ಪಾಕ್ ಸ್ಪಿನ್ನರ್ನ ಬೌಲಿಂಗ್ ಆ್ಯಕ್ಷನ್ ಕಾನೂನು ಬದ್ಧವೇ? ಅಂಪೈರ್ ಹೇಳಿದ್ದೇನು?
Usman Tariq's bowling action: ಉಸ್ಮಾನ್ ತಾರಿಖ್ ಅವರ ಬೌಲಿಂಗ್ ಶೈಲಿಯ ಬಗ್ಗೆ ಮಾತನಾಡಿದ ಅನಿಲ್ ಚೌಧರಿ, ಅವರ ಬೌಲಿಂಗ್ನಲ್ಲಿ ಯಾವುದೇ ತಪ್ಪು ಅಥವಾ ಅನುಮಾನಾಸ್ಪದತೆಯನ್ನು ಕಂಡು ಬರುತ್ತಿಲ್ಲ. ತಾರಿಕ್ ಅವರ ಬೌಲಿಂಗ್ ಶೈಲಿ ಸ್ವಲ್ಪ ಸೈಡ್-ಆರ್ಮ್ ಆಗಿದ್ದು, ಅವರು ಚೆಂಡನ್ನು ಎಸೆಯಲು ತುಸು ವಿಳಂಬ ಮಾಡುತ್ತಿದ್ದಾರೆ ಅಷ್ಟೇ. ಆದಾಗ್ಯೂ, ಅವರು ಎಲ್ಲಾ ಚೆಂಡುಗಳನ್ನು ಒಂದೇ ರೀತಿಯಲ್ಲಿ ಬೌಲ್ ಮಾಡುತ್ತಿದ್ದಾರೆ.
ಪಾಕಿಸ್ತಾನ್ ತಂಡದ ಸ್ಪಿನ್ನರ್ ಉಸ್ಮಾನ್ ತಾರಿಖ್ ಅವರ ಬೌಲಿಂಗ್ ಆ್ಯಕ್ಷನ್ ಚರ್ಚೆಗೆ ಕಾರಣವಾಗಿದೆ. ಲಾಹೋರ್ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಉಸ್ಮಾನ್ ತಾರಿಖ್ ಎಸೆತದಲ್ಲಿ ಆಸ್ಟ್ರೇಲಿಯಾ ದಾಂಡಿಗ ಕ್ಯಾಮರೋನ್ ಗ್ರೀನ್ ಔಟಾಗಿದ್ದರು. ಹೀಗೆ ಔಟಾಗಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ್ದ ಗ್ರೀನ್ ಪಾಕ್ ಸ್ಪಿನ್ನರ್ನ ಬೌಲಿಂಗ್ ಆ್ಯಕ್ಷನ್ ಬಗ್ಗೆ ಪ್ರಶ್ನೆಗಳೆನ್ನೆತ್ತಿದ್ದರು.
ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲೂ ಉಸ್ಮಾನ್ ತಾರಿಖ್ ಅವರ ಬೌಲಿಂಗ್ ಶೈಲಿ ಬಗ್ಗೆ ಚರ್ಚೆ ಶುರುವಾಗಿತ್ತು. ಇದೀಗ ಈ ಚರ್ಚೆಗಳಿಗೆ ಭಾರತದ ಅಂಪೈರ್ ಅನಿಲ್ ಚೌಧರಿ ತೆರೆ ಎಳೆದಿದ್ದಾರೆ.
ಉಸ್ಮಾನ್ ತಾರಿಖ್ ಅವರ ಬೌಲಿಂಗ್ ಶೈಲಿಯ ಬಗ್ಗೆ ಮಾತನಾಡಿದ ಅನಿಲ್ ಚೌಧರಿ, ಅವರ ಬೌಲಿಂಗ್ನಲ್ಲಿ ಯಾವುದೇ ತಪ್ಪು ಅಥವಾ ಅನುಮಾನಾಸ್ಪದತೆಯನ್ನು ಕಂಡು ಬರುತ್ತಿಲ್ಲ. ತಾರಿಕ್ ಅವರ ಬೌಲಿಂಗ್ ಶೈಲಿ ಸ್ವಲ್ಪ ಸೈಡ್-ಆರ್ಮ್ ಆಗಿದ್ದು, ಅವರು ಚೆಂಡನ್ನು ಎಸೆಯಲು ತುಸು ವಿಳಂಬ ಮಾಡುತ್ತಿದ್ದಾರೆ ಅಷ್ಟೇ. ಆದಾಗ್ಯೂ, ಅವರು ಎಲ್ಲಾ ಚೆಂಡುಗಳನ್ನು ಒಂದೇ ರೀತಿಯಲ್ಲಿ ಬೌಲ್ ಮಾಡುತ್ತಿದ್ದಾರೆ.
ಐಸಿಸಿ ಬೌಲಿಂಗ್ ಮಾರ್ಗಸೂಚಿಗಳ ಪ್ರಕಾರ, ತಮ್ಮ ತೋಳನ್ನು ಬಗ್ಗಿಸುವುದಿಲ್ಲವಾದ್ದರಿಂದ, ಬೌಲಿಂಗ್ ಶೈಲಿ ಸರಿಯಾಗಿದೆ. ಬೌಲಿಂಗ್ ಶೈಲಿ ಸ್ವಲ್ಪ ವಿಭಿನ್ನವಾಗಿದ್ದರೂ, ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅಂಪೈರ್ ಅನಿಲ್ ಚೌಧರಿ ಹೇಳಿದ್ದಾರೆ.
RSS ಪಥಸಂಚಲನಕ್ಕೆ ಕೊನೆ ಕ್ಷಣದಲ್ಲಿ ಸರ್ಕಾರ ಅನುಮತಿ ನೀಡಿದೆ ಎಂದ ಅಶೋಕ್
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ಕಿರಿಕ್; ಎಳೆಎಳೆಯಾಗಿ ವಿವರಿಸಿದ ಆಪ್ತ ವೇಲು
ದರ್ಶನ್ ಹೊರಗೆ ಬರೋದು ವಿಜಯಲಕ್ಷ್ಮಿಗೆ ಇಷ್ಟ ಇಲ್ವಾ? ಲಾಯರ್ ಪ್ರತಿಕ್ರಿಯೆ
ಪರಿಷತ್ ಬಿಜೆಪಿ ಅಭ್ಯರ್ಥಿ ಸುರೇಶ್ ನಡೆಗೆ ಶಾಸಕ ಬಿ.ಪಿ.ಹರೀಶ್ ಆಕ್ರೋಶ

