ಅಪ್ಪ ಅಮ್ಮನಿಂದ ಎಲ್ಲವನ್ನೂ ಕಸಿದು ಮನೆಯಿಂದ ಹೊರಹಾಕಿದ ಮಗ, ಜೀವನಾಂಶ ಕೇಳುತ್ತಿರುವ ವೃದ್ಧರು

Updated on: Aug 06, 2025 | 6:36 PM

ಮಗನಿಂದ ಜೀವನಾಂಶ ಬೇಕೆಂದು ಅಖೀಲಾ ಹೇಳುತ್ತಾರೆ. ಸಾಮಾನ್ಯವಾಗಿ ಡಿವೋರ್ಸ್ ಆದಾಗ ಗಂಡನಾದವನು ಹೆಂಡತಿಗೆ ಜೀವನಾಂಶ ಕೊಡಬೇಕೆಂದು ಕೋರ್ಟ್ ಹೇಳುತ್ತದೆ. ಇಲ್ಲಿ ತಂದೆ ತಾಯಿಗಳು ಮಗನಿಂದ ಜೀವನಾಂಶ ಕೇಳುತ್ತಿದ್ದಾರೆ. ಅವರು ಕೇಳುತ್ತಿರೋದ್ರಲ್ಲಿ ತಪ್ಪೇನೂ ಇಲ್ಲ. ಜೀವನವಿಡೀ ಮಕ್ಕಳಿಗಾಗಿ ಗಾಣದೆತ್ತಿನಂತೆ ದುಡಿಯುವ ತಂದೆತಾಯಿಗಳು ಮುಪ್ಪಿನ ಪ್ರಾಯದಲ್ಲಿ ಬಯಸುವುದಾದರೂ ಏನು? ಎರಡ್ಹೊತ್ತಿನ ಊಟ ಮತ್ತು ಮಲಗಲು ಒಂದಷ್ಟು ಜಾಗ.

ದಾವಣಗೆರೆ, ಆಗಸ್ಟ್ 6: ಇಂಥ ಮಕ್ಕಳೂ ಇರುತ್ತಾರೆ. ಈ ವೃದ್ಧ ದಂಪತಿಯ ಮಾತು ಕೇಳಿದರೆ, ಮನಸ್ಸು ವ್ಯಾಕುಲಗೊಳ್ಳುತ್ತದೆ. ಮಾಧ್ಯಮಗಳೊಂದಿಗೆ ಮಾತಾಡುತ್ತಿರುವ ಇವರ ಹೆಸರು ಅಖೀಲಾ (Akheela) ಮತ್ತು ಪಕ್ಕದಲ್ಲಿ ನಿಂತಿರುವ ಪತಿಯ ಹೆಸರು ಚಮನ್ ಸಾಬ್. ಜಿಲ್ಲೆಯ ಕೊಡಗಾನೂರುನವರಾಗಿರುವ ಇವರ ಏಕೈಕ ಪುತ್ರ ಅಕ್ರಂ ಇಬ್ಬರನ್ನೂ ಹೊರಹಾಕಿದ್ದಾನೆ. ತಮಗಿದ್ದ ಅಸ್ತಿಯನ್ನೆಲ್ಲ ಮಾರಿ ಮಗನಿಗೆ ಕೊಟ್ಟರೆ ಅವನು ತನ್ನ ಹೆಂಡತಿಯ ಜೊತೆ ಸೇರಿ ಕೊಡಬಾರದ ಕಷ್ಟವನ್ನೆಲ್ಲ ಕೊಟ್ಟಿದ್ದಾನೆ. ಹೆತ್ತ ತಾಯಿಯ ಮೇಲೆ ಕೈ ಮಾಡುತ್ತಾನೆಂದರೆ ಅಕ್ರಂನಲ್ಲಿ ಯಾವಮಟ್ಟಿಗೆ ದುಷ್ಟತನ ಮತ್ತ ನೀಚತನ ಮೇಳೈಸಿವೆ ಅಂತ ಅರ್ಥಮಾಡಿಕೊಳ್ಳಬಹುದು. ಮಧುಮೇಹ ಮತ್ತು ಬಿಪಿಯಿಂದ ಬಳಲುತ್ತಿರುವ ತಾವಿಬ್ಬರೂ ಸರ್ಕಾರದಿಂದ ಸಿಗುವ ₹ 4,000 ಮಾಶಾಸದಿಂದ ಹೇಗೇ ಬದುಕೋದು ಸಾಧ್ಯ ಎಂದು ಅಖೀಲಾ ಪ್ರಶ್ನಿಸುತ್ತಾರೆ.

ಇದನ್ನೂ ಓದಿ:  ಬೆಂಗಳೂರಿನಲ್ಲಿ ಮನಕಲಕುವ ಘಟನೆ: ಪುತ್ರ ವೃದ್ಧಾಶ್ರಮ ಸೇರಿಸಿದ್ದಕ್ಕೆ ನೊಂದು ವೃದ್ಧ ದಂಪತಿ ಆತ್ಮಹತ್ಯೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ