‘ಯುಐ’ ಸಿನಿಮಾದಲ್ಲಿ ಎಷ್ಟು ಪರ್ಸೆಂಟ್ ಗ್ರಾಫಿಕ್ಸ್ ಇರಲಿದೆ? ಸತ್ಯ ಹೇಳಿದ ಉಪೇಂದ್ರ
ನಟ ಉಪೇಂದ್ರ ನಟನೆಯ ‘ಯುಐ’ ಸಿನಿಮಾದ ಟೀಸರ್ ಸೆಪ್ಟೆಂಬರ್ 18ರಂದು ಬಿಡುಗಡೆ ಆಗಿದೆ. ಉಪ್ಪಿ ಬರ್ತ್ಡೇ ಪ್ರಯುಕ್ತ ಈ ಟೀಸರ್ ಗಿಫ್ಟ್ ಆಗಿ ಸಿಕ್ಕಿದೆ. ಆದರೆ, ಟೀಸರ್ನಲ್ಲಿ ಯಾವುದೇ ದೃಶ್ಯಗಳನ್ನು ತೋರಿಸಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಉಪೇಂದ್ರ ಅವರು ತಿಳಿಸಿದ್ದಾರೆ.
ನಟ ಉಪೇಂದ್ರ ನಟನೆಯ ‘ಯುಐ’ ಸಿನಿಮಾದ (UI Movie) ಟೀಸರ್ ಸೆಪ್ಟೆಂಬರ್ 18ರಂದು ಬಿಡುಗಡೆ ಆಗಿದೆ. ಉಪ್ಪಿ ಬರ್ತ್ಡೇ ಪ್ರಯುಕ್ತ ಈ ಟೀಸರ್ ಗಿಫ್ಟ್ ಆಗಿ ಸಿಕ್ಕಿದೆ. ಆದರೆ, ಟೀಸರ್ನಲ್ಲಿ ಯಾವುದೇ ದೃಶ್ಯಗಳನ್ನು ತೋರಿಸಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಉಪೇಂದ್ರ ಅವರು ತಿಳಿಸಿದ್ದಾರೆ. ‘ಒಂದು ಸತ್ಯ ಹೇಳಿ ಬಿಡ್ತೀನಿ. ಈ ಚಿತ್ರದಲ್ಲಿ ಶೇ. 90 ಗ್ರಾಫಿಕ್ಸ್ ಇದೆ. ಬೇರೆ ಬೇರೆ ಕಡೆಗಳಲ್ಲಿ ಇದರ ಕೆಲಸ ನಡೆಯುತ್ತಿದೆ. ಅದು ಮುಗಿಯೋವರೆಗೂ ಏನನ್ನೂ ತೋರಿಸೋಕೆ ಆಗಲ್ಲ. ಈ ಮಧ್ಯೆ ಬರ್ತ್ಡೇ ಬಂತು. ಈ ಕಾರಣದಿಂದ ಅಭಿಮಾನಿಗಳ ತಲೆಗೆ ಕೆಲಸ ಕೊಡಲು ನಾನು ಈ ಟೀಸರ್ ರಿಲೀಸ್ ಮಾಡಿದ್ದೇನೆ’ ಎಂದಿದ್ದಾರೆ ಉಪೇಂದ್ರ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us