ಮೈಸೂರು ದಸರಾ 2023: ಜಂಬೂಸವಾರಿ ವೇಳೆ ಮರಕಳಿಸಲಿದೆ ಗತವೈಭವ, ಏನದು? ಇಲ್ಲಿದೆ ಓದಿ
ಈ ಬಾರಿಯ ಮೈಸೂರು ದಸರಾದ ಜಂಬೂಸವಾರಿ ವಿಶೇಷವಾಗಿರಲಿದೆ. ಕಣ್ಮರೆಯಾಗಿದ್ದ ರಾಜಪೋಷಾಕುಧಾರಿಗಳನ್ನು 2023ರ ಮೈಸೂರು ದಸರಾ ಅಂಬಾರಿ ಮೆರವಣಿಯಲ್ಲಿ ನೋಡಬಹುದಾಗಿದೆ. ಅಷ್ಟಕ್ಕೂ ಈ ರಾಜಪೋಷಾಕುಗಳನ್ನು ಧರಿಸುವವರು ಯಾರು? ಇಲ್ಲಿದೆ ಮಾಹಿತಿ
ಮೈಸೂರು ಅ.06: ಮೈಸೂರು ದಸರಾ (Mysore Dasara) ಪ್ರತಿವರ್ಷ ವಿಜೃಂಭಣೆಯಿಂದ ನಡೆಯುತ್ತದೆ. 2023ರ ವೈಭವದ ಮೈಸೂರು ದಸರಾ ಆಚರಣೆಗೆ ಅರಮನೆ ನಗರಿ ಸಜ್ಜಾಗಿದೆ. ಈಗಾಗಲೆ ವಿವಿಧ ಸಾಂಕೃತಿಕ ಚಟುವಟಿಕೆಗಳು ಆರಂಭವಾಗಿವೆ. ಈ ಬಾರಿ ಜಂಬೂಸವಾರಿ (Jambusavari) ವಿಶೇಷವಾಗಿರಲಿದೆ. ಹೌದು ಕಳೆದು ಹೋಗಿದ್ದ ಗತವೈಭವ ಆಚರಣೆ ಈ ಬಾರಿಯ ದಸರಾ ಉತ್ಸವದಲ್ಲಿ ಮರುಕಳಿಸಲಿದೆ. ಜಂಬೂಸವಾರಿ ವೇಳೆ ಪೊಲೀಸರು ರಾಜಪರಂಪರೆಯ ಪೋಷಕುಗಳನ್ನು ಧರಿಸಿ ಅಂಬಾರಿಯೊಂದಿಗೆ ಸಾಗಲಿದ್ದಾರೆ.
ಮೈಸೂರು ದಸರಾ ಆಚರಣೆಗೆ 400 ವರ್ಷಗಳ ಇತಿಹಾಸ ಇದೆ. ಮಹರಾಹಜರ ಆಚರಣೆ ವೇಳೆ ರಾಜಪೋಷಾಕುಗಳನ್ನು ಧರಿಸಿ ಆನೆಯೊಂದಿಗೆ ಹೆಜ್ಜೆ ಹಾಕುತ್ತಿದ್ದರು. ಆದರೆ ನಂತರ ದಿನಗಳಲ್ಲಿ ಈ ಪದ್ದತಿಯನ್ನು ಕೈ ಬಿಡಲಾಗಿತ್ತು. ಈ ಬಾರಿಯ ದಸರಾದಲ್ಲಿ ಈ ಪದ್ದತಿ ಮತ್ತೆ ಮರುಕಳಿಸಲಿದೆ.
ಇದನ್ನೂ ಓದಿ: ಇದೇ ಮೊದಲ ಬಾರಿ ಮೈಸೂರು ದಸರಾ ಮಹೋತ್ಸವದ ಪ್ರಾಯೋಜಕತ್ವಕ್ಕೆ ಆಹ್ವಾನ
ಅರಮನೆಯ ಒಳಗಡೆ ಭಾವಚಿತ್ರದಲ್ಲಿ ಮಾತ್ರ ಕಾಣಸಿಗುತ್ತಿದ್ದ ರಾಜಪರಂಪರೆ ಪೋಷಾಕುಧಾರಿಗಳನ್ನು ಲೈವ್ ಆಗಿ ನೋಡಬಹುದಾಗಿದೆ. ಈ ವರ್ಷ ಅದೇ ಮಾದರಿಯಲ್ಲಿ ಜಂಬೂ ಸವಾರಿ ಮೆರವಣಿಗೆ ಮಾಡಲು ನಿರ್ಧರಿಸಲಾಗಿದೆ. ಪೊಲೀಸರು ಪಾರಂಪರಿಕ ಪೋಷಕು ತೊಟ್ಟುಕೊಂಡೆ ಭದ್ರತೆ ನೀಡಲಿದ್ದಾರೆ.
ಪಾರಂಪರಿಕ ಪೋಷಕಗಳು ಈಗಾಗಲೇ ಸಿದ್ದಗೊಂಡಿವೆ. ಅದೇ ರೀತಿ ಕಲಾತಂಡದ ಸದಸ್ಯರು ರಾಜಬಿರುದುಗಳನ್ನು ಹಿಡಿದು ಸಾಗಲಿರುವ ಅಭಿಮನ್ಯು ಜೊತೆ ಸಾಗಲಿದ್ದಾರೆ. ಈ ಹಿಂದೆ ಇದ್ದ ಗ್ರೀನ್ ಲ್ಯಾನ್ಸರ್, ರೆಡ್ ಲ್ಯಾನ್ಸಾರ್, ಗ್ರಿಲ್ ಮೀಸೆ, ಬಿರುದು, ದರ್ಬಾರ್ ಹುಡೋಸ್, ಪ್ಯಾಲೇಸ್ ಜಿಲೋ ಪೋಷಕುಗಳನ್ನು ತಯಾರಿ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:57 am, Fri, 6 October 23