ರೈತರ ಮಕ್ಕಳಿಗೆ ಯಾಕಯ್ಯ ಹೆಣ್ಣು ಕೊಡಲ್ಲ? ನಾನು ಮದುವೆಯಾಗಿಲ್ವಾ ಅಂತ ಸಿದ್ದರಾಮಯ್ಯ ಹೇಳಿದಾಗ ಸಭಿಕರಿಗೆ ಜೋರು ನಗು!

|

Updated on: Oct 07, 2023 | 6:11 PM

ಕೊರತೆ ಮಳೆಯಿಂದ ರೈತರಿಗೆ ಈ ವರ್ಷ ಎದುರಾಗಿರುವ ಸಂಕಷ್ಟದ ಬಗ್ಗೆ ಮಾತಾಡಿದ ಮುಖ್ಯಮಂತ್ರಿ, ರೈತ ಸಂತೋಷವಾಗಿದ್ದರೆ ಮಾತ್ರ ದೇಶ ಸಂತೋಷವಾಗಿರುತ್ತದೆ ಅವನು ಉದ್ಧಾರವಾದರೆ ದೇಶ ಉದ್ಧಾರವಾದಂತೆ, ಕೃಷಿಯಿಂದಲೇ ದೇಶದ ಜಿಡಿಪಿಗೆ ಹೆಚ್ಚಿನ ದೇಣಿಗೆ ಸಿಗುತ್ತದೆ ಎಂದು ಹೇಳುತ್ತಿದ್ದಂತೆಯೇ ಸಭಿಕರಲ್ಲಿ ಮತ್ತೊಬ್ಬ ವ್ಯಕ್ತಿ ‘ಹೌದಾ ಹುಲಿಯಾ’ ಅಂತ ಜೋರಾಗಿ ಅಬ್ಬರಿಸಿದ!

ಮೈಸೂರು: ಮೈಸೂರಿನಲ್ಲಿ ಇಂದು ಆಯೋಜಿಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ (Basava Jayanti programme) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಭಾಷಣ ಮಾಡುವಾಗ ಸಭಿಕರಲ್ಲಿ ಒಬ್ಬರು ರೈತರ ಮಕ್ಕಳಿಗೆ (children of farmers) ಹೆಣ್ಣು ಕೊಡುತ್ತಿಲ್ಲ ಎಂದು ಹೇಳಿದರು. ಅವರ ಮಾತಿಗೆ ರೇಗಿದ ಸಿದ್ದರಾಮಯ್ಯ, ಹಾಗೆಲ್ಲ ಸುಳ್ಳಾಡಬಾರದು, ರೈತರ ಮಕ್ಕಳಿಗೆ ಹೆಣ್ಣ್ಯಾಕೆ ಕೊಡಲ್ಲ ಅಂತ ಪ್ರಶ್ನಿಸಿದರು. ರೈತರ ಹೆಣ್ಣು ಮಕ್ಕಳು, ಗಂಡು ಮಕ್ಕಳು ಯಾರೂ ಮದುವೆ ಆಗಿಲ್ವಾ? ಓದಿದರೂ ನಿರುದ್ಯೋಗಿಯಾಗುರುವ ಯುವಕನಿಗೆ ಹೆಣ್ಣು ಕೊಡಲ್ಲ ಎಂದ ಸಿದ್ದರಾಮಯ್ಯ, ನಾನೂ ರೈತನ ಮಗನೇ ನಂಗೆ ಮದುವೆಯಾಗಿಲ್ವಾ ಅಂತ ಹೇಳಿದಾಗ ನೆರೆದಿದ್ದ ಜನರೆಲ್ಲ ನಕ್ಕರು. ಕೊರತೆ ಮಳೆಯಿಂದ ರೈತರಿಗೆ ಈ ವರ್ಷ ಎದುರಾಗಿರುವ ಸಂಕಷ್ಟದ ಬಗ್ಗೆ ಮಾತಾಡಿದ ಮುಖ್ಯಮಂತ್ರಿ, ರೈತ ಸಂತೋಷವಾಗಿದ್ದರೆ ಮಾತ್ರ ದೇಶ ಸಂತೋಷವಾಗಿರುತ್ತದೆ ಅವನು ಉದ್ಧಾರವಾದರೆ ದೇಶ ಉದ್ಧಾರವಾದಂತೆ, ಕೃಷಿಯಿಂದಲೇ ದೇಶದ ಜಿಡಿಪಿಗೆ ಹೆಚ್ಚಿನ ದೇಣಿಗೆ ಸಿಗುತ್ತದೆ ಎಂದು ಹೇಳುತ್ತಿದ್ದಂತೆಯೇ ಸಭಿಕರಲ್ಲಿ ಮತ್ತೊಬ್ಬ ವ್ಯಕ್ತಿ ‘ಹೌದಾ ಹುಲಿಯಾ’ ಅಂತ ಜೋರಾಗಿ ಅಬ್ಬರಿಸಿದ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ