Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರದುರ್ಗದ ಕಾಂಗ್ರೆಸ್ ಕಾರ್ಯಕರ್ತರಿಗೆ ಹೆಲಿಪ್ಯಾಡ್ ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸತ್ಕರಿಸುವ ಕಾತುರ

ಚಿತ್ರದುರ್ಗದ ಕಾಂಗ್ರೆಸ್ ಕಾರ್ಯಕರ್ತರಿಗೆ ಹೆಲಿಪ್ಯಾಡ್ ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸತ್ಕರಿಸುವ ಕಾತುರ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 06, 2023 | 2:52 PM

ಅಲ್ಲಿದ್ದ ಸುಮಾರು 20 ಕಾರ್ಯಕರ್ತರಿಗೆ ಸಿದ್ದರಾಮಯ್ಯ ಜೊತೆ ಕೆಮೆರಾದ ಫ್ರೇಮ್ ನಲ್ಲಿ ಬರುವ ಉಮೇದಿ. ಅವರೊಂದಿಗೆ ನಡೆಯುವುದು ಒಂದು ಸಾಧನೆ, ಗೌರವ ಎಂಬಂತೆ ಕಾರ್ಯಕರ್ತರು ವರ್ತಿಸುವುದು ನಿಚ್ಚಳವಾಗಿ ಗೊತ್ತಾಗುತ್ತದೆ. ಪ್ರಾಯಶ: ಸಿದ್ದರಾಮಯ್ಯ ಇದನ್ನೆಲ್ಲ ಇಷ್ಟಪಡುತ್ತಾರೆ. ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿ ವರ್ಗಕ್ಕೆ ಏನೂ ಮಾಡಲಾಗದ ಸ್ಥಿತಿ, ಅಧಿಕಾರದಲ್ಲಿರುವ ಪಕ್ಷದ ಕಾರ್ಯಕರ್ತರೊಂದಿಗೆ ಯಾರು ತಾನೇ ವೈಮನಸ್ಸು ಕಟ್ಟಿಕೊಳ್ಳಲು ಇಷ್ಟಪಟ್ಟಾರು?

ಚಿತ್ರದುರ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಗರದಲ್ಲಿರುವ ಮುರುಘಾಮಠದ (Murugha Mutt) ಅವರಣದಲ್ಲಿ ನಿರ್ಮಿಸಲಾಗಿದ್ದ ಹೆಲಿಪ್ಯಾಡ್ ನಲ್ಲಿ ಬಂದಿಳಿಯುತ್ತಿದ್ದಂತೆಯೇ ಚಿತ್ರದುರ್ಗ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು (block Congress office-bearers) ಅವರನ್ನು ಉಸಿರಾಡಲು ಕೂಡ ಬಿಡದ ಹಾಗೆ ಬೋಕೆಗಳನ್ನು ನೀಡಿ, ತಲೆಮೇಲೆ ಪೇಟಾಗಳನ್ನಿಟ್ಟು ಸತ್ಕರಿಸಿದರು. ಎಲ್ಲರಿಗೂ ಮುಖ್ಯಮಂತ್ರಿಯ ಕೃಪಾಕಟಾಕ್ಷಕ್ಕೆ ಒಳಗಾಗುವ ತವಕ. ಗಮನಿಸಬೇಕಾದ ಸಂಗತಿಯೆಂದರೆ ಸಿಎಂರನ್ನು ಬರಮಾಡಿಕೊಂಡು ಸತ್ಕರಿಸಲು ಎಲ್ಲರಿಗಿಂತ ಮುಂದೆ ಓಡಿದ್ದು ಮಹಿಳಾ ಕಾರ್ಯಕರ್ತರು. ಅವರು ಸೇರಿದಂತೆ ಅಲ್ಲಿದ್ದ ಸುಮಾರು 20 ಕಾರ್ಯಕರ್ತರಿಗೆ ಸಿದ್ದರಾಮಯ್ಯ ಜೊತೆ ಕೆಮೆರಾದ ಫ್ರೇಮ್ ನಲ್ಲಿ ಬರುವ ಉಮೇದಿ. ಅವರೊಂದಿಗೆ ನಡೆಯುವುದು ಒಂದು ಸಾಧನೆ, ಗೌರವ ಎಂಬಂತೆ ಕಾರ್ಯಕರ್ತರು ವರ್ತಿಸುವುದು ನಿಚ್ಚಳವಾಗಿ ಗೊತ್ತಾಗುತ್ತದೆ. ಪ್ರಾಯಶ: ಸಿದ್ದರಾಮಯ್ಯ ಇದನ್ನೆಲ್ಲ ಇಷ್ಟಪಡುತ್ತಾರೆ. ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿ ವರ್ಗಕ್ಕೆ ಏನೂ ಮಾಡಲಾಗದ ಸ್ಥಿತಿ, ಅಧಿಕಾರದಲ್ಲಿರುವ ಪಕ್ಷದ ಕಾರ್ಯಕರ್ತರೊಂದಿಗೆ ಯಾರು ತಾನೇ ವೈಮನಸ್ಸು ಕಟ್ಟಿಕೊಳ್ಳಲು ಇಷ್ಟಪಟ್ಟಾರು?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ