ದರ್ಶನ್ಗೆ ವಿಶೇಷ ಆತಿಥ್ಯ, ಜೈಲು ವ್ಯವಸ್ಥೆಯ ವೈಫಲ್ಯ: ಉಮೇಶ್ ಬಣಕಾರ್
ಕೊಲೆ ಆರೋಪಿ, ನಟ ದರ್ಶನ್ ತೂಗುದೀಪ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ದೊರಕಿರುವ ಘಟನೆ ಬಗ್ಗೆ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಆರೋಪಿ, ನಟ ದರ್ಶನ್ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ದೊರೆತ ಪ್ರಕರಣ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ವಿಶೇಷ ಆತಿಥ್ಯದ ಬಗ್ಗೆ ಇದೀಗ ಮೂರು ಪ್ರಕರಣಗಳು ದಾಖಲಾಗಿದ್ದು, ಪ್ರಕರಣದ ತನಿಖೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ. ಆದರೆ ಈ ವಿಶೇಷ ಆತಿಥ್ಯ ಪ್ರಕರಣವನ್ನು ಬೇರೆ ಕೋನದಲ್ಲಿಯೂ ಕೆಲವರು ಗಮಿಸಿದ್ದಾರೆ. ಪ್ರಕರಣದ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ‘ಇದು ದರ್ಶನ್ ತಪ್ಪಲ್ಲ, ಬದಲಿಗೆ ಜೈಲು ವ್ಯವಸ್ಥೆಯಲ್ಲಿರುವ ಲೋಪ’ ಎಂದಿದ್ದಾರೆ. ಅಲ್ಲದೆ ದರ್ಶನ್ ಮನವಿ ಮಾಡಿದಂತೆ ಮನೆ ಊಟ ಕೊಟ್ಟಿದ್ದಿದ್ದರೆ ಹೀಗೆ ಆಗುತ್ತಿರಲಿಲ್ಲವೇನೋ ಎಂಬ ಅಭಿಪ್ರಾಯವನ್ನೂ ಸಹ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos