Mysore Dasara: ದಸರಾ ಉತ್ಸವದ ಮುನ್ನುಡಿಯಾಗಿರುವ ಯುವ ಸಂಭ್ರಮ ಇಂದಿನಿಂದ, ಪ್ರತಿಭೆ ಮೆರೆಯಲು ಕಾಲೇಜು ವಿದ್ಯಾರ್ಥಿಗಳಿಗೆ ಸದವಕಾಶ
Mysore Dasara: ಯುವ ಸಂಭ್ರಮ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹಾದೇವಪ್ಪ ಇಂದು ಸಾಯಂಕಾಲ ಉದ್ಘಾಟಿಸಲಿದ್ದಾರೆ. ಯುವ ಸಂಭ್ರಮ ಕಾರ್ಯಕ್ರಮ ಇಂದಿನಿಂದ ಪ್ರತಿದಿನ ಸಾಯಂಕಾಲ 5 ಗಂಟೆಯಿಂದ 10 ಗಂಟೆಯವರೆಗೆ 8 ದಿನಗಳ ಕಾಲ-ಅಕ್ಟೋಬರ್ 13 ರವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಯುವ ತಂಡಕ್ಕೆ ದಸರಾ ಮುಖ್ಯ ಉತ್ಸವದಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ
ಮೈಸೂರು: ಅಕ್ಟೋಬರ್ ಅಂದಾಕ್ಷಣ ಕನ್ನಡಿಗರ ಮನಸಲ್ಲಿ ಸುಳಿಯೋದು ಸಾಂಸ್ಕೃತಿ ನಗರಿ ಮೈಸೂರಲ್ಲಿ ನಡೆಯುವ ದಸರಾ ಉತ್ಸವ (Dasara Festivities). ನಗರದಲ್ಲಿ ಸಂಭ್ರಮದ ದಸರಾ ಉತ್ಸವಕ್ಕೆ ದಿನಗಣನೆ ಶುರುವಾಗಿದೆ. ಪ್ರತಿಬಾರಿ ದಸರಾ ಉತ್ಸವಕ್ಕೆ ಮುನ್ನುಡಿಯಂತಿರುವ ಯುವ ಸಂಭ್ರಮ (Yuva Sambhrama) ಇಂದಿನಿಂದ ಆರಂಭಗೊಳ್ಳಲಿದ್ದು ಸಿದ್ಧತೆಗಳು ಕೊನೆಯ ಹಂತದಲ್ಲಿವೆ. ಟಿವಿ9 ಕನ್ನಡ ವಾಹಿನಿಯ ಮೈಸೂರು ವರದಿಗಾರ ರಾಮ್ ಯುವ ಸಂಭ್ರಮ ಕುರಿತು ಒಂದು ಪ್ರತ್ಯಕ್ಷ ವರದಿಯನ್ನು ನೀಡಿದ್ದಾರೆ. ಅವರು ಹೇಳುವ ಪ್ರಕಾರ ನಗರದ ನಾನಾ ಕಾಲೇಜುಗಳ ವಿದ್ಯಾರ್ಥಿಗಳಿಗೆ; ಹಾಡುಗಾರಿಕೆ, ನೃತ್ಯ, ಜಾನಪದ ಮೊದಲಾದ ಹಲವು ಸಾಂಸ್ಕೃತಿಕ ಪ್ರಕಾರಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆಯನ್ನು ಕಲ್ಪಿಸುವ ಯುವ ಸಂಭ್ರಮ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹಾದೇವಪ್ಪ (HC Mahadevappa) ಇಂದು ಸಾಯಂಕಾಲ ಉದ್ಘಾಟಿಸಲಿದ್ದಾರೆ. ಯುವ ಸಂಭ್ರಮ ಕಾರ್ಯಕ್ರಮ ಇಂದಿನಿಂದ ಪ್ರತಿದಿನ ಸಾಯಂಕಾಲ 5 ಗಂಟೆಯಿಂದ 10 ಗಂಟೆಯವರೆಗೆ 8 ದಿನಗಳ ಕಾಲ-ಅಕ್ಟೋಬರ್ 13 ರವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಯುವ ತಂಡಕ್ಕೆ ದಸರಾ ಮುಖ್ಯ ಉತ್ಸವದಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ ಎಂದು ರಾಮ್ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ದಸರಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ