ಬಡರಾಷ್ಟ್ರಗಳಿಗೆ ಕೋವಿಡ್ ಮಾತ್ರೆಗಳನ್ನು ಅತ್ಯಂತ ಕಡಿಮೆ ಬೆಲೆಗೆ ರವಾನಿಸಲು ಸಿದ್ಧವಾಯಿತು ದೊಡ್ಡಣ್ಣ ಅಮೆರಿಕ!
ಲಭ್ಯವಾಗಿರುವ ಮಾಹಿತಿ ಪ್ರಕಾರ ಮರ್ಕ್ ಕಂಪನಿಯ ಅಗ್ಗದ ಕೋವಿಡ್ ಮಾತ್ರೆಗಳನ್ನು ಬಡರಾಷ್ಟ್ರಗಳಿಗೆ ಕಳಿಸಲಾಗುತ್ತಿದೆ. ಮೊಲ್ನುಪಿರಾವಿರ್ ಆಂಟಿ ವೈರಲ್ ಡ್ರಗ್ ಕಡಿಮೆ ಬೆಲೆಯಲ್ಲಿ ಮಾರುವಂತೆ ವಿಶ್ವಸಂಸ್ಥೆಯಿಂದ ಬೆಂಬಲಿತ ಏಜೆನ್ಸಿಯೊಂದು ಬೇರೆ ಬೇರೆ ದೇಶಗಳಲ್ಲಿರುವ 30 ಫಾರ್ಮಾಸ್ಯೂಟಿಕಲ್ ಕಂಪನಿಗಳೊಂದಿಗೆ ಕಳೆದ ಡಿಸೆಂಬರ್ ನಲ್ಲಿ ಒಪ್ಪಂದವೊಂದನ್ನು ಮಾಡಿಕೊಂಡಿದೆ.
ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೇರಿಕ ಕೋವಿಡ್ನಂಥ ಸಾಂಕ್ರಾಮಿಕ ಪಿಡುಗು, ಅಥವಾ ಸುನಾಮಿ ಇಲ್ಲವೇ ಬೇರೆ ಬಗೆಯ ನೈಸರ್ಗಿಕ ವಿಕೋಪಗಳು ಉಂಟಾದಾಗ ತನ್ನ ಔದಾರ್ಯವನ್ನು ಪ್ರದರ್ಶಿಸಲು ಮುಂದಾಗುತ್ತದೆ. ಪೀಡಿತ ಪ್ರದೇಶಗಳಿಗೆ ಹಣಕಾಸಿನ ನೆರವು, ಔಷಧಿ, ಆಹಾರ ಸಾಮಗ್ರಿಗಳನ್ನು ಕಳಿಸಿ ತನಗೆ ನಿಜಕ್ಕೂ ಕಾಳಜಿ ಇದೆ ಅನ್ನುವುದನ್ನು ತೋರಿಸಿಕೊಳ್ಳುತ್ತದೆ. ಇದನ್ನು ಯಾಕೆ ಹೇಳಬೇಕಾಗಿದೆ ಎಂದರೆ, ಬಡರಾಷ್ಟ್ರಗಳಿಗೆ ಅಮೇರಿಕ ಕೋವಿಡ್ ಮಾತ್ರೆಗಳನ್ನು ಅತ್ಯಂತ ಕಡಿಮೆ ದರದಲ್ಲಿ ನೀಡಲು ಆರಂಭಿಸಿದೆ. ಅಮೇರಿಕ ತನ್ನಲ್ಲಿ ತಯಾರಾಗುವ ಕೊವಿಡ್ ಲಸಿಕೆಗಳನ್ನು ಶ್ರೀಮಂತ ರಾಷ್ಟ್ರಗಳಿಗೆ ಮಾರುತ್ತದೆ ಅದರೆ, ಮಾತ್ರೆಗಳನ್ನು ತೃತೀಯ ಜಗತ್ತಿನ ದೇಶಗಳಿಗೆ ಉಚಿತವಾಗಿ ಇಲ್ಲವೇ ನಾಮಿನಲ್ ದರಕ್ಕೆ ಕಳಿಸುತ್ತದೆ. ಈ ದೇಶದ ತಾರತಮ್ಯ ಧೋರಣೆಯನ್ನು ಗಮನಿಸಿ! ಅಂತರರಾಷ್ಟ್ರೀಯ ಕಾಳಜಿ ಎಂಬ ಟ್ಯಾಗ್ ಲೈನ್ ನೊಂದಿಗೆ ಮಾತ್ರೆಗಳು ಅಭಿವೃದ್ಧಿ ಹೊಂದದ ರಾಷ್ಟ್ರಗಳಿಗೆ ರವಾನೆಯಾಗುತ್ತಿವೆ.
ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಮರ್ಕ್ ಕಂಪನಿಯ ಅಗ್ಗದ ಕೋವಿಡ್ ಮಾತ್ರೆಗಳನ್ನು ಬಡರಾಷ್ಟ್ರಗಳಿಗೆ ಕಳಿಸಲಾಗುತ್ತಿದೆ. ಮೊಲ್ನುಪಿರಾವಿರ್ ಆಂಟಿ ವೈರಲ್ ಡ್ರಗ್ ಕಡಿಮೆ ಬೆಲೆಯಲ್ಲಿ ಮಾರುವಂತೆ ವಿಶ್ವಸಂಸ್ಥೆಯಿಂದ ಬೆಂಬಲಿತ ಏಜೆನ್ಸಿಯೊಂದು ಬೇರೆ ಬೇರೆ ದೇಶಗಳಲ್ಲಿರುವ 30 ಫಾರ್ಮಾಸ್ಯೂಟಿಕಲ್ ಕಂಪನಿಗಳೊಂದಿಗೆ ಕಳೆದ ಡಿಸೆಂಬರ್ ನಲ್ಲಿ ಒಪ್ಪಂದವೊಂದನ್ನು ಮಾಡಿಕೊಂಡಿದೆ.
ಮಾಹಿತಿಯ ಪ್ರಕಾರ ಈ ಮಾತ್ರೆಯು ಸೋಂಕಿತರನ್ನು ಅಸ್ಪತ್ರೆಗೆ ಸೇರಿಸುವ ಮತ್ತು ಸೋಂಕಿನಿಂದಾಗುವ ಸಾವಿನ ಪ್ರಮಾಣವನ್ನು ಶೇಕಡಾ 30 ರಷ್ಟು ಕಡಿಮೆ ಮಾಡುತ್ತದೆ. ಅದರೆ, ಈ ಚಿಕಿತ್ಸೆಯ ಒಂದು ಕೋರ್ಸ್ ನ ವೆಚ್ಚ ಸುಮಾರು ರೂ. 50,000 ಆಗುತ್ತದೆ. ಬಡರಾಷ್ಟ್ರಗಳ ಬಡ ನಾಗರಿಕರು ಅಷ್ಟು ಹಣವನ್ನು ಎಲ್ಲಿಂದ ತಂದಾರು?
ಹಾಗಾಗಿ ಈ ಏಜೆನ್ಸಿಯು ಒಂದು ಕೋರ್ಸಿನ ವೆಚ್ಚವನ್ನು ರೂ. 1,500 ಗಳಿಗೆ ತಗ್ಗಿಸುವಂತೆ ಮನವೊಲಿಸಿ ಒಪ್ಪಂದವನ್ನೂ ಮಾಡಿಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ (WHO) ಕೋವಿಡ್ ರೋಗವು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯೆಂದು ವರ್ಗೀಕೃತಗೊಂಡಿರುವುದು ತೆರವುಗೊಳ್ಳದ ಹೊರತು ಮರ್ಕ್ ಕಂಪನಿಗೆ ಯಾವುದೇ ರೀತಿಯ ರಾಜಧನ ಸಿಗುವುದಿಲ್ಲ.
ಮರ್ಕ್ ಕಂಪನಿಯು ಎಷ್ಟು ಡೋಸ್ಗಳನ್ನು ತಯಾರಿಸಲಿದೆ ಎಂದು ಖಚಿತಪಟ್ಟಿಲ್ಲವಾದರೂ, ಅಭಿವೃದ್ಧಿಶೀಲ ರಾಷ್ಟ್ರಗಳ ಬೇಡಿಕೆಗೆ ಸಾಕಾಗುವಷ್ಟು ಡೋಸ್ಗಳನ್ನು ಅದು ತಯಾರಿಸಲಿದೆ.
ಹೊಸ ಡೀಲ್ ಹೊರತಾಗಿ ಮರ್ಕ್ ಕಂಪನಿಯು ಡಾ ರೆಡ್ಡೀಸ್ ಲ್ಯಾಬೊರೇಟೊರೀಸ್ ಕಂಪನಿಯೂ ಸೇರಿದಂತೆ ಭಾರತದ 8 ಫಾರ್ಮಾಸ್ಯೂಟಿಕಲ್ ಕಂಪನಿಗಳ ಜೊತೆ ಪರವಾನಗಿ ಒಪ್ಪಂದಗಳನ್ನೂ ಮಾಡಿಕೊಂಡಿದೆ.
ಇದನ್ನೂ ಓದಿ: ಪುಷ್ಪ ಸಿನಿಮಾದಿಂದ ಸ್ಫೂರ್ತಿ ಪಡೆದು ಅಪ್ರಾಪ್ತರಿಂದ ಕೊಲೆ; ಫೇಮಸ್ ಆಗಲೆಂದು ಹತ್ಯೆಯ ವಿಡಿಯೋ ಅಪ್ಲೋಡ್ ಮಾಡಲು ಪ್ಲಾನ್!