Video: ಆಸ್ಪತ್ರೆಯ ವಾರ್ಡ್ ಒಳಗೆ ಫಿಯಾನ್ಸಿ ಜತೆ ವೈದ್ಯನ ಡ್ಯಾನ್ಸ್
ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಆಸ್ಪತ್ರೆಯ ವಾರ್ಡ್ ಒಳಗೆ ಫಿಯಾನ್ಸಿ ಜತೆ ಡ್ಯುಯೆಟ್ ಹಾಡಿ ಕೆಲಸ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿಯಾ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯ ಕೋಣೆಯಲ್ಲಿ ಇಬ್ಬರೂ ನೃತ್ಯ ಮಾಡಿದ ವಿಡಿಯೋ ವೈರಲ್ ಆದ ಬಳಿಕ ವೈದ್ಯರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಆಸ್ಪತ್ರೆ ಆಡಳಿತವು ಸರ್ಕಾರ ಒದಗಿಸಿದ ಅವರ ವಸತಿ ಸೌಕರ್ಯವನ್ನು ಖಾಲಿ ಮಾಡಿ, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ವಿವರವಾದ ವರದಿಯನ್ನು ಸಲ್ಲಿಸಿತು
ಲಕ್ನೋ, ನವೆಂಬರ್ 21: ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಆಸ್ಪತ್ರೆಯ ವಾರ್ಡ್ ಒಳಗೆ ಫಿಯಾನ್ಸಿ ಜತೆ ಡ್ಯುಯೆಟ್ ಹಾಡಿ ಕೆಲಸ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿಯಾ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯ ಕೋಣೆಯಲ್ಲಿ ಇಬ್ಬರೂ ನೃತ್ಯ ಮಾಡಿದ ವಿಡಿಯೋ ವೈರಲ್ ಆದ ಬಳಿಕ ವೈದ್ಯರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಆಸ್ಪತ್ರೆ ಆಡಳಿತವು ಸರ್ಕಾರ ಒದಗಿಸಿದ ಅವರ ವಸತಿ ಸೌಕರ್ಯವನ್ನು ಖಾಲಿ ಮಾಡಿ, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ವಿವರವಾದ ವರದಿಯನ್ನು ಸಲ್ಲಿಸಿತು. ಇತ್ತೀಚೆಗೆ ಎರಡು ವರ್ಷಗಳ ಒಪ್ಪಂದದ ಮೇಲೆ ನೇಮಕಗೊಂಡು ಆಸ್ಪತ್ರೆಯ ತುರ್ತು ವಾರ್ಡ್‌ನಲ್ಲಿ ನಿಯೋಜನೆಗೊಂಡಿದ್ದ ಡಾ. ವಕಾರ್ ಸಿದ್ದಿಕಿ, ಆಸ್ಪತ್ರೆಯ ಮೇಲಿನ ಮಹಡಿಯ ಮುಚ್ಚಿದ ಕೋಣೆಯಲ್ಲಿ ಯುವತಿಯೊಂದಿಗೆ ನೃತ್ಯ ಮಾಡುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

