್ಣಕ್ರಿಯೆ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಬೇಕು. ಗಣಪತಿ ಆರಾಧನೆ, ಚಂದ್ರ ಮಂತ್ರ ಪಠಣ ಹಾಗೂ ದಾನಗಳು ಪರಿಹಾರಗಳಾಗಿವೆ.

ಬೆಂಗಳೂರು, ಮಾ.19: 2026ರ ಯುಗಾದಿ ದಿನದಂದು ಕರ್ಕಾಟಕ ರಾಶಿಗೆ ಇರುವ ಫಲಗಳ ಬಗ್ಗೆ ಕೆ. ವೆಂಕಟೇಶ್ ಶರ್ಮಾ ಅವರು ವಿವರಿಸಿದ್ದಾರೆ. ಈ ವರ್ಷ ಕರ್ಕಾಟಕ ರಾಶಿಯವರಿಗೆ ಭಾವನಾತ್ಮಕ ಸ್ಥಿರತೆ ಮತ್ತು ಉದ್ಯೋಗ, ವ್ಯಾಪಾರದಲ್ಲಿ ಹೆಚ್ಚಳ ಕಂಡುಬರಲಿದೆ. ಜವಾಬ್ದಾರಿಗಳು ಅಧಿಕವಾಗುವ ಸಾಧ್ಯತೆಗಳಿವೆ. ಹಣಕಾಸು ವಿಚಾರದಲ್ಲಿ ಪ್ರಗತಿ ಕಂಡುಬರಲಿದ್ದು, ಮನೆ ಅಥವಾ ಭೂಮಿ ಖರೀದಿಯ ಸಾಧ್ಯತೆಗಳು ಸಹ ಇವೆ. ಆರೋಗ್ಯದ ವಿಚಾರದಲ್ಲಿ ಕುಟುಂಬದ ಹಿರಿಯರ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಸ್ವಂತ ಆರೋಗ್ಯದಲ್ಲಿ ಜೀರ್ಣಕ್ರಿಯೆ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಎರಡನೇ ಮನೆಯ ಕೇತು ಸ್ವಲ್ಪ ವ್ಯಾಧಿಯನ್ನು ತರಬಹುದಾಗಿದ್ದು, ಗಣಪತಿ ಆರಾಧನೆ ಮಾಡುವುದು ಅನುಕೂಲಕರವಾಗಿದೆ. ಎಂಟನೇ ಮನೆಯ ರಾಹು ಮೃತ್ಯುಭಯವನ್ನು ಸೂಚಿಸುವುದರಿಂದ, ವಾಹನ ಚಾಲನೆಯಲ್ಲಿ ಎಚ್ಚರ ವಹಿಸುವುದು ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ಪರಿಹಾರಗಳಾಗಿ “ಓಂ ಚಂದ್ರಾಯ ನಮಃ” ಮಂತ್ರ ಪಠಣ ಹಾಗೂ ಕಪ್ಪು ಉದ್ದು, ಎಳ್ಳು ಮತ್ತು ಅಕ್ಕಿ ದಾನ ಮಾಡುವುದು ಸೂಕ್ತ. ಸೋಮವಾರ, ಮಂಗಳವಾರ, ಗುರುವಾರಗಳು ಶುಭ ದಿನಗಳಾಗಿದ್ದು, ಬಿಳಿ, ಕೆಂಪು, ಹಳದಿ ಶುಭ ವರ್ಣಗಳಾಗಿವೆ. ವಾಯುವ್ಯ ದಿಕ್ಕು ಹಾಗೂ 2, 3, 9 ಶುಭ ಸಂಖ್ಯೆಗಳಾಗಿವೆ. ಯಾವುದೇ ಶುಭ ಕಾರ್ಯಗಳನ್ನು 2, 7, 11, 16, 20, 23, 25ನೇ ತಾರೀಖುಗಳಲ್ಲಿ ಕೈಗೊಂಡರೆ ಶುಭ ಫಲಗಳು ಪ್ರಾಪ್ತವಾಗುತ್ತವೆ ಎಂದು ಕೆ. ವೆಂಕಟೇಶ್ ಶರ್ಮಾ ಅವರು ತಿಳಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More